ಆಮಂತ್ರಣ ಪತ್ರಿಕೆ

Tags

ಶಿಬಿರದಲ್ಲಿ ನಮ್ಮೊಂದಿಗೆ ಅಶೋಕ್ ಕಶ್ಯಪ್ ಮತ್ತು ರೇಖಾರಾಣಿ

Tags

,

ಈಗಾಗಲೇ ನಿಯೋಜಿಸಿರುವಂತೆ ಸಾಂಗತ್ಯ ಏಳನೇ ಚಿತ್ರ ಶಿಬಿರ ಜ.28 ಮತ್ತು 29 ರಂದು ಕುಪ್ಪಳಿಯಲ್ಲಿ ನಡೆಯಲಿದೆ.

ಈ ಬಾರಿ ಐದು ಚಿತ್ರಗಳ ಪ್ರದರ್ಶನ, ಎರಡು ಉಪನ್ಯಾಸ ಹಾಗು ಒಂದು ಮುಕ್ತ ಸಂವಾದವಿರುತ್ತದೆ. ಪ್ರತಿ ಹಂತದಲ್ಲೂ ಸಿನಿಮಾ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವ ದಿಸೆಯಲ್ಲಿ ಇವೆಲ್ಲವೂ ಪೂರಕವಾಗಲಿವೆ.

ಜ. 28 ರ ಬೆಳಗ್ಗೆ 10 ಕ್ಕೆ ಉದ್ಘಾಟನೆ. ನಂತರ “ಸಾಹಿತ್ಯ ಕೃತಿ ಸಿನಿಮಾ ಆಗುವ ಬಗೆ’ ಕುರಿತು ಸಿನಿತಜ್ಞ ಪರಮೇಶ್ ಗುರುಸ್ವಾಮಿ ಅವರು ಮಾತನಾಡುವರು. ನಂತರ ಸ್ವಲ್ಪ ಹೊತ್ತು ಆ ಕುರಿತೇ ಸಂವಾದವಿರಲಿದೆ.

ನಂತರ ಒಂದಿಷ್ಟು ಮಾಹಿತಿಯೊಂದಿಗೆ ಎಂದಿನಂತೆ ಸಿನಿಮಾ ಪ್ರದರ್ಶನ. ಬಳಿಕ ಚರ್ಚೆ. ಮೊದಲ ದಿನದ ಚರ್ಚೆಯಲ್ಲಿ ಪರಮೇಶ್ ಗುರಸ್ವಾಮಿಯವರು ಪಾಲ್ಗೊಂಡರೆ, ಎರಡನೇ ದಿನದ ಚರ್ಚೆಯಲ್ಲಿ ಚಿತ್ರ ನಿರ್ದೇಶಕ ಅಶೋಕ್ ಕಶ್ಯಪ್ ಹಾಗು ಚಿತ್ರ ನಿರ್ಮಾಪಕಿ ರೇಖಾ ರಾಣಿ ಭಾಗವಹಿಸುವರು.

ಜ. 29 ರಂದು ಬೆಳಗ್ಗೆ 9 ಕ್ಕೆ ಆರಂಭ. ಚಿತ್ರ ಪ್ರದರ್ಶನದ ನಂತರ “ಇಂದಿನ ತಾಂತ್ರಿಕ ಆವಿಷ್ಕಾರಗಳು ಸಿನಿಮಾವೆಂಬ ಸೃಜನಶೀಲ ಕಲೆಗೆ ಹೇಗೆ ಪೂರಕವಾಗುತ್ತಿವೆ ?’ ಎಂಬ ವಿಷಯ ಕುರಿತಂತೆ ಮಾತನಾಡುವರು. ನಂತರ ಸಂವಾದವಿರುತ್ತದೆ. ಸಂಜೆ 4. 30 ಕ್ಕೆ ನಡೆಯುವ ಸಮಾರೋಪಕ್ಕೆ ಮುನ್ನ ನಡೆಯುವ ಮುಕ್ತ ಸಂವಾದದಲ್ಲಿ ಅಶೋಕ್ ಕಶ್ಯಪ್ ಹಾಗೂ ರೇಖಾರಾಣಿ ಪಾಲ್ಗೊಳ್ಳುವರು.

ನಮ್ಮ ಪೋಸ್ಟರ್

ಐದಾರು ಚಿತ್ರ, ಸಂವಾದ, ಚರ್ಚೆ ಇತ್ಯಾದಿ

Tags

ಸಾಂಗತ್ಯದ 7 ನೇ ಶಿಬಿರದ ಸಿದ್ಧತೆ ಪೂರ್ಣಗೊಂಡಿದೆ.

ಜ. 28 ಮತ್ತು 29 ರಂದು ನಾವು ಅಲ್ಲಿರುತ್ತೇವೆ. ಸುಮಾರು 5- 6 ಸಿನಿಮಾಗಳು, ಒಂದಿಷ್ಟು ಚರ್ಚೆ, ಸಿನಿಮಾ ಅಪ್ರಿಶಿಯೇಷನ್ ಕುರಿತಾದ ಉಪನ್ಯಾಸ, ಸಿನಿತಜ್ಞರೊಂದಿಗಿನ ಮುಕ್ತ ಸಂವಾದವೆಲ್ಲವೂ ಇರುತ್ತದೆ.

ಪ್ರಯೋಗಾತ್ಮಕ ಚಿತ್ರಗಳಿಂದ ಹಿಡಿದು, ಹಳೆಯ, ಹೊಸತಿನ ಹಾಗೂ ಜನಪ್ರಿಯ ಚಿತ್ರಗಳನ್ನೂ ಆಯ್ಕೆ ಮಾಡಲಾಗುತ್ತಿದೆ. ಒಟ್ಟೂ ಒಂದು ಸಿನಿಮಾವನ್ನ ಕಲೆಯಾಗಿ ನೋಡುವುದು ಹೇಗೆ? ಗ್ರಹಿಸುವುದು ಹೇಗೆ? ಎಂಬುದನ್ನು ಶೋಧಿಸುವ, ಆ ಮೂಲಕ ತಿಳಿಯುವ ಹಂಬಲ ನಮ್ಮದು. ಉಳಿದಂತೆ ಎರಡು ದಿನದಲ್ಲಿ ಆಮಂತ್ರಣ ಪತ್ರಿಕೆ ಸಿದ್ಧವಾಗಲಿದೆ. ಪ್ರವೇಶ ಶುಲ್ಕ 400 ರೂ. ಗಳು. ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ಚಳಿ ಸ್ವಲ್ಪ ಹೆಚ್ಚಿರುವುದರಿಂದ ಸ್ವಲ್ಪ ಬೆಚ್ಚಗಿಡುವ ಉಡುಪು (ಸ್ವೆಟರ್, ಟೊಪ್ಪಿ ಇತ್ಯಾದಿ) ತರಬಹುದು.

ಕುಪ್ಪಳಿಗೆ ಬರುವವರಿಗೆ ಮಾರ್ಗಸೂಚಿ

ಬೆಂಗಳೂರಿನಿಂದ ಹೊರಡುವವರು ಪ್ರತಿ ದಿನ ರಾತ್ರಿ 10. 30 ಗೆ ಮೆಜೆಸ್ಟಿಕ್ ನಿಂದ ಕುಪ್ಪಳಿಗೇ ಬಸ್ ಇದೆ. ಅದನ್ನು ಬಿಟ್ಟರೆ ಶಿವಮೊಗ್ಗಕ್ಕೆ ಬಂದು ತೀರ್ಥಹಳ್ಳಿ ಬಸ್ಸನ್ನು ಹತ್ತಬೇಕು. ತೀರ್ಥಹಳ್ಳಿಯಿಂದ ಕೊಪ್ಪದ ಬಸ್ ಹತ್ತಿ ಗಡಿಕಲ್ಲು ಎಂಬಲ್ಲಿ ಇಳಿದು ಬರಬೇಕು, ಗಡಿಕಲ್ಲಿಗಿಂತ ಸ್ವಲ್ಪ ಮೊದಲೇ ಕುಪ್ಪಳಿ-ಕುವೆಂಪು ಮನೆಗೆ ಹೋಗಬೇಕೆಂದರೆ ನಿಲ್ಲಿಸುತ್ತಾರೆ-ಅಲ್ಲಿಳಿದು ಮೂರು ನಿಮಿಷ ನಡೆದರೆ ಕಾರ್ಯಕ್ರಮದ ಸ್ಥಳ ಸಿಗುತ್ತದೆ.

ಬೆಂಗಳೂರು-ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದು ಬರುವವರಿಗೆ ರಾತ್ರಿ ರೈಲೂ ಇದೆ. ತೀರ್ಥಹಳ್ಳಿಗೆ ಬಂದು ಬರಬೇಕಾಗಿರುವುದರಿಂದ ರಾತ್ರಿ ಸ್ವಲ್ಪ ಬೇಗ ಹೊರಡಿ.

ಮಂಗಳೂರು-ಕುಂದಾಪುರ ಕಡೆಯಿಂದ ಬರುವವರಿಗೆ ಉಡುಪಿಯಿಂದ ಭದ್ರಾವತಿ ಬಸ್ಸನ್ನ ಹತ್ತಿ ಕೊಪ್ಪದಲ್ಲಿಳಿದು, ತೀರ್ಥಹಳ್ಳಿ ಬಸ್ಸನ್ನು ಹತ್ತಿ ಗಡಿಕಲ್ಲು ಎಂಬಲ್ಲೇ ಇಳಿದು ಬರಬೇಕು. ಬಳ್ಳಾರಿ, ಬೀದರ್ ಇತ್ಯಾದಿ ಕಡೆಯಿಂದ ಬರುವವರು ಶಿವಮೊಗ್ಗಕ್ಕೆ ಬಂದೇ ಬರಬೇಕು.

ಗೊಂದಲವಾದರೆ 99804 57812, 94807 97113, 94482 45172 ಕ್ಕೆ ಸಂಪರ್ಕಿಸಿ.

ಅಕ್ಕರೆಗೆ ಭೇದಭಾವವೆ? ಎಂದು ಪ್ರಶ್ನಿಸುವ ‘ದ ಬ್ಲೈಂಡ್ ಸೈಡ್’

Tags

,

<strong>ಟೀನಾ ಶಶಿಕಾಂತ್ ಬರೆದಿರುವ “ದ ಬ್ಲೈಂಢ್ ಸೈಡ್’ ಚಿತ್ರದ ಬರಹವನ್ನು ಓದಿ ಅಭಿಪ್ರಾಯಿಸಿ. ಒಂದು ವಿಶಿಷ್ಟ ಚಿತ್ರದ ಕುರಿತು ತಮ್ಮದೇ ಆದ ಟಿಪ್ಪಣಿ ಮಾಡಿರುವ ಟೀನಾ, ಇದು ನೋಡಬೇಕಾದ ಚಿತ್ರ ಎಂದು ಉಲ್ಲೇಖಿಸಿದ್ದಾರೆ.

ನಿಜಜೀವನದಲ್ಲಿ ಮೈಕೆಲ್ ತನ್ನ ಅಪ್ಪ ಅಮ್ಮಂದಿರೊಂದಿಗೆ.. ಗೇಮ್ ಒಂದರ ಸಂದರ್ಭದಲ್ಲಿ..
ಬೆಂಗಳೂರಿನ ಬೀದಿಗಳಲ್ಲಿ ನಮ್ಮನಮ್ಮ ವಾಹನಗಳಲ್ಲಿ ಕೂತು ಓಡಾಡುವಾಗ ಕಳೆದುಹೋದ ಭಾವ ಹೊತ್ತು ಅದೂ ಇದೂ ಮಾರಿಕೊಂಡು ತಿರುಗಾಡುವ ಎಷ್ಟೊಂದು ಮಕ್ಕಳನ್ನು ನಾವು ನೋಡಿಲ್ಲ? ನಮ್ಮ ಮನೆಯ ಮಗು ಸಣ್ಣದೊಂದು ತರಚುಗಾಯ ಮಾಡಿಕೊಂಡರು ಒದ್ದಾಡುವ ನಾವು ತೊಂದರೆಯಲ್ಲಿರುವ ನೂರಾರು ಮಕ್ಕಳನ್ನು ಕಂಡೂ ಕಾಣದ ಹಾಗೆ ಮುಂದೆ ಸಾಗುತ್ತೇವೆ. ಪ್ರತಿದಿನ ಬೆಳಗ್ಗೆ ನಾವು ದಿನಪತ್ರಿಕೆಗಳಲ್ಲಿ ಕೊಂಚ ದುಡ್ಡು ವಿನಿಯೋಗಿಸಿ ಹಸಿದ ಮಕ್ಕಳಿಗೆ ಊಟ, ವಿದ್ಯೆ ನೀಡುವಂತೆ ಕೋರುವ ಜಾಹೀರಾತುಗಳನ್ನು ಕಾಣುತ್ತೇವೆ. ಹಾಗೇ ಮುಂದಿನ ಪುಟಕ್ಕೆ ಹೋಗುತ್ತೇವೆ. ಎಷ್ಟೋ ಮನೆಗಳಲ್ಲಿ ಸಣ್ಣ ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡಿರುವುದನ್ನು ನೋಡಿಯೂ ನೋಡದಂತೆ ಇದ್ದುಬಿಡುತ್ತೇವೆ. ಇಂತಹ ಮಕ್ಕಳಿಗೆಲ್ಲ ಸರಿಯಾದ ಶಿಕ್ಷಣ, ಸೂರು, ಹೊಟ್ಟೆತುಂಬ ಊಟ ದೊರಕಿದರೆ ಇವರ ನಡುವಿನಿಂದ ಅದೆಂತಹ ಪ್ರತಿಭೆಗಳು ಹೊರಹೊಮ್ಮುವವೊ? ಹೀಗೂ ಆಗಬಹುದು ಅನ್ನುವುದಕ್ಕೆ ಒಂದು ಚಲನಚಿತ್ರ ಸಾಕ್ಷಿಯಾಗಿದೆ.
ಮತ್ತು ಅದಕ್ಕೆ 2010ರ ಆಸ್ಕರ್ ಪ್ರಶಸ್ತಿ ದೊರಕಿದೆ. Continue reading »

ಮಂಗಳೂರಿನಲ್ಲಿ ಸಿನಿಮೋತ್ಸವ

Tags

ಮಂಗಳೂರಿನ ಸಹಮತ ಫಿಲಂ ಸೊಸೈಟಿ ಎಸ್ ಡಿ ಎಂ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಸಹಕಾರದೊಂದಿಗೆ ಜನವರಿ 19 ರಿಂದ 22 ರವರೆಗೆ ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಹಮ್ಮಿಕೊಂಡಿದೆ.

ಜನವರಿ 19 ರಂದು ಸಂಜೆ 6, “ಕುಬಿ ಮತ್ತು ಇಯಾಲ’ (ಕನ್ನಡ) ನಿರ್ದೇಶನ :ಸದಾನಂದ ಸುವರ್ಣ.

ಜನವರಿ 20 ರಂದು ಸಂಜೆ 6, ಮಿ ಶಿವಾಜಿರಾಜೆ ಬೋಸ್ಲೆ ಬೋಲ್ತಾಯ್ (ಮರಾಠಿ): ನಿರ್ದೇಶಕ : ಸಂತೋಷ್ ಮಂಜ್ರೇಕರ್.

ಜನವರಿ 21 ರಂದು ಮಧ್ಯಾಹ್ನ 1.30 ಕಾಂಜೀವರಂ (ತಮಿಳು) ನಿರ್ದೇಶನ : ಪ್ರಿಯದರ್ಶನ್
ಸಂಜೆ 4 ಕ್ಕೆ ದಿ ವಾಯ್ ಲಿನ್ (ಮೆಕ್ಸಿಕೋ) ನಿರ್ದೇಶನ : ಫ್ರಾನ್ಸಿಸ್ಕೋ ವರ್ಗಾಸ್.
ಸಂಜೆ 6 ಕ್ಕೆ ದಿ ಕುಕೂ (ರಷ್ಯನ್ )-ನಿರ್ದೇಶನ : ಅಲೆಕ್ಸಾಂಡರ್ ರೋಗೋಜ್ಕಿನ್

ಜನವರಿ 22 ರಂದು ಬೆಳಗ್ಗೆ 9.30 ಅದಮಿಂಟೆ ಮಗನ್ ಅಬು (ಮಲಯಾಳಂ)-ನಿರ್ದೇಶನ : ಸಲೀಮ್ ಅಹ್ಮದ್
ಮಧ್ಯಾಹ್ನ 12 ಇಲ್ ಪೋಸ್ಟಿನೋ (ಇಟಲಿ) : ನಿರ್ದೇಶನ : ಮೈಕೆಲ್ ರೊಡ್ಜ್
ಮಧ್ಯಾಹ್ನ 2 ಬರಾನ್ (ಇರಾನ್)-ನಿರ್ದೇಶನ : ಮಜಿದ್ ಮಜಿದಿ
ಸಂಜೆ 6 ಕ್ಕೆ ರೇನ್ ಕೋಟ್ (ಹಿಂದಿ)-ರುತುಪರ್ಣೋ ಘೋಷ್
ಸ್ಥಳ : ಎಸ್ ಡಿ ಎಂ ಕಾಲೇಜು, ಮಂಗಳೂರು

ಪಾಸುಗಳ ಮೂಲಕ ಪ್ರವೇಶ. ಪಾಸುಗಳಿಗೆ : ಅತ್ರಿ ಬುಕ್ ಸ್ಟಾಲ್, ಬಲ್ಮಠ, ಮಂಗಳೂರು, ನವ ಕರ್ನಾಟಕ ಪಬ್ಲಿಕೇಷನ್ಸ್, ಕೆ.ಎಸ್. ರಾವ್ ರಸ್ತೆ, ಮಂಗಳೂರು.

ಪ್ರೊ. ಸತೀಶ್ ಬಹಾದುರ್

Tags

,

ಪ್ರೊ. ಸತೀಶ್ ಬಹಾದುರ್ ಒಬ್ಬ ಅತ್ಯುತ್ತಮ ಸಿನಿಮಾ ಅಭ್ಯಾಸಿ. ಪುಣೆಯ ಚಲನಚಿತ್ರ ಇನ್ ಸ್ಟಿಟ್ಯೂಟ್ ಗೆ ಭದ್ರ ಬುನಾದಿ ಹಾಕಿಕೊಟ್ಟವರಲ್ಲಿ ಒಬ್ಬರು. ಅವರ ಕುರಿತು ಖ್ಯಾತ ಸಿನೆಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಮೈಸೂರು ಫಿಲಂ ಸೊಸೈಟಿಯವರಿಗೆ ಬರೆದುಕೊಟ್ಟ ಲೇಖನವನ್ನು ಎಲ್ಲರಿಗೂ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗುತ್ತಿದೆ. ಓದಿ, ಅಭಿಪ್ರಾಯಿಸಿ.

ಪ್ರೊ. ಸತೀಶ್ ಬಹಾದುರ್ ಈ ಹೆಸರು ಕಿವಿಗೆ ಬಿದ್ದೊಡನೆ ಕಣ್ಮುಂದೆ ನಿಲ್ಲುವುದು, ಬಾಂಗ್ಲಾದೇಶದ ಧೀಮಂತನಾಯಕ ಹಾಗೂ ಅದರ ಅಸ್ತಿತ್ವಕ್ಕೆ ಕಾರಣಪುರುಷನಾದ ಷೇಖ್ ಮುಜೀಬುರ್ ರೆಹಮಾನ್ ಅವರ ಚಹರೆಯನ್ನು ನೆನಪಿಗೆ ತರುವ ಚೌಕಾಕಾರದ ಮುಖಾಕೃತಿಯ, ನೆತ್ತಿಯ ಮೇಲೆ ಒತ್ತುಗೂದಲು ಹೊತ್ತ ಸಧೃಡ ನಿಲುವಿನ ಮಧ್ಯವಯಸ್ಕ ವ್ಯಕ್ತಿಯ ನಿರ್ಮಲ ವ್ಯಕ್ತಿತ್ವ; ಅಗಲ ಗಾಜಿನ ಕನ್ನಡಕದ ಹಿಂದಿನ ನಗೆಸೂಸುವ ಕಪ್ಪುಕಂಗಳ ಹೊಳಪು. ಕಂದು ಬಣ್ಣದ ಖಾದಿ ಜುಬ್ಬಾ ಹಾಗೂ ಬಿಳಿ ಪಾಯಿಜಾಮ ಧರಿಸಿ, ಕೈಯಲ್ಲಿ ಯಾವಾಗಲೂ ಸಿಗರೇಟು ಹಿಡಿದಿರುತ್ತಿದ್ದ ಪ್ರೊಫೆಸರ್ ಸತೀಶ್ ಬಹಾದುರ್, ಸಾಂಪ್ರದಾಯಿಕ ಕಾಲೇಜು ಶಿಕ್ಷಣವನ್ನು ಆಗಷ್ಟೇ ಮುಗಿಸಿದ್ದ ನನ್ನಲ್ಲಿ, ‘ಓರ್ವ ಪ್ರೊಫೆಸರ್ ಹೀಗೂ ಇರಬಹುದೇ ?!’ ಎನ್ನುವ ಅಚ್ಚರಿಯನ್ನು ಮೂಡಿಸಿದ ಮೇಷ್ಟ್ರು.

‘HAPPY ANNIVERSARY’, ‘WEDDING’, ‘PATHER PANCHALI’ ಇತ್ಯಾದಿ ಸಿನಿಮಾಗಳ ಪ್ರತಿ ದೃಶ್ಯವನ್ನೂ ಅತ್ಯಂತ ಕೂಲಂಕಷವಾಗಿ ವಿಮರ್ಶಿಸಿ, ಆಜೀವಪರ್ಯಂತವಾದ ನನ್ನ ಸಿನಿಮಾ ಅಧ್ಯಯನಕ್ಕೆ, ಅಭ್ಯಾಸಕ್ಕೆ, ಭದ್ರಬುನಾದಿ ಹಾಕಿಕೊಟ್ಟ ಪ್ರೊ. ಬಹಾದುರ್ ಅವರದು ಒಂದು ರೀತಿಯಲ್ಲಿ ಆದರ್ಶವಾದ ವ್ಯಕ್ತಿತ್ವ. Continue reading »

ಶಿಬಿರ-ದಿನಾಂಕ ಬದಲು

ಸಾಂಗತ್ಯ ಹಮ್ಮಿಕೊಂಡಿರುವ ಶಿಬಿರ ಸಂಬಂಧ ಒಂದು ತಿದ್ದುಪಡಿಯಾಗಿದ್ದು, ಕಾರಣಾಂತರಗಳಿಂದ ಶಿಬಿರದ ದಿನಾಂಕ ಜನವರಿ 21-22 ರ ಬದಲು 28-29 ರಂದು ನಿಗದಿಯಾಗಿದೆ. ಹಾಗಾಗಿ ದಯವಿಟ್ಟು ಈ ಬದಲಾವಣೆಯನ್ನು ಗಮನಿಸಬೇಕು.

ಈ ಬಾರಿ ಶಿಬಿರವನ್ನು ಮತ್ತಷ್ಟು ವಿಶಿಷ್ಟವಾಗಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಸಿನಿಮಾ ನೋಡುವುದು, ಸಂವಾದ ನಡೆಸುವುದು ತಪ್ಪುವುದಿಲ್ಲ. ಅದರೊಂದಿಗೆ ಮತ್ತೇನಾದರೂ ಸೇರಿಸಬೇಕೇ ಎಂಬುದರ ಬಗ್ಗೆ ಚಿಂತನೆ ನಡೆದಿದೆ.

ಎಂದಿನಂತೆ ಸಿನಿಮಾ ರಂಗದ ತಜ್ಞರು ನಮ್ಮೊಂದಿಗೆ ಇರುವರು. ಸಾಂಗತ್ಯ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿನಿತಜ್ಞ ಪರಮೇಶ್ ಗುರುಸ್ವಾಮಿ ನೇತೃತ್ವವಹಿಸುವರು.
ಪ್ರತಿ ಬಾರಿಯಂತೆ 45 ರಿಂದ 50 ಮಂದಿಗೆ ಅವಕಾಶವಿರಲಿದೆ. ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು saangatya@gmail.com ಗೆ ತಮ್ಮ ವಿವರಗಳೊಂದಿಗೆ ಮಿಂಚಂಚೆ ಕಳಿಸಬಹುದು. ಮಾಹಿತಿಗೆ ಮೊಬೈಲ್ 94807 97113, 94805 82027, . ಸಲಹೆಗಳಿಗೂ ಸ್ವಾಗತ.

ಏರಲಾರದ ಕುದುರೆ

Tags

, , , ,

ಎನ್.ಎಸ್.ಶ್ರೀಧರ ಮೂರ್ತಿ ಅವರು ಗಿರೀಶ್ ಕಾಸರವಳ್ಳಿಯವ ಕನಸೆಂಬೋ ಕುದುರೆಯನ್ನೇರಿ ಚಿತ್ರದ ಕುರಿತು ತಮ್ಮ ನೋಟಗಳನ್ನು ಟಿಪ್ಫಣಿ ಮಾಡಿ ಕಳುಹಿಸಿದ್ದಾರೆ. ಡಿಸೆಂಬರ್ 15 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆದ 4 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶಿತವಾಗಿತ್ತು. ಅಮರೇಶ ನುಗಡೋಣಿಯವರ ಕಥೆಗೆ ಗಿರೀಶ್ ಕಾಸರವಳ್ಳಿಯವರು ದೃಶ್ಯರೂಪ ನೀಡುವ ಚಿತ್ರವೇ ಇದು.

ಸೃಜನಶೀಲ ಕೃತಿಯೊಂದು ಚಲನಚಿತ್ರವಾದಾಗ ತನ್ನ ಪರಿವರ್ತನೆಯಲ್ಲಿ ಎಂತಹ ನೆಲೆಗಳನ್ನು ಉಳಿಸಿಕೊಳ್ಳ ಬೇಕು ಮತ್ತು ಕಳೆದುಕೊಳ್ಳ ಬೇಕು ಎನ್ನುವುದು ನನ್ನನ್ನು ಬಹುಕಾಲದಿಂದಲೂ ಕಾಡುತ್ತಿರುವ ಪ್ರಶ್ನೆ. ಪನ್ನಾಲಾಲ್ ಪಟೇಲರ `ಮಳೇಲಿ ಜೀವ’ ಕಾದಂಬರಿಯ ಸರಳ ಎಳೆಗಳನ್ನು ಹಿಡಿದು ಟಿ.ಎಸ್.ನಾಗಾ ಭರಣ `ಜನುಮದ ಜೋಡಿ’ ಚಲನಚಿತ್ರವನ್ನು ಮಾಡಿದಾಗ ಇಂತಹ ಪ್ರಶ್ನೆ ಸೃಜನಶೀಲತೆಯ ನೆಲೆಯನ್ನು ಕುರಿತಂತೆ ನನ್ನನ್ನು ಕಾಡಿತ್ತು. ಈಗ ಅಂತಹದೇ ಪ್ರಶ್ನೆ ಡಾ.ಅಮರೇಶ್ ನುಗುಡೋಣಿಯವರ `ಸವಾರಿ’ ಸಣ್ಣಕಥೆಯನ್ನು ಗಿರೀಶ್ ಕಾಸರವಳ್ಳಿ `ಕನಸೆಂಬೋ ಕುದುರಿಯನ್ನೇರಿ’ ಎಂಬ ಚಲನಚಿತ್ರವಾಗಿಸಿದ್ದನ್ನು ನೋಡಿದರೆ ಕಾಡುತ್ತಿದೆ.

ಚಲನಚಿತ್ರ ಸಾಹಿತ್ಯಕ್ಕಿಂತ ಭಿನ್ನ ಮಾಧ್ಯಮ ಎಂಬ ಪ್ರಾಥಮಿಕ ಅರಿವು ನನಗೆ ಇದ್ದೇ ಇದೆ. ಚಲನಚಿತ್ರ ಸಾಹಿತ್ಯ ಕೃತಿಯ ದೃಶ್ಯಾತ್ಮಕ ಸಾಧ್ಯತೆ ಮಾತ್ರ ಅಲ್ಲವೆಂಬ ಸೈದ್ದಾಂತಿಕ ನೆಲೆಗಳ ಪರಿಚಯವೂ ನನಗಿದೆ. ಆದರೆ ಸೃಜನಶೀಲ ಕೃತಿಯಲ್ಲಿರುವ ದೃಶ್ಯಾತ್ಮಕ ಸಾಧ್ಯತೆಗಳನ್ನೇ ನಿರಾಕರಿಸಿದರೆ ಚಿತ್ರವಾಗಿಸಲು ಆ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತದೆ. ಜೊತೆಗೆ ಮಧ್ಯಮದ ಪಲ್ಲಟ ಸಂಕೀರ್ಣತೆಗಳು ಮಾಯವಾಗಲು ಕಾರಣವಾಗಬಾರದು ಎನ್ನುವುದು ಒಂದು ಸೃಜನಾತ್ಮಕ ಎಚ್ಚರ ಕೂಡ ಹೌದು. ನುಗುಡೋಣಿಯವರ ಹಲವು ಸೂಕ್ಷ್ಮ ನೆಲೆಗಳುಳ್ಳ ಕಥೆಯ ಸಂಕೀರ್ಣತೆಯನ್ನು ಕೈಬಿಟ್ಟು ಬೌದ್ದಿಕವಾದ ಕಥೆಯ ಗುಣವಲ್ಲದ ನೆಲಯ ಪ್ರತಿಪಾದನೆಯಾಗಿ ಚಿತ್ರ ಮೂಡಿ ಬಂದಿರುವುದು ಅಯ್ಕೆಯ ಉದ್ದೇಶವನ್ನೇ ಪ್ರಶ್ನಾರ್ಥಕವಾಗಿಸಿದೆ.ನುಗಡೋಣಿ ಮತು ಕಾಸರವಳ್ಳಿಯವರ ಅಭಿವ್ಯಕ್ತಿ ಕ್ರಮ ಕೂಡ ಇದಕ್ಕೆ ಕಾರಣವಿರಬಹುದು . ಏಕೆಂದರೆ ವಿವರಗಳ ಮೂಲಕ ಕಥೆ ಕಟ್ಟುವುದು ನುಗುಡೋಣಿಯವರ ಶ್ಯೆಲಿ, ಆದರೆ ವಿವರಗಳನ್ನು ವಾಚ್ಯ ಎಂಬ ಕಾರಣಕ್ಕೆ ಸಾಧ್ಯವಾದಷ್ಟು ಕೈಬಿಟ್ಟು ರೂಪಕಗಳ ಮೂಲಕ ಕಥೆ ಹೇಳುವುದು ಕಾಸರವಳ್ಳಿಯವರ ಶ್ಯೆಲಿ, ಇಂತಹ ನೆಲೆಗಳಲ್ಲೇ ವಿರೋಧಾತ್ಮಕತೆ ಇದೆ. ಚಿತ್ರದಲ್ಲೂ ಆ ಬಿಕ್ಕಟ್ಟಿನ ಸ್ವರೂಪವನ್ನು ಕಾಣಬಹುದಾಗಿದೆ.

ನುಗುಡೋಣಿಯವರ ಕಥೆಯಲ್ಲಿ ಬ್ಯಾಗರ ವಜ್ರಪ್ಪ ಸುಡುಗಾಡು ಸಿದ್ಧನನ್ನು ಕನಸಿನಲ್ಲಿ ಕಾಣವುದರ ಜೊತೆಗೆ ಕಥನ ಆರಂಭವಾಗುತ್ತದೆ. ಈಗೀಗ ಊರಲ್ಲಿ ಯಾರೇ ಯಾವ ಕಾರಣಕ್ಕೇ ಸತ್ತರೂ ಅಂದು ಗಂಡನಿಗೆ ಕನಸು ಬೀಳುತ್ತದೆ ಅದು ಪವಾಡದಂಗೆ ಸಾಬೀತಾಗುತ್ತದೆ ಎಂದು ಬಲ್ಲ ವಜ್ರಪ್ಪನ ಹೆಂಡತಿ ರುದ್ರವ್ವನಿಗೆ ವಜ್ರಪ್ಪನ ಕನ್ಸಿನಾಗೆ ಶಿವಪ್ಪ ಗೌಡರ ತಂದೆ ಮಲ್ಲಪ್ಪ ಗೌಡ ಸತ್ತಂತೆ ಬಿದ್ದ ಕನಸು ಹುಸಿಯಾಗಿ ನಿರಾಸೆಯಾಗುತ್ತದೆ. ಇದನ್ನೂ ಹಿಂಬಾಲಿಸಿ ಸುಡಗಾಡು ಸಿದ್ಧ ಬರುವ ಕಸನೂ ಹುಸಿಯಾದಾಗ ಅದು ಹತಾಶೆಗೆ ತಿರುಗುತ್ತದೆ. ವಜ್ರಪ್ಪನಿಗಾದರೂ ತನ್ನ ಕನಸುಗಳು ಹುಸಿಯಾದವು ಎಂಬುದು ಒಪ್ಪಲಾಗದ ಸತ್ಯವಾಗಿದೆ. ಅದನ್ನು ನಿಜವೆಂದೆ ಸಾಧಿಸಲು ಹೋಗಿ ಆತ ಜೀವ ಕಳೆದುಕೊಳ್ಳುತ್ತಾನೆ. ವಾಸ್ತವೆಂದರೆ ಅವೆರಡೂ ಸತ್ಯವಾಗಿರುತ್ತದೆ. ಅದನ್ನು ಸುಳ್ಳು ಎಂದು ಏಕೆ ನಂಬಿಸಲಾಯಿತು ಎಂಬುದು ಕಥೆಯ ಇನ್ನೊಂದು ನೆಲೆಯಲ್ಲಿ ಅನಾವರಣಗೊಳ್ಳುತ್ತದೆ. ಶಿವಪ್ಪ ಗೌಡ ತನ್ನ ರಾಜಕೀಯ ಕಾರಣಗಳಿಗೆ ತಂದೆಯ ಸಾವನ್ನು ಮುಚ್ಚಿಟ್ಟಿದ್ದರೆ, ಇದಕ್ಕೆ ನರೆವಾಗಲು ಹೋದ ಹಿರೇ ಮಠದಪ್ಪ ಸುಡುಗಾಡು ಸಿದ್ಧನನ್ನು ಬರದಂತೆ ತಡೆದಿರುತ್ತಾನೆ. Continue reading »

ಜ. 21 ಮತ್ತು 22 ರಂದು ಚಿತ್ರ ಶಿಬಿರ

Tags

ಸಾಂಗತ್ಯದ ಏಳನೇ ಚಿತ್ರ ಶಿಬಿರ ಈಗಾಗಲೇ ಯೋಜಿಸಿದಂತೆ ಜನವರಿ 21 ಮತ್ತು 22 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ನಡೆಯಲಿದೆ.

ಈ ಬಾರಿ ಶಿಬಿರವನ್ನು ಮತ್ತಷ್ಟು ವಿಶಿಷ್ಟವಾಗಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಸಿನಿಮಾ ನೋಡುವುದು, ಸಂವಾದ ನಡೆಸುವುದು ತಪ್ಪುವುದಿಲ್ಲ. ಅದರೊಂದಿಗೆ ಮತ್ತೇನಾದರೂ ಸೇರಿಸಬೇಕೇ ಎಂಬುದರ ಬಗ್ಗೆ ಚಿಂತನೆ ನಡೆದಿದೆ.

ಎಂದಿನಂತೆ ಸಿನಿಮಾ ರಂಗದ ತಜ್ಞರು ನಮ್ಮೊಂದಿಗೆ ಇರುವರು. ಸಾಂಗತ್ಯ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿನಿತಜ್ಞ ಪರಮೇಶ್ ಗುರುಸ್ವಾಮಿ ನೇತೃತ್ವವಹಿಸುವರು. ಪ್ರತಿ ಬಾರಿಯಂತೆ 45 ರಿಂದ 50 ಮಂದಿಗೆ ಅವಕಾಶವಿರಲಿದೆ. 400 ರೂ. ಪ್ರವೇಶ ಶುಲ್ಕ. ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು saangatya@gmail.com ಗೆ ತಮ್ಮ ವಿವರಗಳೊಂದಿಗೆ ಮಿಂಚಂಚೆ ಕಳಿಸಬಹುದು. ಮಾಹಿತಿಗೆ ಮೊಬೈಲ್ 94807 97113, 94805 82027, 95910 90707. ಸಲಹೆಗಳಿಗೂ ಸ್ವಾಗತ.

Follow

Get every new post delivered to your Inbox.

Join 226 other followers