
ಸಾಂಗತ್ಯ ಪ್ರತಿನಿಧಿಯಿಂದ
ಪಣಜಿ, ನ. 23: ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಂದರ್ಭದಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿಸಿ)ವು ಪಣಜಿಯಲ್ಲಿ ಆಯೋಜಿಸಿರುವ ಫಿಲ್ಮ್ ಬಜಾರ್ ನ ಹತ್ತನೇ ಆವೃತ್ತಿ ನಾಳೆಗೆ (ನ.24) ಕೊನೆಗೊಳ್ಳಲಿದೆ.
ನ. 20 ರಿಂದಲೇ ಪ್ರಾರಂಭವಾದ ಫಿಲ್ಮ್ ಬಜಾರ್, ದಕ್ಷಿಣ ಏಷ್ಯಾದ ಸಿನೆಮಾಗಳಿಗೆ ಮಾರುಕಟ್ಟೆ ಒದಗಿಸುವ, ಸಿನಿಮಾ ಕರ್ತೃಗಳಿಗೆ ಸೂಕ್ತ ನಿಧಿ ಸಿಗುವಂತೆ ಸಹಾಯ ಸಿನಿಮಾಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದೆ. ಇದರೊಂದಿಗೆ ದಕ್ಷಿಣ ಏಷ್ಯಾ ಭಾಗಕ್ಕೆ ವಿಶ್ವ ಸಿನಿಮಾವನ್ನು ಒದಗಿಸುವ ಕೆಲಸವನ್ನೂ ನಡೆಸುತ್ತಿದೆ.
ಈ ವರ್ಷ ಫಿಲ್ಮ್ ಬಜಾರ್, ಒಂದುಸಾವಿರ ಅಂತಾರಾಷ್ಟ್ರೀಯ ಮತ್ತು ದೇಶಿ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿದೆ. ಸುಮಾರು 35 ರಾಷ್ಟ್ರಗಳಿಂದ ಈ ಸಮ್ಮೇಳನಕ್ಕೆ ಭಾಗವಹಿಸಿದ್ದಾರೆ. ಇದರಲ್ಲಿ ನೋಂದಾಯಿಸಿಕೊಂಡವರಿಗೆ ನಾಲೆಡ್ಜ್ ಸೀರಿಸ್, ಇಂಡಸ್ಟ್ರಿ ಸ್ಕ್ರೀನಿಂಗ್ಸ್ಗಳಲ್ಲಿ ಭಾಗವಹಿಸಬಹುದಾಗಿದೆ. ಎನ್ ಎಫ್ ಡಿಸಿ ಸಿನಿಮಾಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.
ಈ ವರ್ಷದಿಂದ ನಾಲೆಡ್ಜ್ ಸರಣಿಯನ್ನು ಆರಂಭಿಸಲಾಗಿದೆ. ಈ ವರ್ಷದ ವಿಷಯ (ಥೀಮ್) ನಿರೂಪಣೆಯ ಕ್ರಮಗಳು, ಡಿಜಿಟಲೀಕರಣ ಹಾಗೂ ಸಿನಿಮಾಗಳ ನಗದೀಕರಣಕ್ಕೆ ತಂತ್ರಜ್ಞಾನದ ಸಹಾಯವೆಂಬುದು. ಈ ಫಿಲ್ಮ್ ಬಜಾರ್ ನ. 24 ರವರೆಗೆ ನಡೆಯಲಿದೆ.