ಬೆಂಗಳೂರು : ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಈ ಸಮಸ್ಯೆಯತ್ತ ಮೊದಲು ಗಮನಹರಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಏಳನೇ ಬೆಂಗಳೂರು ಚಿತ್ರೋತ್ಸವದಲ್ಲಿ “ಕನ್ನಡ ಸಿನಿಮಾದ ಸಮಕಾಲೀನ ಸವಾಲುಗಳು” ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಹಲವು ಸಿನಿಮಾ ನಿರ್ದೇಶಕರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರುMr. Suresh Heblikar.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನೂ ಉತ್ತಮವಾದ ಸಿನಿಮಾ ವಾತಾವರಣ ನಿರ್ಮಿಸಬೇಕಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಯುವಜಗತ್ತು ಹೆಚ್ಚು ತಂತ್ರಜ್ಞಾನ ಮುಖಿಯಾಗಿದೆ. ಹಾಗಾಗಿ ಅದನ್ನೂ ಗಮನದಲ್ಲಿರಿಸಬೇಕು ಎಂದು ಮತ್ತೆ ಕೆಲವರು ಸಲಹೆ ನೀಡಿದರು.

ರಾಜ್ಯದ ಚಿತ್ರಮಂದಿರದಲ್ಲಿರುವ ಬಾಡಿಗೆ ಪದ್ಧತಿ, ಶೇಕಡಾವಾರು ಪದ್ಧತಿ ಎಲ್ಲವನ್ನೂ ಸರಿಪಡಿಸಬೇಕಿದೆ. ಇದಲ್ಲದೇ, 300 ಜನತಾ ಚಿತ್ರಮಂದಿರಗಳನ್ನು ನಿರ್ಮಿಸುವ ಅವಶ್ಯವಿದೆ ಎಂಬ ಅಭಿಮತವೂ ಕೇಳಿಬಂದಿತು.

ಎಲ್ಲ ಸಿನಿಮಾ ಕರ್ತರೂ ಸೇರಿ ಹೋರಾಡಬೇಕಾದ ಅಗತ್ಯವನ್ನು ಚರ್ಚಾಗೋಷ್ಠಿ ಪ್ರತಿಪಾದಿಸಿತು. ಚರ್ಚೆಯಲ್ಲಿ ಚಿತ್ರ ನಿರ್ದೇಶಕ ಸುರೇಶ್ ಹೆಬ್ಳೀಕರ್, ರಾಮದಾಸ್ ನಾಯ್ಡು, ನಂಜುಂಡೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ (ಬಾಬು) ಮತ್ತಿತರರು ಭಾಗವಹಿಸಿದ್ದರು.