we-back-copy

ಸಾಂಗತ್ಯ ಬ್ಲಾಗ್ ಇಂದಿನಿಂದ ಮತ್ತೆ ಸಕ್ರಿಯವಾಗಲಿದೆ.

ಸುಮಾರು ಒಂದು ವರ್ಷದಿಂದ ನಿರಂತರವಾಗಿ ಪೋಸ್ಟ್ ಗಳನ್ನು ಹಾಕಲಾಗಿರಲಿಲ್ಲ. ಸದಸ್ಯರ ಕಾರ್ಯ  ಒತ್ತಡ  ಇತ್ಯಾದಿ ಕಾರಣಗಳಿಂದ ರೆಗ್ಯುಲರ್ ಆಗಿರಲು ಸಾಧ್ಯವಾಗಿರಲಿಲ್ಲ ಆದರೂ ನಿತ್ಯವೂ ಹಲವಾರು ಓದುಗರು ಭೇಟಿ ನೀಡುತ್ತಿರುವುದು ನಮ್ಮ ಹೊಣೆಗಾರಿಕೆಯನ್ನು ನೆನಪಿಸಿದೆ. ಇಷ್ಟು ದಿನ ಪೋಸ್ಟ್ ಗಳನ್ನು ಹಾಕುವಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳದಿದ್ದಕ್ಕೆ ವಿಷಾದಿಸುತ್ತೇವೆ. ಇನ್ನು ಮುಂದೆ ನಿರಂತರ ಪೋಸ್ಟ್ ಗಳನ್ನು ಹಾಕಲು ನಿರ್ಧರಿಸಲಾಗಿದೆ.

ಈಗಾಗಲೇ ನಮ್ಮ ಜನವರಿ ಶಿಬಿರಕ್ಕೆ ಸಿದ್ಧತೆ ಆರಂಭಿಸಲಾಗಿದೆ. ಇದರೊಂದಿಗೆ ಗೋವಾದಲ್ಲಿ ನವೆಂಬರ್ 20 ರಿಂದ ಪ್ರಾರಂಭವಾಗುವ 47 ನೇ ಚಲನಚಿತ್ರೋತ್ಸವದ ವರದಿಯನ್ನೂ ಸಾಂಗತ್ಯ ಕೈಗೊಳ್ಳಲಿದೆ.

ಎಂದಿನಂತೆ ನಿಮ್ಮ ಸಹಕಾರವಿರಲಿ.

ಸಾಂಗತ್ಯ ಟ್ರಸ್ಟ್

Advertisements