ping-pong-summer-dvd-cover-96

ಬೆಂಗಳೂರು : ಏಳನೇ ಬೆಂಗಳೂರು ಚಿತ್ರೋತ್ಸವ ಇಂದು ಸಂಜೆ ಸಂಪನ್ನಗೊಳ್ಳುತ್ತಿದೆ.

ಡಿಸೆಂಬ ರ್ 4 ರಿಂದ ಪ್ರಾರಂಭವಾದ ಚಿತ್ರೋತ್ಸವ 7 ದಿನಗಳ ಕಾಲ 175 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಿತು. ಪ್ರಪಂಚದ ಸಿನಿಮಾ, ಮಹಿಳೆಯರ ಮೇಲಿನ ಹಿಂಸೆಯ ವಿರುದ್ಧದ ಜಾಗೃತಿ ಮೂಡಿಸುವಂಥ ಸಿನಿಮಾ, ಭಾರತೀಯ ಪನೋರಮಾದ ಸಿನಿಮಾ, ಕನ್ನಡದ ವಿಶೇಷ ವಿಭಾಗದಡಿಯ ಸಿನಿಮಾಗಳೂ ಸೇರಿದಂತೆ ವಿವಿಧ ಚಲನಚಿತ್ರಗಳು ಚಿತ್ರರಸಿಕರನ್ನು ರಂಜಿಸಿದವು.

ಮಹಿಳೆಯರ ಮೇಲಿನ ಹಿಂಸೆಯ ಕುರಿತಾದ ವಿಚಾರ ಸಂಕಿರಣವೂ ಸೇರಿದಂತೆ, ಕನ್ನಡ ಚಲನಚಿತ್ರಗಳ ಭವಿಷ್ಯದ ಕುರಿತಾದ ಚರ್ಚೆ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಛಾಯಾಗ್ರಾಹಕ ವಿಕೆ ಮೂರ್ತಿಯವರ ನೆನಪಿನಲ್ಲಿ ಖ್ಯಾತ ಸಿನೆ ಛಾಯಾಗ್ರಾಹಕರಾದ ಗೋವಿಂದ ನಿಹಲಾನಿ, ಜಿ.ಎಸ್. ಭಾಸ್ಕರ್ ಮತ್ತಿತರರು ನಡೆಸಿಕೊಟ್ಟ ಕಾರ್ಯಾಗಾರ ಉತ್ಸವದ ವಿಶೇಷ.

ಸಂಜೆ 6 ಗಂಟೆಗೆ ವಸಂತ ನಗರದಲ್ಲಿರುವ ಡಾ. ಅಂಬೇಡ್ಕರ್ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲರಾದ ವಾಜುಭಾಯಿ ರೂಢಬಾಯಿವಾಲಾ, ಸಚಿವ ಆರ್ ರೋಷನ್ ಬೇಗ್, ನಟ ಪುನೀತ್ ರಾಜ್ ಕುಮಾರ್ ಮತ್ತಿತರರು ಭಾಗವಹಿಸುವರು.

ಸಮಾರೋಪ ಚಿತ್ರವಾಗಿ ಅಮೆರಿಕದ ಮೈಕೆಲ್ ಟುಲಿಯವರ “ಪಿಂಗ್ ಪಾಂಗ್ ಸಮ್ಮರ್” ಚಿತ್ರ ಪ್ರದರ್ಶನಗೊಳ್ಳಲಿದೆ.