15 th camp new copy

ಸಾಂಗತ್ಯ (ರಿ) ಆಗಸ್ಟ್ 27-28 ರಂದು 15 ನೇ ಸಿನಿಮಾ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಏರ್ಪಡಿಸಿದೆ.

ಖ್ಯಾತ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು 94805 82027, 9448348517 ಗೆ ಸಂಪರ್ಕಿಸಬಹುದು.

ಶಿಬಿರದಲ್ಲಿ ಪವನ್ ಕುಮಾರ್ ಆವರ ‘ಯೂ ಟರ್ನ್’ ಚಿತ್ರವನ್ನು ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲಾಗುವುದು. ಬಳಿಕ ನಿರ್ದೇಶಕರೊಂದಿಗೆ ಚರ್ಚೆ ಇರಲಿದೆ.

ಸಾಂಗತ್ಯವು ಏಳು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳ ಪ್ರದರ್ಶನ ಹಾಗೂ ಸಂವಾದವಿರಲಿದೆ. ಸಿನಿಮಾ ತಜ್ಞರು ಸಿನಿಮಾ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳುವ ಬಗೆ ಕುರಿತು ವಿವರಿಸುವರು.

ಇದುವರೆಗೆ ಚಿತ್ರ ತಜ್ಞರಾದ ಗುರುಪ್ರಸಾದ್, ಲಿಂಗದೇವರು, ಉಮಾಶಂಕರ ಸ್ವಾಮಿ, ಸುದರ್ಶನ್, ಪಿ ಶೇಷಾದ್ರಿ, ಅಶೋಕ್ ಕಶ್ಯಪ್, ರೇಖಾ ರಾಣಿ, ಮಂಸೋರೆ, ಸಂಚಾರಿ ವಿಜಯ್, ಗುಣ, ಎಸ್. ದಿವಾಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisements