ಸಾಂಗತ್ಯ

ಚಿತ್ರ ಭಾಷಾ ಕಾವ್ಯ

ನಮ್ಮ ಸುದ್ದಿ

ಚಿತ್ರ ಶಿಬಿರ ಆಗಸ್ಟ್ 9-10 ರಂದು

shibira-11-poster copy

ನಮ್ಮ ಮುಂದಿನ ಚಿತ್ರ ಶಿಬಿರ ಆಗಸ್ಟ್ 9-10 ರಂದು ಕುಪ್ಪಳಿಯಲ್ಲಿ ನಡೆಯಲಿದೆ.

ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ನಡೆಯುವ ಎರಡು ದಿನಗಳ ಶಿಬಿರದಲ್ಲಿ 6 ರಿಂದ 8 ಚಿತ್ರಗಳ ಪ್ರದರ್ಶನ, ಅವುಗಳ ಬಗೆಗಿನ ಚರ್ಚೆ, ಸಂವಾದ ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಲಿದೆ.

ಕನ್ನಡವಲ್ಲದೇ ಬೇರೆ ಬೇರೆ ಭಾಷೆಗಳ ಚಿತ್ರಗಳಿರಲಿವೆ. ಸಿನಿಮಾ ನಿರ್ಮಾಣದಲ್ಲಿನ ತಾಂತ್ರಿಕ ಸಂಗತಿಗಳ ಬಗೆಗೂ ಮಾಹಿತಿ ನೀಡಲಾಗುತ್ತದೆ.

ಶಿಬಿರದ ಶುಲ್ಕ 500 ರೂ. ಗಳಾಗಿದ್ದು, ಎರಡು ದಿನಗಳ ಕಾಲಕ್ಕೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಶಿಬಿರದಲ್ಲಿ ಭಾಗವಹಿಸುವಿಕೆಗೆ ಪ್ರಮಾಣ ಪತ್ರ ನೀಡಲಾಗುವುದು.

ಆಸಕ್ತರು ತಮ್ಮ ಸ್ವ ವಿವರಗಳೊಂದಿಗೆ ನಮ್ಮ ಇಮೇಲ್ saangatya@gmail.com ಗೆ ಅಥವಾ ದೂರವಾಣಿ ಸಂಖ್ಯೆ 94483 48517, 94482 45172, 94818 09206 ಗೆ ಕರೆ ಮಾಡಬಹುದು. ಬೆಂಗಳೂರು, ಕೊಪ್ಪ, ಮೈಸೂರು, ತೀರ್ಥಹಳ್ಳಿ, ಕುಂದಾಪುರ, ಉಡುಪಿಯಲ್ಲಿ ನಮ್ಮ ಪ್ರತಿನಿಧಿಗಳನ್ನು ಭೇಟಿ ಮಾಡಿ ಹೆಸರು ನೋಂದಾಯಿಸಬಹುದು.  ಉಳಿದವರು ನಾವು ಹೇಳುವ ಬ್ಯಾಂಕ್ ಖಾತೆಗೆ ಶುಲ್ಕದ ಹಣವನ್ನು ವರ್ಗಾಯಿಸಿ, ಚಲನ್ ನ ಫೋಟೊ ಕಾಪಿ ನಮಗೆ ಮೇಲ್ ಮಾಡಿದರೆ ಸಾಕು. ಶೀಘ್ರವೇ ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಲಾಗುವುದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: