ಸಂವಾದಕ್ಕೆ ಧ್ವನಿಗೂಡಿಸಿರುವವರು ಅನಂತ ಮತ್ತು ವಿ.ರಾ.ಹೆ.. ಒಬ್ಬರು ಚಿತ್ರವನ್ನು ವಿಮರ್ಶಿಸುವುದೇ ತಪ್ಪೇ ? ಎಂಬಂತೆ ತೋರಿದ್ದಾರೆ. ಜತೆಗೆ ವಿ.ರಾ.ಹೆ ಅವರು ಹಿಂದಿ ಕುರಿತು ಕ್ಲಾರಿಫಿಕೇಶನ್ನು ಕೊಟ್ಟಿದ್ದಾರೆ. ಈ ಚರ್ಚೆ ಸಿನಿಮಾ ನಿರ್ಮಾಣ ಕುರಿತು ಚರ್ಚೆ ನಡೆಯಲಿ ಎಂಬುದು ಸಾಂಗತ್ಯದ ಸದಾಶಯ.

ಹಲೋ ಚೇತನಾ ಹಾಗೂ ಬೇಡ ಬಿಡಿ!
ಮೊಟ್ಟ ಮೊದಲನೆಯದಾಗಿ, ನಾನು ಎದ್ದೇಳು ಮಂಜುನಾಥ ನೋಡಿಲ್ಲ, ಈ ವಾರಾಂತ್ಯ ನೋಡಬೇಕೆಂದಿದ್ದೇನೆ. ಅದಕ್ಕೆ ಮೊದಲು ಎರಡು ಮಾತು.

ತಾವುಗಳ ವಿಮರ್ಶೆ ಹಾಗೂ ಚರ್ಚೆಯನ್ನು ಓದಿದೆ. ಎಲ್ಲ ಚಲನ ಚಿತ್ರಗಳನ್ನೂ ಕುರಿತ ಚರ್ಚೆಯಂತೆಯೇ ಇದೂ ಕೂಡ ನಾನಂದುಕೊಂಡ ಹಾಗೆ ಹಾಗೂ ಬಹಳಷ್ಟು ಸಾರಿ ನಾನು ನನ್ನ ಗೆಳೆಯರ ಜೊತೆ, ಚಿತ್ರ ಪ್ರೇಮಿಗಳ ಜೊತೆ ಚರ್ಚಿಸಿದ ಧಾಟಿಯಲ್ಲೇ ಮುಂದುವರೆದು ಕೊನೆಗೊಂದು deadend ನಲ್ಲಿ ನಿಲ್ಲುವ ಸೂಚನೆಗಳು ಕಾಣುತ್ತಿವೆ.

ಈ ವಿಷಯದಲ್ಲಿ ನನ್ನ ಅನುಭವ ಹಾಗೂ ಅನಿಸಿಕೆಯ ಪ್ರಕಾರ, ಚಿತ್ರ ವಿಮರ್ಶೆ ಯಾವತ್ತೂ ಕೂಡ ‘ಇದು ಚಿತ್ರದ ಬಗ್ಗೆ ನನ್ನ ಅನಿಸಿಕೆ’ ಎಂಬ implicit voice ಅನ್ನು ಹೊಂದಿರಬೇಕು. ತದ ನಂತರದ comment ಗಳು ‘ಅಯ್ಯೋ, ನಿಮಗೇಕಿದು ಇಷ್ಟವಾಯ್ತು ಅಥವಾ ಇಷ್ಟವಾಗಲಿಲ್ಲ’ ಎಂದು ಧ್ವನಿಸಿದರೆ ಅದೊಂದು ನಿರಂತರವಾದ ಕೊನೆಗೆ ಯಾವುದೇ ತೀರ್ಮಾನಕ್ಕೂ ಬರಲಾರದಂಥ ವ್ಯರ್ಥ ಪ್ರಯತ್ನವಾಗುವುದಂತೂ ಖಚಿತ. ಏಕೆಂದರೆ ನಾವು ವಿಮರ್ಶಿಸಲು ಹೊರಟಿರುವುದು ಒಂದು ಕಲಾ ಪ್ರಕಾರವನ್ನು. ಕಲಾವಿದನ ಕೃತಿಯನ್ನು ಪ್ರತಿಯೊಬ್ಬ ಕಲಾ ಪ್ರೇಮಿಯೂ ತನ್ನ sensibilities ಗೆ ತಕ್ಕಂತೆ ಅದನ್ನು ಅರ್ಥೈಸಿಕೊಳ್ಳುತ್ತಾನೆ. ಇದು ಒಂದು ರೀತಿಯ greay area ಇದ್ದಂತೆ. ಕೆಲವರಿಗೆ ಇದು ಕಡು ಕಪ್ಪುಬಣ್ಣಕ್ಕೆ ಹೆಚ್ಚು ಸನಿಹವಾಗಿಯೋ, ಮತ್ತು ಕೆಲವರಿಗೆ ಬಿಳಿ ಬಣ್ಣಕ್ಕೆ ಹತ್ತಿರವಾಗಿಯೋ ಕಂಡರೆ ಆಶ್ಚರ್ಯವೂ ಇಲ್ಲ ಅದು ಅವರ ತಪ್ಪೂ ಅಲ್ಲ.

ಮೊನ್ನೆ ಇದೇ ರೀತಿಯ ಚರ್ಚೆಯೊಂದು ನನ್ನ cousin ಹಾಗೂ ನನ್ನ ಮಧ್ಯೆ ನಡೆಯಿತು. ನಾನೆಂದೆ, ‘remake ಆದರೂ ಕೂಡ ಸವಾರಿ ಒಂದು ಒಳ್ಳೆಯ ಚಿತ್ರ’. ಅವನೆಂದ, ‘ಛೀ! ಆ ಚಿತ್ರ ಚೆನ್ನಾಗಿಲ್ಲ. ಕೇವಲ ಒಂದು bike ಮೇಲಿನ ಕೆಲವಾರು ದಿನಗಳ ಪ್ರವಾಸ ಒಬ್ಬ ಮನುಷ್ಯನ ವ್ಯಕ್ತಿತ್ವವನ್ನೇ ಬದಲಾಯಿಸುವುದೆಂದರೇನು? ಸಾಧ್ಯವಾಗದ ಮಾತು’. ಈಗ ಚಿತ್ರ ಚೆನ್ನಾಗಿದೆಯೋ ಇಲ್ಲವೊ ಎಂಬುದಕ್ಕಿಂತ ಮುಖ್ಯವಾದ ಹಾಗೂ basic ಆದ ವಿಷಯವೊಂದು ತಲೆಯೆತ್ತಿತ್ತು. ನಾ ಕೇಳಿದೆ, ‘ಹಾಗಾದರೆ ಮನುಷ್ಯನು ಕೈಗೊಂಡ ಅಂಥದೊಂದು ಏಕಾಂಗಿ ಪ್ರಯಾಣ ಅವನ ವ್ಯಕ್ತಿತ್ವನ್ನು ಬದಲಿಸಲು ಸಾಧ್ಯವೇ ಇಲ್ಲವೆಂದು ನಿನ್ನ ಅನಿಸಿಕೆಯೇ?’. ನನ್ನ cousin ಹೌದೆಂದು ತಲೆಯಾಡಿಸಿದ. ಸರಿಯೆಂದ ನಾನು, ಹಾಗಾದರೆ ಸವಾರಿ ಚಿತ್ರವಾಗಲೀ, Motorcycle Diaries ಯಾಗಲೀ, Into the wild ಆಗಲೀ, Art of Travel ಆಗಲೀ ಆತನಿಗೆ ಇಷ್ಟವಾಗಲು ಸಾಧ್ಯವೇ ಇಲ್ಲವೆಂದುಕೊಂಡೆ. ಅಷ್ಟೆ, ಕೆಲವರಿಗೆ ಇಷ್ಟವಾಗಲಿಲ್ಲ ಎಂದ ಮಾತ್ರಕ್ಕೆ ಅವರಿಗೆ ಅಭಿರುಚಿಯಿಲ್ಲವೆನ್ದರ್ಥವಲ್ಲ, ಅವರ sensibilities ಅದು ಒಗ್ಗದ ಚಿತ್ರವದು ಅಷ್ಟೆ… ಅನಂತ
****
ಹಿಂದಿ ರಾಷ್ಟ್ರಭಾಷೆ ಸ್ಥಾನದಿಂದ ಕೆಳಗಿಳಿದಿದ್ದು ಯಾವಾಗ ಎಂದು ಕೇಳಿದಾರೆ, ಆದರೆ ಅದು ಆ ಸ್ಥಾನಕ್ಕೆ ಏರಿದ್ದಾದರೂ ಯಾವಾಗ, ಹೇಗೆ ಎಂದು ತಿಳಿಯುವ ಮನಸುಮಾಡಿಲ್ಲ. ಭಾರತದ ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರಭಾಷೆ ಎಂಬುದಿಲ್ಲ. ಭಾರತ ಒಂದು ಬಹುಭಾಷಾ ಗಣರಾಜ್ಯ. ಕನ್ನಡ, ತಮಿಳು, ಮಲಯಾಳಂ, ಕೊಂಕಣಿ ಹೀಗೆ ಸಂವಿಧಾನದಲ್ಲಿ ಗುರುತಿಸಿರುವ ಎಲ್ಲಾ 22 (?) ಭಾಷೆಗಳೂ ರಾಷ್ಟ್ರಭಾಷೆಗಳು. ಅದರಲ್ಲಿ ಹಿಂದಿ(ಉತ್ತರಕ್ಕೆ) ಮತ್ತು ಇಂಗ್ಲೀಷ್ (ದಕ್ಷಿಣದ ರಾಜ್ಯಗಳಿಗೆ) official communication laguages. ಹೌದು, ಮೊದಲಿಂದಲೂ ನಮಗೆ ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ಕರ್ತವ್ಯ ಎಂಬ ತಪ್ಪು ನಂಬಿಕೆಯನ್ನು ಬೆಳೆಸಲಾಗಿದೆ. ಬೆಳೆಸಲಾಗುತ್ತಿದೆ. ಹಾಗೇ ಪ್ರಚಾರವೂ ಆಗಿದೆ.

ಪಠ್ಯಪುಸ್ತಕಗಳಲ್ಲೂ ಹೀಗೇ ತಪ್ಪು ಮಾಹಿತಿ ಇದೆ. ಇದು ಹಿಂಬಾಗಿಲ ಮೂಲಕ ಹಿಂದಿ ತುರುಕುವಿಕೆಯ ಪರಿಣಾಮ. ಶಾಲೆಯಲ್ಲಿ ಅಗತ್ಯವಿಲ್ಲದ ಹೊರೆ. ಈ ಹಿಂದಿ ಹೇರಿಕೆಯ ವಿರುದ್ಧ 60 ಅಥವಾ 70ರ ದಶಕದಲ್ಲಿ ಹೋರಾಟ ಮಾಡಿ ಗೆದ್ದಿದ್ದು ತಮಿಳುನಾಡು ಮಾತ್ರ. ಬೇರೆ ಎಲ್ಲಾ ದಕ್ಷಿಣ ರಾಜ್ಯಗಳು ಬಗ್ಗಿಬಿಟ್ಟವು. ಚೇತನಾರಿಗೆ official communication ಮತ್ತು national languages ಮಧ್ಯ ವ್ಯತ್ಯಾಸ ತಿಳಿಯುತ್ತದೆ ಎಂದುಕೊಳ್ಳುತ್ತೇನೆ. ರಾಷ್ಟ್ರಗೀತೆ, ರಾಷ್ಟ್ರಪಕ್ಷಿ ಒಂದೇ ಇದೆ ಎಂದು ಭಾಷೆ ಒಂದೇ ಇರಬೇಕೆಂದಿಲ್ಲ. India is multilingual country. ಚೇತನಾ ಅವರು ಮೊದಲು national language of india ಎಂದು ಗೂಗಲ್ ಮಾಡಿ ಮಾಹಿತಿ ತಿಳಿದುಕೊಳ್ಳುವ ಮನಸ್ಸು ಮಾಡಿದ್ದರೆ ಚೆನ್ನಾಗಿತ್ತು. ಈಗಲೂ ಮಾಡಬಹುದು.
ವಿ.ರಾ.ಹೆ