red ballon

ಸಾಂಗತ್ಯ (ರಿ) ತನ್ನ 13 ನೇ ಸಿನಿಮಾ ಶಿಬಿರ (13 th cinema Summit) ಆಗಸ್ಟ್ 29 ಮತ್ತು 30 ರಂದು ಕುಪ್ಪಳಿಯಲ್ಲಿ ನಡೆಯಲಿದೆ.

ಎಂದಿನಂತೆ ವಿವಿಧ ಭಾಷೆಗಳ ಪ್ರದರ್ಶನ, ತಜ್ಞರೊಂದಿಗೆ ಸಂವಾದ, ಮಾಸ್ಟರ್ ಕ್ಲಾಸ್, ಗುಂಪು ಚರ್ಚೆ ಮತ್ತಿತರ ಚಟುವಟಿಕೆಗಳನ್ನು ಶಿಬಿರದಲ್ಲಿ ನಡೆಸಲಾಗುವುದು.

ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯುತ್ತಮ ತಜ್ಞರನ್ನು ಆಹ್ವಾನಿಸುವ ಪ್ರಯತ್ನ ನಡೆದಿದೆ. ಶಿಬಿರಕ್ಕೆ ಈಗಾಗಲೇ ನೊಂದಣಿ ಆರಂಭಿಸಿದ್ದು, 500 ರೂ. ಶುಲ್ಕವಾಗಿರುತ್ತದೆ. ಆಸಕ್ತರು ಇಮೇಲ್ (saangatya@gmail.com) ಗೆ ತಮ್ಮ ಹೆಸರು, ಆಸಕ್ತಿ, ವಿಳಾಸ, ಸಂಪರ್ಕ ಸಂಖ್ಯೆ (ಫೋನ್)ಯೊಂದಿಗೆ ಅರ್ಜಿ ಸಲ್ಲಿಸಬಹುದು. ಒಮ್ಮೆ ಸಾಂಗತ್ಯ ಬಳಗವು ನಿಮ್ಮ ಅರ್ಜಿಯನ್ನು ಅನುಮೋದಿಸಿದ ಮೇಲೆ ಹಣ ಪಾವತಿ ವಿವರಗಳನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಇಮೇಲ್ saangatya@gmail.com, 94483 48517.

 

Advertisements