ಈ ಚಿತ್ರೋತ್ಸವದ ಅತ್ಯುತ್ತಮ ಚಿತ್ರ ಪ್ರಶಸ್ತಿ ಫ್ರೆಂಚ್ ಭಾಷೆಗೆ ಒಲಿದರೆ, ಅತ್ಯುತ್ತಮ ನಟ ಪ್ರಶಸ್ತಿಯೂ ಅದೇ ಭಾಷೆಗೆ ಸಂದಿದೆ. ಸಮಾಧಾನದ ಸಂಗತಿಯೆಂದರೆ ಮಲಯಾಳಂನ ಟೇಕಾಫ್ ಎರಡು ಪ್ರಶಸ್ತಿ ಗಳಿಸಿತು. ಒಂದು-ಚೊಚ್ಚಲ ಚಿತ್ರದ ಆತ್ಯತ್ತಮ ನಿರ್ದೇಶನಕ್ಕೆ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪಣಜಿ, ನ. 28: ಇಫಿ 2017 (ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ) ದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಫ್ರೆಂಚ್ ಸಿನಿಮಾ 120 ಬಿಪಿಎಂ ನ ಪಾಲಾಗಿದೆ.
40 ಲಕ್ಷ ರೂ ನಗದು, ಸುವರ್ಣ ನವಿಲು ಪಾರಿತೋಷಕವನ್ನು ಒಳಗೊಂಡಿದೆ. ಇದೇ ಚಿತ್ರದಲ್ಲಿ ಆಭಿನಯಿಸಿದ್ದ ನಾಹೇಲ್ ಪೆರೆಜ್ ಬಿಸ್ಕರ್ಯಾತ್ -ಅತ್ಯುತ್ತಮ ನಟ, ಆತ್ಯುತ್ತಮ ನಿರ್ದೇಶನ- ಚೀನಾದ ಚಿತ್ರ ಏಂಜಲ್ಸ್ ವೇರ ವೈಟ್ ನಿರ್ದೇಶಿಸಿದ ವಿವಿಯನ್ ಕೂ,
ಮತ್ತೊಂದು ಅತ್ಯುತ್ತಮ ಚಿತ್ರ-ಬೊಲಿವಿಯನ್ ಚಿತ್ರ ನಿರ್ದೇಶಕ ಕಿರೋ ರಸ್ಸೋ ನಿರ್ದೇಶನದ ‘ಡಾರ್ಕ್ ಸ್ಕಲ್’, ಚೊಚ್ಚಲ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ನೀಡುವ ತೀರ್ಪುಗಾರರ ಪ್ರಶಸ್ತಿ-ಮಲಯಾಳಂನ ಟೇಕಾಫ್ ಚಿತ್ರದ ನಿರ್ದೇಶಕ ಕೇರಳದ ಮಹೇಶ್ ನಾರಾಯಣ್, ಇದೇ ಚಿತ್ರದಲ್ಲಿ ನಟಿಸಿರುವ ಪಾರ್ವತಿ ಟಿಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಐಸಿಎಫ್‍ಟಿ-ಯುನೆಸ್ಕೊ ಗಾಂಧಿ ಪ್ರಶಸ್ತಿ ಮರಾಠಿ ಚಿತ್ರ ನಿರ್ದೇಶಕ ಮನೋಜ್ ಕದಮ್ ನಿರ್ದೇಶನದ ಕ್ಷಿತಿಜ್ ಗಳಿಸಿದೆ.
ವರ್ಷದ ಭಾರತೀಯ ಚಲನಚಿತ್ರ ರಂಗದ ವ್ಯಕ್ತಿಗೆ ನೀಡಲಾಗುವ ವಿಶೇಷ ಪ್ರಶಸ್ತಿಯನ್ನು ಬಾಲಿವುಡ್ ನ ಅಮಿತಾಬ್ ಬಚ್ಚನ್ ಗೆ ನೀಡಿ ಗೌರವಿಸಲಾಯಿತು. ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ಕೆನಡಾದ ಚಿತ್ರ ನಿರ್ದೇಶಕ ಆಟಮ್ ಇಂಗೋಯನ್ ಅವರಿಗೆ ನೀಡಲಾಯಿತು. ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ, ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವೆ ಸ್ಮøತಿ ಇರಾನಿ, ಕೇಂದ್ರ ಸಚಿವರಾದ ಕಿರಣ್ ಜುಜು, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಭಾರತೀಯ ಚಿತ್ರ ನಿರ್ದೇಶಕರಾದ ಜಾನು ಬರುವಾ, ನಾಗೇಶ್ ಕುಕನೂರ್ ಮತ್ತಿತರರು ಭಾಗವಹಿಸಿದ್ದರು.
ಒಂಬತ್ತು ದಿನಗಳ ಉತ್ಸವದಲ್ಲಿ ಪ್ರದರ್ಶನಗೊಂಡ 195 ಸಿನಿಮಾಗಳ ಪೈಕಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾದ ಪೃಥ್ವಿ ಕೊಣನೂರು ಅವರ ‘ರೈಲ್ವೆ ಚಿಲ್ಡ್ರನ್’ ಏಕೈಕ ಕನ್ನಡ ಚಿತ್ರ. ಉದ್ಘಾಟನಾ ಚಿತ್ರವಾಗಿ ಇರಾನ್ ಚಿತ್ರ ನಿರ್ದೇಶಕ ಮಜಿದ್ ಮಜಿದಿಯ ‘ಬಿಯಾಂಡ್ ದಿ ಕ್ಲೌಡ್ಸ್’ ಹಾಗೂ ಸಮಾರೋಪ ಚಿತ್ರವಾಗಿ ಪ್ಯಾಬ್ಲೊ ಸೀಸರ್ ರ ‘ಥಿಂಕಿಂಗ್ ಆಫ್ ಹಿಮ್’ ಚಿತ್ರ ಪ್ರದರ್ಶನಗೊಂಡವು. ಶಾರೂಖ್ ಖಾನ್, ಅಕ್ಷಯ್ ಕುಮಾರ್, ಸಂಗೀತ ನಿರ್ದೇಶಕ ಎಆರ್ ರೆಹಮಾನ್, ಶ್ರೀದೇವಿ, ಸಲ್ಮಾನ್ ಖಾನ್, ಕತ್ರಿನಾ ಕೈಫ್, ಕಂಗನಾ ರಣಾಹತ್, ಪೂಜಾ ಹೆಗ್ಡೆ, ಉಮಾ ಖುರೇಶಿ, ಅಲಿಯಾ ಭಟ್, ನಿರ್ದೇಶಕರಾದ ಸುಭಾಷ್ ಘಾಯ್, ಶೇಖರ್ ಕಪೂರ್ ಮತ್ತಿತರರು ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ನಿರೂಪಣೆಯಲ್ಲಿ ಜರಿನಾ ವಾಸಿಂ, ಕರಣ್ ಜೋಹರ್ ಪಾಲ್ಗೊಂಡಿದ್ದರು.