SF

ಸಾಂಗತ್ಯವು ಈ ಬಾರಿ ತನ್ನ 13 ನೇ ಚಿತ್ರೋತ್ಸವದಲ್ಲಿ ಕಿರುಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಿದೆ.

2014 ಜನವರಿಯಿಂದ 2015 ಮೇ ನೊಳಗೆ ರೂಪಿಸಿರುವ ಕಿರುಚಿತ್ರಗಳನ್ನು ಆಸಕ್ತರು ಆಯ್ಕೆಗೆ ಕಳಿಸಬಹುದು. ಆಯ್ಕೆಗೆ ಬಂದ ಕಿರುಚಿತ್ರಗಳ ಪೈಕಿ ಪ್ರದರ್ಶನಕ್ಕೆ ಅರ್ಹವಾದ ಮೂರರಿಂದ ನಾಲ್ಕು ಚಿತ್ರ ಅಥವಾ ಅದಕ್ಕಿಂತಲೂ ಹೆಚ್ಚು (ಒಟ್ಟು 2 ಗಂಟೆಗೆ ಹೊಂದಿಕೊಳ್ಳುವಂತೆ) ನಮ್ಮ ಚಿತ್ರೋತ್ಸವದಲ್ಲಿ (13 th Saangatya Cine Summit) ಪ್ರದರ್ಶಿಸಲಾಗುವುದು.

ಆಯ್ಕೆಯಾಗಿ ಪ್ರದರ್ಶನಗೊಂಡ ಚಿತ್ರಗಳಿಗೆ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣ ಪತ್ರವನ್ನು (Participiation certificate) ನೀಡಲಾಗುವುದು.

ಚಿತ್ರಗಳ ಆಯ್ಕೆಗೆ ಇರುವ ಇತರೆ ಮಾನದಂಡಗಳು :

1. ಚಿತ್ರಗಳು ಜನವರಿ 2014 ರಿಂದ 2015 ಮೇ ನೊಳಗೆ ರೂಪಿಸಿದ್ದಾಗಿರಬೇಕು.

2. ಕಿರುಚಿತ್ರಗಳು ಮೂವತ್ತು ನಿಮಿಷದೊಳಗಿರಬೇಕು. ಮೂವತ್ತು ನಿಮಿಷಕ್ಕಿಂತ ಹೆಚ್ಚಿರುವ ಚಿತ್ರಗಳನ್ನು ಆಯ್ಕೆ ಸಮಿತಿ ಪರಿಗಣಿಸುವುದಿಲ್ಲ.

3. ಕಿರುಚಿತ್ರಗಳು ನಿಮ್ಮದೇ ಸ್ವಂತ ಕೃತಿಯಾಗಿರಬೇಕು. ಯಾವುದರ ಅವತರಣಿಕೆ (remake) ಅಥವಾ ಅಳವಡಿಸಿದ (adoptation) ಚಿತ್ರಗಳು ಆಗುವುದಿಲ್ಲ.

4. ಆದರೆ, ಯಾವುದಾದರೂ ಸಾಹಿತ್ಯ ಕೃತಿಗಳ ಅಳವಡಿಕೆ (adoptation) ಆಗಬಹುದು. ಅದೂ ಇದೇ ಪ್ರಥಮ ಪ್ರಯತ್ನವಾಗಿರಬೇಕು.

5. ಕಿರುಚಿತ್ರಗಳ ಒಂದು ಡಿವಿಡಿ ಪ್ರತಿಯನ್ನು ಆಗಸ್ಟ್ 5 ರೊಳಗೆ ಈ ಕೆಳಗಿನ ವಿಳಾಸಕ್ಕೆ ಸಂಪೂರ್ಣ ವಿವರಗಳೊಂದಿಗೆ (ನಿರ್ದೇಶಕರ ಹೆಸರು, ನಿರ್ಮಾಪಕರ ಹೆಸರು, ಸಂಪರ್ಕ ಸಂಖ್ಯೆ, ಸಂಕ್ಷಿಪ್ತ ಕಥಾ ವಿವರಣೆ, ಪಾತ್ರ ವರ್ಗ ವಿವರ, ಭಾಷೆ, ಸಮಯದ ವಿವರ) ಕಳುಹಿಸಬೇಕು.

ನೀವು ಕಳುಹಿಸಬೇಕಾದ ವಿಳಾಸ :

SAANGATYA C/O G. PARAMESHWARA, “VAISHAKA”, # 4, 2 nd Cross, Markham Road, Ashoknagara, Bangalore-25, Ph : 9448448684.

 

 

Advertisements