saangatya-invi 1 copy

ಸಾಂಗತ್ಯದ ಹನ್ನೊಂದನೇ ಶಿಬಿರ ಆಗಸ್ಟ್ 9 ಮತ್ತು 10 ರಂದು ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದಲ್ಲಿ ನಡೆಯಲಿದ್ದು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ. ಶೇಷಾದ್ರಿ ಭಾಗವಹಿಸುವರು. ಅವರ ಇತ್ತೀಚಿನ ಪ್ರಶಸ್ತಿ ಪುರಸ್ಕೃತ ಚಿತ್ರ “ಡಿಸೆಂಬರ್ 1” ಶಿಬಿರದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗಲಿದೆ.

ಚಿತ್ರ ಪ್ರದರ್ಶನದ ನಂತರ ಸಂವಾದದಲ್ಲಿ ಪಾಲ್ಗೊಳ್ಳುವ ಪಿ. ಶೇಷಾದ್ರಿಯವರು, ಆ. 10 ರಂದು “ಚಿತ್ರ ನಿರ್ದೇಶಕನ ದೃಷ್ಟಿಯಲ್ಲಿ ಚಿತ್ರ ವಿಮರ್ಶೆ ಹೇಗಿರಬೇಕು” ಎಂಬುದರ ಬಗ್ಗೆ ಮಾತನಾಡಲಿದ್ದಾರೆ. ಶಿಬಿರದಲ್ಲಿ ಇದಲ್ಲದೇ, ಇನ್ನೂ ಏಳು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಆ. 10 ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪಿ. ಶೇಷಾದ್ರಿ ಪ್ರಶಸ್ತಿ ಪತ್ರ ವಿತರಿಸುವರು. ಮುಖ್ಯ ಅತಿಥಿಗಳಾಗಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್ ಭಾಗವಹಿಸುವರು. ಎರಡೂ ಕಾರ್ಯಕ್ರಮದಲ್ಲಿ ಸಾಂಗತ್ಯದ ಟ್ರಸ್ಟಿ ಪರಮೇಶ್ವರ ಗುರುಸ್ವಾಮಿ ಉಪಸ್ಥಿತರಿರುವರು.

ಕುಪ್ಪಳಿಗೆ ಬರುವುದು ಹೀಗೆ :

ಬೆಂಗಳೂರಿನಿಂದಕುಪ್ಪಳಿಗೆಪ್ರತಿದಿನರಾತ್ರಿ 10 ಕ್ಕೆಬೆಂಗಳೂರುಬಸ್ನಿಲ್ದಾಣದಿಂದರಾಜಹಂಸಬಸ್ಇದೆ. ಅದರಲ್ಲಿಕುಳಿತರೆಬೆಳಗ್ಗೆ6. 30 ಸುಮಾರಿಗೆಕುಪ್ಪಳಿಗೆತಲುಪುತ್ತೀರಿ. ಅಲ್ಲಿಯೇಹೇಮಾಂಗಣವಿದೆ (ಕುವೆಂಪುಮನೆಗಿಂತಸ್ವಲ್ಪಮೊದಲು). ಅಲ್ಲಿಯೇಇಳಿಯಬೇಕು.

ಒಂದುವೇಳೆ ಶಿವಮೊಗ್ಗದಿಂದ ಬರುವುದಾದರೆ, ಬೆಂಗಳೂರಿನಿಂದ ಶಿವಮೊಗ್ಗ ಬಸ್ಸನ್ನು ಹತ್ತಬೇಕು. ಶಿವಮೊಗ್ಗದಿಂಧ ತೀರ್ಥಹಳ್ಳಿಗೆ ಬರಬೇಕು. ಅಲ್ಲಿಂದ ಕೊಪ್ಪಕ್ಕೆಹೋಗುವ ಬಸ್ಸನ್ನು ಹಿಡಿದು, ಗಡಿಕಲ್ಲುಕುಪ್ಪಳಿ ಎಂಬಲ್ಲಿ ಇಳಿದು ಒಳಗೆ ಐದು ನಿಮಿಷ ನಡೆದು ಬಂದರೆ ಹೇಮಾಂಗಣ ಸಿಗುತ್ತದೆ.

ಮಾಹಿತಿಗೆ 94482 45172, 94818 09206 ಸಂಪರ್ಕಿಸಬಹುದು.

 

 

 

 

ಖ್ಯ ಻ಖ್ಯ

Advertisements