Saangatya

 

ಸಾಂಗತ್ಯವು ಹಲವು ತಿಂಗಳಿಂದ ಹೆಚ್ಚು ಪೋಸ್ಟ್ ಗಳನ್ನು ಪ್ರಕಟಿಸುತ್ತಿರಲಿಲ್ಲ. ಅದಕ್ಕೆ ಸಾಂಗತ್ಯ ಬಳಗದವರು ಬೇರೆ ಬೇರೆ ಕೆಲಸಗಳಲ್ಲಿ ಮುಳುಗಿ ಹೋಗಿದ್ದೂ ಒಂದು ಕಾರಣ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತದೆ.

ಈಗ ಮತ್ತೆ ಸಾಂಗತ್ಯ ಪೋಸ್ಟ್ ಗಳನ್ನು ಪ್ರಕಟಿಸಲು ಸನ್ನದ್ಧವಾಗಿದೆ. ವಾರಕ್ಕೆ ಕನಿಷ್ಠ ಎರಡು ಉತ್ತಮವಾದ ಪೋಸ್ಟ್ ಗಳನ್ನು ಹಾಕಬೇಕೆನ್ನುವುದು ನಮ್ಮ ನಿಲುವು. ಇದಲ್ಲದೇ, ಹೆಚ್ಚಿನ ಲೇಖನಗಳು ಬಂದರೆ ಅದನ್ನು ಪ್ರಕಟಿಸುವೆವು.

ಹೊಸ ಸಿನಿಮಾಗಳ ವಿಮರ್ಶೆ, ಅನಿಸಿಕೆಗಳನ್ನು ನಮಗೂ ಕಳಿಸಬಹುದು. ನಮ್ಮ ಇ ಮೇಲ್ ಐಡಿ saangatya@gmail.com.

ಈ ಮಧ್ಯೆ ಸಾಂಗತ್ಯ ಈ ಬಾರಿ ಚಿತ್ರೋತ್ಸವದಲ್ಲಿ (ಆಗಸ್ಟ್ 29-30, 2015, ಕುಪ್ಪಳಿ, ಶಿವಮೊಗ್ಗ) ಕಿರುಚಿತ್ರಗಳ ಪ್ರದರ್ಶನಕ್ಕೆ ಮುಂದಾಗಿದೆ. ಹಲವರು ತಮ್ಮ ಪ್ರವೇಶಗಳನ್ನು ಕಳುಹಿಸಿದ್ದು, ಆಯ್ಕೆಯ ಪ್ರಕ್ರಿಯೆ ನಡೆದಿದೆ.

ಮತ್ತೊಂದು ಹೊಸ ಸಂಗತಿಯೆಂದರೆ, ಸಾಂಗತ್ಯ ತನ್ನ ಲೋಗೊ ಬಿಡುಗಡೆ ಮಾಡುತ್ತಿದೆ. ಬಳಗದ ಸದಸ್ಯರಾದ ಅಕ್ಷಯ್ ಹೆಗಡೆ ಈ ಲೋಗೋವನ್ನು ರೂಪಿಸಿದ್ದಾರೆ. ಇದನ್ನು ಇಲ್ಲಿ ಪ್ರಕಟಿಸಿದ್ದು, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

 

Advertisements