ನವೆಂಬರ್ 20 ರಿಂದ 30 ರವರೆಗೆ ಗೋವಾದಲ್ಲಿ ನಡೆಯುವ 45 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (IFFI) ಕನ್ನಡದ ಡಿಸೆಂಬರ್ ಒಂದು ಸೇರಿದಂತೆ 26 ಭಾರತೀಯ ಭಾಷೆಯ ಚಲನಚಿತ್ರಗಳು (ಕಥಾ ವಿಭಾಗ) ಭಾನೋರಮಾ ವಿಭಾಗದಡಿ ಪ್ರದರ್ಶನಗೊಳ್ಳಲಿವೆ. 15 ಕಥೇತರ ವಿಭಾಗದಲ್ಲಿ ಬಿತ್ತರಗೊಳ್ಳಲಿದೆ.

ಗೋವಾ : 45 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾ ಸಿದ್ಧಗೊಳ್ಳುತ್ತಿದ್ದು, ಈ ಬಾರಿಯ ಚಿತ್ರೋತ್ಸವದಲ್ಲಿ ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ ‘ಡಿಸೆಂಬರ್ 1’ ಚಿತ್ರವೂ ಒಳಗೊಂಡಂತೆ ವಿವಿಧ ಭಾರತೀಯ ಭಾಷೆಗಳ ಒಟ್ಟು 26 ಕಥಾಚಿತ್ರಗಳು (ಫೀಚರ್ ವಿಭಾಗ-Feature) ಹಾಗೂ 15 ಕಥೇತರ ಚಿತ್ರಗಳು (ನಾನ್ ಫೀಚರ್-Non Feature) ಪ್ರದರ್ಶನಗೊಳ್ಳಲಿವೆ.

11 TH POSTER 1

ಹರಿಶ್ಚಂದ್ರಾಚಿ ಫ್ಯಾಕ್ಟರಿ ಚಲನಚಿತ್ರದ ಮೂಲಕ ಭಾರತೀಯ ಚಿತ್ರರಂಗ ಪ್ರವೇಶಿಸಿದ ಪರೇಶ್ ಮೊಕಾಶಿಯವರ “ಎಲಿಜಬೆತ್ ಏಕಾದಶಿ’ ಚಿತ್ರ ಈ ಬಾರಿ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿದೆ. ಕಥೇತರ ವಿಭಾಗದಲ್ಲಿ OThe Last Adieu (Director : Shabnam Sukhdev) ಉದ್ಘಾಟನಾ ಚಿತ್ರವಾಗಿದೆ. ಉಳಿದಂತೆ ಕನ್ನಡ, ತಮಿಳು, ಅಸ್ಸಾಮಿ, ಖಾಸಿ, ಒಡಿಯಾ ಭಾಷೆಗಳ ತಲಾ ಒಂದೊಂದು ಚಿತ್ರಗಳು ಆಯ್ಕೆಯಾಗಿದ್ದರೆ, ಎಂದಿನಂತೆ ಮಲಯಾಳಂ ಹಾಗೂ ಮರಾಠಿ ತಲಾ ಏಳು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬಂಗಾಳಿ ಭಾಷೆಯ 5 ಹಾಗೂ ಹಿಂದಿ ಭಾಷೆಯ 2 ಚಲನಚಿತ್ರಗಳು ಆಯ್ಕೆಗೊಂಡಿವೆ.

ವಿವರ ಇಂತಿದೆ : Othello-Assamese-Hemanta Kumar Das, Puna shcha-Bengali-Souvik Mitra, Chotoder Chobi-Bengali-Kaushik Ganguly, Bodhon-Bengali-Ayananshu Banerjee, Jodi Love Dile Na Praane-Bengali-Sudeshna Roy & Abhijit Guha, Teenkahon-Bengali-Bauddhayan Mukherji, Gour Hari Dastaan –The freedom File-Hindi-Ananth Narayan Mahadevan, Ankhon Dekhi-Hindi-Rajat Kapoor, Ri-Khasi-Pradip Kurbah, 1983-Malayalam-Abrid Shine, North 24 Kaatham-Malayalam- Anil Radhakrishnan Menon, Njan Steve Lopez-Malayalam-Rajeev Ravi, Drishyam-Malayalam-Jeethu Joseph, Munnariyippu-Malayalam-Venu, Swapaanam-Malayalam-Shaji N. Karun, Njaan- Malayalam-Ranjith, Ek Hazarachi Note-Marathi-Shrihari Sathe, Killa-Marathi-Avinash Arun, Dr. Prakash Baba Amte – The Real Hero-Marathi-Samruddhi Porey, Yellow-Marathi-Mahesh Limaye, Lokmanya – Ek Yugpurush-Marathi-Om Raut, A Rainy Day-Marathi-Rajendra Talak, Adim Vichar-Odiya-Sabyasachi Mohapatra, Kuttram Kadithal-Tamil-Bramma G, 1-December-Kannada-P. Sheshadri, Elizabeth Ekadashi-Marathi-Paresh Mokashi.

p sheshadri

ಕಥೇತರ ಚಿತ್ರಗಳಲ್ಲಿ (Non feature) A Dream Never Dies-Assamese-Aneisha Sharma, The Last Adieu-English-Shabnam Sukhdev, My Father Namgyal-English-Utpal Das, On and Off The Records-English-Pratik Biswas, Womb on Rent-English-Ishani K Dutta, Qissa-E-Parsi-English & Hindi-Divya Cowasji, Shilpi Gulati, Songs of the Blue Hills-English & Nagamese-Utpal Borpujari, Songs of the Bards of Bengal– The Bauls and Fakirs-English, Bengali-Monalisa Dasgupta, An American in Madras-English, Tamil, Hindi-Karan Bali, Bhoomiyil Chuvadurachu-Malayalam-Vipin Vijay, Mitraa-Marathi-Ravi Jadhav, Vithya-Marathi-Prasanna Shrikant Ponde, Ek Hota Kau-Marathi-Viju Gopal Mane, Bahadur The Accidental Brave-Nepalese/ English-Aditya Seth, Candles in the Wind-Punjabi & English-Kavita Bahl & Nandan Saxena.

ಕಥಾ ಚಿತ್ರಗಳಿಗೆ ಹೆಸರಾಂತ ಚಿತ್ರ ನಿರ್ದೇಶಕ ಎಕೆ ಬೀರ್ ನೇತೃತ್ವದ 13 ಮಂದಿಯ ಸಮಿತಿ 181 ಅರ್ಹ ಚಿತ್ರಗಳಲ್ಲಿ 26 ನ್ನು ಆಯ್ಕೆ ಮಾಡಿದ್ದು, ಕಥೇತರ ಚಿತ್ರಗಳ ವಿಭಾಗದಲ್ಲಿ 100 ಚಿತ್ರಗಳಲ್ಲಿ 15 ಚಿತ್ರಗಳನ್ನು ಮೈಕ್ ಪಾಂಡೇ ನೇತೃತ್ವದ 7 ಸದಸ್ಯರ ಸಮಿತಿ ಆಯ್ಕೆ ಮಾಡಿದೆ.

Elizabeth ekadashi

 

Advertisements