13 th invitation copy

ಸಾಂಗತ್ಯ 13 ನೇ ಶಿಬಿರ ಆಗಸ್ಟ್ 29-30 ರಂದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದದಲ್ಲಿ ನಡೆಯಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ “ಹರಿವು” ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗಲಿದೆ. ಇದರ ಟ್ರೇಲರ್ ಗೆ ಇಲ್ಲಿ ಕ್ಲಿಕ್ ಮಾಡಿ

ಶಿಬಿರದ ಸಮಾರೋಪ ಚಿತ್ರವಾಗಿ ಬೀಜಿಂಗ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದ್ದ ವಿಶಿಷ್ಟ ಶೈಲಿಯ ‘ಅತ್ತಿಹಣ್ಣು ಮತ್ತು ಕಣಜ” ಪ್ರದರ್ಶನಗೊಳ್ಳಲಿದೆ. ಇದರ ನಿರ್ದೇಶನ ಎಂ.ಎಸ್. ಪ್ರಕಾಶ್ ಬಾಬು ಅವರದ್ದು. ಇದರ ಟ್ರೇಲರ್ ಗೆ ಇಲ್ಲಿ ಕ್ಲಿಕ್ ಮಾಡಿ.

ಶಿಬಿರದಲ್ಲಿ ಹರಿವು ಚಿತ್ರದ ನಿರ್ದೇಶಕ ಮಂಸೋರೆ ಪಾಲ್ಗೊಳ್ಳುವರು. ಸಾಂಗತ್ಯದ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ವರ ಗುರುಸ್ವಾಮಿ ಚರ್ಚೆಯ ನೇತೃತ್ವ ವಹಿಸುವರು. ಉಳಿದಂತೆ ಪ್ರತಿ ಚಿತ್ರಗಳ ಚರ್ಚೆಯನ್ನು ಬೇರೆ ಬೇರೆಯವರು ನಡೆಸಿಕೊಡಲಿದ್ದು, ಮೊದಲ ಬಾರಿಗೆ ನಾಲ್ಕು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಮಹಾಂತೇಶ್, ಮುಖೇಶ್ ಎಚ್. ಎನ್ಹಾ ಹಾಗೂ ಶ್ರೀಕರ ಭಟ್ ರೂಪಿಸಿರುವ ಆನುಕ್ರಮವಾಗಿ ‘ಪರಿಧಿ’, ಯು, ಪರಿವರ್ತನೆ ಹಾಗೂ schizo ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಆ. 30 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ  ವ್ಯವಸ್ಥಾಪಕ ಟ್ರಸ್ಟಿ ಕಡಿದಾಳ್ ಪ್ರಕಾಶ್, ಚಿತ್ರ ನಿರ್ದೇಶಕ ಮಂಸೋರೆ, ಪರಮೇಶ್ವರ ಗುರುಸ್ವಾಮಿ ಪಾಲ್ಗೊಳ್ಳುವರು.

ಕುಪ್ಪಳಿಗೆ ಬರುವವರಿಗೆ ಮಾಹಿತಿ

ಕುಪ್ಪಳಿಯನ್ನುತಲುಪುವಮಾರ್ಗ : ಬೆಂಗಳೂರಿನಿಂದ –– ಕುಪ್ಪಳಿಗೆಪ್ರತಿದಿನರಾತ್ರಿ 10 ಕ್ಕೆಬೆಂಗಳೂರುಬಸ್ನಿಲ್ದಾಣದಿಂದರಾಜಹಂಸಬಸ್ಇದೆ. ಅದರಲ್ಲಿಕುಳಿತರೆಬೆಳಗ್ಗೆ 6. 30 ಸುಮಾರಿಗೆಕುಪ್ಪಳಿಗೆತಲುಪುತ್ತೀರಿ. ಅಲ್ಲಿಯೇಹೇಮಾಂಗಣವಿದೆ (ಕುವೆಂಪುಮನೆಗಿಂತಸ್ವಲ್ಪಮೊದಲು). ಅಲ್ಲಿಯೇಇಳಿಯಬೇಕು. ತುಮಕೂರು, ಅರಸೀಕೆರೆ ಇತ್ಯಾದಿ ಕಡೆಯಿಂದ ಬರುವವರೂ ಇದೇ ಬಸ್ಸನ್ನು ಆಶ್ರಯಿಸಬಹುದು. ಇಲ್ಲವಾದರೆ ಶಿವಮೊಗ್ಗಕ್ಕೆ ಬಂದು ಬರಬಹುದು.

– ಭದ್ರಾವತಿಯಿಂದ ಬರುವವರು ನೇರವಾಗಿ ಉಡುಪಿ-ಭದ್ರಾವತಿ ಬಸ್ಸುಗಳನ್ನು ಹತ್ತಿ ಕೊಪ್ಪದಲ್ಲಿ ಇಳಿದು, ಅಲ್ಲಿಂದ ತೀರ್ಥಹಳ್ಳಿ ಬಸ್ ಮೂಲಕ ಬರಬಹುದು.

-ಮೈಸೂರಿನಿಂದ ಬರುವವರು ಚಿಕ್ಕಮಗಳೂರಿಗೆ ಬಂದು, ಅಲ್ಲಿಂದ ಕೊಪ್ಪ ಬಸ್ ಹತ್ತಿ ಬರಬೇಕು. ಅಲ್ಲಿಂದ ತೀರ್ಥಹಳ್ಳಿ ಬಸ್ ಹತ್ತಿ ಗಡಿಕಲ್ಲು ಎಂಬಲ್ಲಿ ಇಳಿದು (ಕವಿಶೈಲಕ್ಕೆ ಹೋಗಬೇಕೆಂದು ವಿನಂತಿಸಿದರೆ ಅದರ ಬಳಿಯೇ ಖಾಸಗಿ ಬಸ್ ನಿಲ್ಲಿಸುತ್ತಾರೆ) ನಡೆದು ಬರಬೇಕು. ಇಲ್ಲವಾದರೆ ಮೈಸೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ರೈಲು ಅಥವಾ ಬಸ್ಸಿನಲ್ಲಿ ಬಂದು, ಅಲ್ಲಿಂದ ತೀರ್ಥಹಳ್ಳಿಗೆ ಬಂದು, ಕೊಪ್ಪ ಬಸ್ ಹತ್ತಿ ಬರಬೇಕು.

– ಉತ್ತರ ಕರ್ನಾಟಕದ ಭಾಗಗಳಿಂದ ಬರುವವರು ಶಿವಮೊಗ್ಗಕ್ಕೆ ಮೂಲಕ ಬರುವುದು ಸೂಕ್ತ.

– ಒಂದುವೇಳೆ ಶಿವಮೊಗ್ಗದ  ಕಡೆಯಿಂದ ಬರುವುದಾದರೆ(ಶಿವಮೊಗ್ಗದವರೆಗೆ ಯಾವ ಭಾಗದಿಂದಲಾದರೂ ಬನ್ನಿ, ನಂತರ) ಶಿವಮೊಗ್ಗದಿಂಧ ತೀರ್ಥಹಳ್ಳಿಗೆ ಬರಬೇಕು. ಅಲ್ಲಿಂದ ಕೊಪ್ಪಕ್ಕೆಹೋಗುವ ಬಸ್ಸನ್ನು ಹಿಡಿದು, ಗಡಿಕಲ್ಲು-ಕುಪ್ಪಳಿ ಎಂಬಲ್ಲಿ ಇಳಿದು ಒಳಗೆ ಐದು ನಿಮಿಷ ನಡೆದು ಬಂದರೆ ಹೇಮಾಂಗಣ ಸಿಗುತ್ತದೆ.

ಮಾಹಿತಿಗೆ 94483 48517, 94805 82027

ಧನ್ಯವಾದಗಳೊಂದಿಗೆ–