ಪಣಜಿ : ಹದಿನಾಲ್ಕನೇ ಮುಂಬಯಿ ಡಾಕ್ಯುಮೆಂಟರಿ ಚಿತ್ರೋತ್ಸವ(ಎಂಐಎಫ್ ಎಫ್) ಜನವರಿ 28 ರಿಂದ ಫೆಬ್ರವರಿ

ಮುಂಬಯಿ ಸಾಕ್ಷ್ಯಚಿತ್ರ ಉತ್ಸವ ಕುರಿತು ಜಾಕಿಶ್ರಾಫ್, ಮುಖೇಶ್ ಶರ್ಮಾ, ಮನೀಷ್ ದೇಸಾಯಿ ವಿವರ ನೀಡಿದರು.
ಮುಂಬಯಿ ಸಾಕ್ಷ್ಯಚಿತ್ರ ಉತ್ಸವ ಕುರಿತು ಜಾಕಿಶ್ರಾಫ್, ಮುಖೇಶ್ ಶರ್ಮಾ, ಮನೀಷ್ ದೇಸಾಯಿ ವಿವರ ನೀಡಿದರು.

3 ರವರೆಗೆ ನಡೆಯಲಿದೆ.

ಫಿಲ್ಮ್ ಡಿವಿಷನ್ ನ ಚಿತ್ರಮಂದಿರಗಳು, ರಷ್ಯನ್ ಕಲ್ಚರಲ್ ಸೆಂಟರ್, ಸೋಫಿಯಾ ಕಾಲೇಜಿನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮ ಪ್ರಭಾದೇವಿಯ ರವೀಂದ್ರ ನಾಟ್ಯ ಮಂದಿರದಲ್ಲಿ ನಡೆಯಲಿದೆ. ಇದನ್ನು ಫಿಲ್ಮ್ ಡಿವಿಷನ್, ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ, ಮಹಾರಾಷ್ಟ್ರದ ರಾಜ್ಯ ಸರಕಾರದ ಸಹಕಾರದಲ್ಲಿ ಸಂಘಟಿಸುತ್ತಿವೆ.

ಡಾಕ್ಯುಮೆಂಟರಿ ಚಿತ್ರೋತ್ಸವವನ್ನು ಪ್ರೋತ್ಸಾಹಿಸಲು ಇಫಿ ಚಿತ್ರೋತ್ಸವಕ್ಕೆ ಬಂದಿದ್ದ ನಟ ಜಾಕಿಶ್ರಾಫ್ ಹಾಗೂ ಫಿಲ್ಮ್ ಡಿವಿಷನ್ ಮಹಾನಿರ್ದೇಶಕ ಮುಕೇಶ್ ಶರ್ಮಾ ಮಾಧ್ಯಮದವರೊಂದಿಗೆ ಮಾತನಾಡಿ, ಸಾಕ್ಷ್ಯಚಿತ್ರಗಳು ಸಮಾಜದ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ದಕ್ಷಿಣ ಏಷ್ಯಾದಲ್ಲಿ ಪ್ರಸಿದ್ಧವಾಗಿರುವ ಈ ಸಾಕ್ಷ್ಯಚಿತ್ರ ಉತ್ಸವಕ್ಕೆ ಹಲವು ದೇಶಗಳಿಂದ ಪ್ರತಿ ವರ್ಷವೂ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 831 ಪ್ರವೇಶಗಳು ಬಂದಿದ್ದು, ಆಯ್ಕೆ ಪ್ರಕ್ರಿಯೆ ನಡೆದಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ, ತಾಂತ್ರಿಕ, ನ್ಯೂ ಮೀಡಿಯಾ, ಆನಿಮೇಷನ್ ಸೇರಿದಂತೆ ಹಲವು ವಿಭಾಗಗಳು ಇರಲಿವೆ. ಅತ್ಯುತ್ತಮ ಸಾಕ್ಷ್ಯಚಿತ್ರ ನಿರ್ದೇಶಕರನ್ನು ಸನ್ಮಾನಿಸಲಾಗುತ್ತಿದೆ.

ಉತ್ಸವದಲ್ಲಿ ಭಾಗವಹಿಸುವವರು ನೋಂದಾಯಿಸಬಹುದು.  www.miff.in