IFFI CANNES Catalogue 2016

ಪಣಜಿ : 47 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ನವೆಂಬರ್ 20 ರಿಂದ (ಭಾನುವಾರ) ಪ್ರಾರಂಭವಾಗಲಿದೆ.
ನವೆಂಬರ್ 28 ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ವಿವಿಧ ದೇಶಗಳ 300 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಮಾಸ್ಟರ್ ಕ್ಲಾಸ್, ಸಂವಾದ ಹಾಗೂ ಕಾರ್ಯಾಗಾರಗಳು ನಡೆಯಲಿವೆ.

ಒಟ್ಟು ಒಂಬತ್ತು ದಿನಗಳ ಉತ್ಸವದ ಉದ್ಘಾಟನೆ ಶ್ಯಾಂ ಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ನಡೆಯಲಿದೆ. ಜೀವಮಾನ ಸಾಧನೆ ಪ್ರಶಸ್ತಿಯನ್ನು ಕೊರಿಯಾದ ಚಿತ್ರ ನಿರ್ದೇಶಕ ಇಂಕ್ವಾನ್ ಟೆಕ್ ವಿಲ್ ಅವರಿಗೆ ನೀಡಲಾಗುತ್ತಿದ್ದು, ಈ ಸಾಲಿನ ಚಿತ್ರ ಜಗತ್ತಿನ ಸಾಧಕ ಪ್ರಶಸ್ತಿಯನ್ನು ಮೇರು ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.

ಈ ಬಾರಿಯ ಉದ್ಘಾಟನಾ ಚಿತ್ರ ಆಂಡ್ರೇಜ್ ವಜ್ಡ ಅವರ ‘ಆಫ್ಟರ್ ಇಮೇಜ್’ ಕಲಾ ಅಕಾಡೆಮಿಯಲ್ಲಿ ಪ್ರದರ್ಶನಗೊಳ್ಳಲಿದೆ. ಬೈಲಿಯ ಕೆ ಶೆಂದಿರ್ ಮಿಡ್ ಫೆಸ್ಟ್ ಫಿಲ್ಮ್ ಆಗಿ ಆಯ್ಕೆ ಮಾಡಿದ್ದು ಹಾಗೂ ಕಿಮ್ ಜಿ ವೂನ್ ಅವರ ದಿ ಏಜ್ ಆಫ್ ಶ್ಯಾಡೋಸ್ ಮೂಲಕ ಈ ಚಿತ್ರೋತ್ಸವಕ್ಕೆ ತೆರೆ ಬೀಳಲಿದೆ.

ಕಂಟ್ರಿ ಫೋಕಸ್
ನಿರ್ದಿಷ್ಟ ದೇಶಕ್ಕೆ ಸಂಬಂಧಿಸಿದ ‘ಕಂಟ್ರಿ ಫೋಕಸ್’ ವಿಭಾಗದಡಿ ಕೊರಿಯ ದೇಶದ ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಸಾಂಗ್ ಹೊಯೆನ್, ಝಾಂಗ್ ಲೂ ಹಾಗೂ ಲೀ ಜೂಂಕ್ ಅವರ ಪ್ರಮುಖ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮೊದಲ ಬಾರಿಗೆ ವಿಭಿನ್ನ ಸಾಮಥ್ರ್ಯದವರೆಗೂ ಚಲನಚಿತ್ರಗಳನ್ನು ಪ್ರದರ್ಶಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕಂಟ್ರಿ ಫೋಕಸ್ ವಿಭಾಗ ‘ಟನೆಲ್’ ಸಿನಿಮಾದಿಂದ ಉದ್ಘಾಟನೆಗೊಂಡರೆ, ಕನ್ನಡದ ಅನನ್ಯ ಕಾಸರವಳ್ಳಿಯವರ ‘ಹರಿಕಥಾ ಪ್ರಸಂಗ’ ವೂ ಸೇರಿದಂತೆ 15 ಚಿತ್ರಗಳು ಅಂತಾರಾಷ್ಟ್ರೀಯ ಸ್ಪರ್ಧೆ ವಿಭಾಗದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿವೆ. ಇದೇ ಮೊದಲ ಬಾರಿಗೆ ಶತಮಾನೋತ್ಸವ ನೆನಪಿನ ಪ್ರಶಸ್ತಿಯನ್ನು ಚೊಚ್ಚಲ ಚಿತ್ರದ ನಿರ್ದೇಶಕರಿಗೆ ನೀಡಲಾಗುತ್ತಿದೆ. ಕನ್ನಡದ ಅನನ್ಯ ಕಾಸರವಳ್ಳಿ ಸೇರಿದಂತೆ 7 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಕನ್ನಡದ ಎರಡು ಸಿನೆಮಾಗಳು
ಟಿ.ಎಸ್. ನಾಗಾಭರಣರ ‘ಅಲ್ಲಮ’ ಹಾಗೂ ಅನನ್ಯ ಕಾಸರವಳ್ಳಿಯವರ ‘ಹರಿಕಥಾ ಪ್ರಸಂಗ’ ಪ್ರದರ್ಶನಗೊಳ್ಳುತ್ತಿರುವ ಎರಡು ಸಿನೆಮಾಗಳು.
ಈ ಉತ್ಸವದಲ್ಲಿ ಸಂಕಲನ, ಚಿತ್ರಕಥೆ, ಸಾಹಸ ನಿರ್ದೇಶನ, ಸಿನೆಛಾಯಾಗ್ರಹಣದಂಥ ವಿಷಯಗಳ ಬಗ್ಗೆ ಮಾಸ್ಟರ್ ಕ್ಲಾಸ್ ನಡೆದರೆ, ಚಲನಚಿತ್ರ ಪ್ರಚಾರ, ಸಾರ್ವಜನಿಕ ಸಂಪರ್ಕ ಮುಂತಾದ ವಿಷಯಗಳ ಬಗ್ಗೆ ಕಾರ್ಯಾಗಾರ ಇರಲಿದೆ.