Raam Reddy at Locarno Film fest

ರಾಮ್ ರೆಡ್ಡಿಯವರ ಮೊದಲ ಚಲನಚಿತ್ರ ‘ತಿಥಿ’ ಪ್ರತಿಷ್ಠಿತ ಲೊಕೊರ್ನೊ 2015 ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿದೆ.

ಲಭ್ಯ ಮಾಹಿತಿ ಪ್ರಕಾರ ಈ ಚಿತ್ರೋತ್ಸವದಲ್ಲಿ ಎಂಟು ವರ್ಷಗಳ ನಂತರ ಅತ್ಯುತ್ತಮ ಭಾರತೀಯ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿರುವ ಚಲನಚಿತ್ರ ಇದಾಗಿದೆ.

ಗೋಲ್ಡನ್ ಲೆಪರ್ಡ್ ಪ್ರಶಸ್ತಿ ಸೇರಿದಂತೆ ಎರಡು ಪ್ರಶಸ್ತಿಗಳಿಗೆ ಭಾಜನವಾಗಿರುವ ‘ತಿಥಿ’ (Pardo d’oro Cineasti Del Presente Premio Nescens”  (Golden Leopard, Filmmakers of the Present Competition) and “Swatch First Feature Award”).

Thithi Still 2

ಆಗಸ್ಟ್ 5-15 ರವರೆಗೆ ನಡೆದ ಚಿತ್ರೋತ್ಸವದಲ್ಲಿ Concorso Cineasti del Presente ವಿಭಾಗದಲ್ಲಿ ಪ್ರದರ್ಶಿತವಾಗಿತ್ತು. ಈ ಹಿಂದೆ ಈ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿದ್ದ ಕೆಲವು ಭಾರತೀಯ ಚಲನಚಿತ್ರಗಳೆಂದರೆ ಲಗಾನ್, ಬ್ಲ್ಯಾಕ್ ಫ್ರೈಡೇ, ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್.

ಈ ಚಲನಚಿತ್ರಕಳೆದ ವರ್ಷದ ಎನ್ ಎಫ್ ಡಿ ಸಿ ಯ ಫಿಲ್ಮ್ ಬಜಾರ್ ನ “ವರ್ಕ್ ಇನ್ ಪ್ರೋಗ್ರೆಸ್” ಲ್ಯಾಬ್ ನಲ್ಲಿ ಆಯ್ಕೆಯಾಗಿತ್ತು.

ರಾಮ್ ರೆಡ್ಡಿಯವರು ದಿಲ್ಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದು, ಪ್ರಾಗ್ ಸಿನಿಮಾ ಸ್ಕೂಲ್ ನಲ್ಲಿ ಅಭ್ಯಾಸ ಮಾಡಿದವರು. ಸಾಕಷ್ಟು ಪ್ರಶಂಸೆಗೀಡಾದ ‘ಇಕ಻’ ಕಿರುಚಿತ್ರವನ್ನು ಈಮೊದಲು ಇವರು ನಿರ್ದೇಶಿಸಿದ್ದರು.