01.-CM-Inagurated-7th-International-festival2

ಬೆಂಗಳೂರು : ಏಳನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಸಂಜೆ ಭವ್ಯವಾದ ಚಾಲನೆ ದೊರೆಯಿತು.

ಡಾ. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವವನ್ನು ಉದ್ಘಾಟಿಸಿದರು.

ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಉತ್ಸವವನ್ನು ಉದ್ಘಾಟಿಸಿದ ಸಿದ್ದರಾಮಯ್ಯ, “ರಾಜ್ಯದಲ್ಲಿ ಚಲನಚಿತ್ರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಶೀಘ್ರವೇ ಸಮಗ್ರ ಚಲನಚಿತ್ರ ನೀತಿ ಜಾರಿಗೆ ತರಲಾಗುವುದು” ಎಂದು ಭರವಸೆ ನೀಡಿದರು.

“ಸರಕಾರ ಚಲನಚಿತ್ರ ರಂಗದ ಅಭಿವೃದ್ಧಿಗೆ ಎಂದಿಗೂ ಬದ್ಧ’ ಎಂದ ಅವರು, “ಈ ಸಂಬಂಧ ನೀತಿಯನ್ನು ರೂಪಿಸಲಾಗುವುದು’ ಎಂದು ಹೇಳಿದರು.

ಇಂಥ ಉತ್ಸವಗಳು ಸಾಂಸ್ಕೃತಿಕ ವಿನಿಮಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿರಂತರವಾಗಿ ಪ್ರತಿ ವರ್ಷ ಚಿತ್ರೋತ್ಸವ ಸುಗಮವಾಗಿ ನಡೆಯುವಂತಾಗಲು ಪ್ರತ್ಯೇಕ ಶಾಖೆಯನ್ನು ಸ್ಥಾಪಿಸುವುದಾಗಿಯೂ ಪ್ರಕಟಿಸಿದರು.

02-.Information-Minister-Released-Cinema-Sambrama-Daily-Bulletin-of-Film-Festival

ಸಿನಿಮಾ ನಿರ್ದೇಶಕರಾದ ಗೋವಿಂದ ನಿಹಲಾನಿ, ನಟಿ ಸುಹಾಸಿನಿ, ನಟ ಯಶ್, ಚಿತ್ರೋತ್ಸವ ನಿರ್ದೆಶಕ ಎನ್. ವಿದ್ಯಾಶಂಕರ್, ಆರ್ ರೋಷನ್ ಬೇಗ್ , ರಾಮಲಿಂಗಾರೆಡ್ಡಿ, ಉಮಾಶ್ರೀ, ಕೆಎಫ್ ಸಿಸಿ ಅಧ್ಯಕ್ಷ ಎಚ್ ಡಿ ಗಂಗರಾಜು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗವಹಿಸಿದ್ದರು. ನಂತರ “ದಿ ಅಂಬಾಸಡರ್ ಟು ಬರ್ನ್” ಚಿತ್ರ ಪ್ರದರ್ಶಿತಗೊಂಡಿತು. ಡಿ. 5 ರಿಂದ 11 ರವರೆಗೆ ವಿವಿಧ ದೇಶಗಳ ಚಲನಚಿತ್ರಗಳು ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗಲಿವೆ.