ಸಾಂಗತ್ಯದ ಹದಿನೆಂಟನೇ ಶಿಬಿರವನ್ನು ಕೊಪ್ಪ ಪ್ರದೇಶದಲ್ಲಿ ಮಳೆ ಹೆಚ್ಚಿರುವುದು ಹಾಗೂ ಭೂ ಕುಸಿತದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಈ ಹಿಂದೆ ಯೋಜಿಸಿದಂತೆ ಆಗಸ್ಟ್ 25-26 ರಂದು ಶಿಬಿರವನ್ನು ನಡೆಸಬೇಕಿತ್ತು. ಅತಿಥಿಗಳ ಆಯ್ಕೆಯೂ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಳೆ ಇನ್ನೂ ಇರುವುದು ಹಾಗೂ ಕೆಲವೆಡೆ ಭೂ ಕುಸಿತವಾಗುತ್ತಿರುವುದು, ಹಲವು ರಸ್ತೆಗಳೂ ಕಡಿತಗೊಂಡಿರುವುದರಿಂದ ಸೆಪ್ಟೆಂಬರ್-ಅಕ್ಟೋಬರ್ ಗೆ ಮುಂದೂಡಲಾಗಿದೆ. ನಿನ್ನೆಯವರೆಗೂ ಶಿಬಿರ ನಡೆಸುವ ಸಾಧ್ಯತೆಗಳನ್ನು ಹುಡುಕಿದರೂ ಸಾಧ್ಯವಾಗಲಿಲ್ಲ. ಇದರಿಂದ ಯಾರಿಗಾದರೂ ತೊಂದರೆಯಾಗಿದ್ದರೆ ವಿಷಾದಿಸುತ್ತೇವೆ.

ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು.