ಹತ್ತನೇ ಶಿಬಿರದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ಶಿಬಿರಾರ್ಥಿಗಳು. ಶಿಬಿರ ನಿರ್ದೇಶಕರಾಗಿ ಚಿತ್ರ ನಿರ್ದೇಶಕ ಉಮಾಶಂಕರ್ ಸ್ವಾಮಿ, ಚಿತ್ರ ನಿರ್ಮಾಪಕಿ ವಸುಂಧರಾ ಕುಲಕರ್ಣಿ ಭಾಗವಹಿಸಿದ್ದರು.
ಹತ್ತನೇ ಶಿಬಿರದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ಶಿಬಿರಾರ್ಥಿಗಳು. ಶಿಬಿರ ನಿರ್ದೇಶಕರಾಗಿ ಚಿತ್ರ ನಿರ್ದೇಶಕ ಉಮಾಶಂಕರ್ ಸ್ವಾಮಿ, ಚಿತ್ರ ನಿರ್ಮಾಪಕಿ ವಸುಂಧರಾ ಕುಲಕರ್ಣಿ ಭಾಗವಹಿಸಿದ್ದರು.

ಸಾಂಗತ್ಯದ ಮುಂದಿನ ಚಿತ್ರ ಶಿಬಿರ ಫೆಬ್ರವರಿ 28 ಹಾಗೂ ಮಾರ್ಚ್ 1 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ನಡೆಯಲಿದೆ.

ಇದು ಹನ್ನೆರಡನೇ ಶಿಬಿರವಾಗಿದ್ದು, ಹೆಸರಾಂತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತಿತರ ಕ್ಷೇತ್ರ ತಜ್ಞರು ಭಾಗವಹಿಸುವ ಸಾಧ್ಯತೆಯಿದೆ.

ಎಂದಿನಂತೆ ಕೆಲವು ಆಯ್ದ ಚಿತ್ರಗಳ ಪ್ರದರ್ಶನ ಹಾಗೂ ಸಂವಾದ, ಚರ್ಚೆ ಇರಲಿದೆ. ಹಿಂದಿನ ಶಿಬಿರವನ್ನು ಹೆಸರಾಂತ ಚಿತ್ರ ನಿರ್ದೇಶಕ ಪಿ ಶೇಷಾದ್ರಿ ನಡೆಸಿಕೊಟ್ಟಿದ್ದರು.

ಭಾರತೀಯ ಪನೋರಮಾದ ಚಿತ್ರಗಳಲ್ಲದೇ, ಅಂತಾರಾಷ್ಟ್ರೀಯ ಕೆಲವು ಪ್ರಮುಖ ಚಿತ್ರಗಳು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು. ಶಿಬಿರದ ನಿರ್ದೇಶಕರೊಂದಿಗೆ ಮುಕ್ತ ಸಂವಾದವೂ ಇರಲಿದ್ದು, ಸಿನಿಮಾದ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅವಕಾಶ ಶಿಬಿರವು ಕಲ್ಪಿಸಲಿದೆ.

ಇದು ಸಿನಿಮಾ ರಸಗ್ರಹಣಕ್ಕೆ ಸಂಬಂಧಿಸಿದ್ದ ಶಿಬಿರವಾಗಿದ್ದು, ಒಂದು ಸಿನಿಮಾವನ್ನು ಹೆಚ್ಚು ಉತ್ತಮವಾಗಿ ನೋಡುವುದು ಹೇಗೆ ಎಂಬುದನ್ನು ತಿಳಿಯುವುದಕ್ಕೆ ಇರುವಂಥದ್ದು.

ಆಸಕ್ತರು ತಮ್ಮ ಪುಟ್ಟ ಸ್ವ ವಿವರ (ಹೆಸರು, ಕೆಲಸ, ಆಸಕ್ತಿ, ನಿಮಗೆ ಇದುವರೆಗೆ ಇಷ್ಟವಾಗಿರಬಹುದಾದ ನಾಲ್ಕೈದು ಸಿನಿಮಾಗಳ ಹೆಸರು (ಆರ್ಟ್ ಫಿಲಂ, ಕಮರ್ಷಿಯಲ್ ಫಿಲಂ ಎಂಬ ಭೇದವಿಲ್ಲ) ಹಾಗೂ ಸಂಪರ್ಕ ಮೊಬೈಲ್ ಸಂಖ್ಯೆಯನ್ನು ನಮ್ಮ saangatya@gmail.com ಗೆ ಕಳಿಸಿಕೊಡಿ. ನಂತರ ನಾವು ನಿಮ್ಮ ಅರ್ಜಿಯನ್ನು ಅನುಮೋದಿಸಲಾಗುವುದು.

ಶಿಬಿರದ ಶುಲ್ಕ 500 ರೂ. ಗಳಾಗಿದ್ದು, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮಾಹಿತಿಗೆ 9448348517, 94805 82027.