ಸಾಂಗತ್ಯವು ಫೆಬ್ರವರಿ 15 ಮತ್ತು 16 ರಂದು ಕುಪ್ಪಳಿಯಲ್ಲಿ ಏರ್ಪಡಿಸಿರುವ ಹತ್ತನೇ ಶಿಬಿರದಲ್ಲಿ ಕನ್ನಡದ ಮುನ್ಸೀಫ (ನಿರ್ದೇಶನ : ಉಮಾಶಂಕರ ಸ್ವಾಮಿ) ಮತ್ತು ತಲ್ಲಣ (ನಿರ್ದೇಶನ : ಸುದರ್ಶನ್) ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅದಲ್ಲದೇ ಇನ್ನೂ ನಾಲ್ಕೈದು ವಿವಿಧ ಭಾಷೆಯ ಚಲನಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ.

ನಂತರ ನಡೆಯುವ ಸಂವಾದದಲ್ಲಿ ಮುನ್ಸೀಫ ಚಿತ್ರದ ನಿರ್ದೇಶಕ ಉಮಾಶಂಕರ ಸ್ವಾಮಿ ಹಾಗೂ ತಲ್ಲಣ ಚಿತ್ರದ ನಿರ್ಮಾಪಕಿ ವಸುಂಧರಾ ಕುಲಕರ್ಣಿಯವರು ಭಾಗವಹಿಸುವರು.

ಜನ್ಮ ಶತಮಾನೋತ್ಸವ ಆಚರಣೆ

ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ಜನ್ಮ ಶತಮಾನೋತ್ಸವ ವರ್ಷವಾಗಿರುವ ಈ ಸಂದರ್ಭದಲ್ಲಿ ಅವರ ತಾಂತ್ರಿಕ ಆವಿಷ್ಕಾರಗಳ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಸಿನಿ ತಂತ್ರಜ್ಞ ಪರಮೇಶ್ವರ ಗುರುಸ್ವಾಮಿಯವರು ವಿಶೇಷ ಉಪನ್ಯಾಸವನ್ನು ನೀಡುವರು. ಈ ಮೂಲಕ ಸಾಂಗತ್ಯವು ಮಹಾನ್ ನಿರ್ದೇಶಕರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಬಹುತೇಕ ಮುಗಿದಿದೆ.

invi 1 copy

ಎಲ್ಲರ ಅನುಕೂಲಕ್ಕಾಗಿ ಮಾರ್ಗದ ಮಾಹಿತಿಯನ್ನು ನೀಡಲಾಗಿದೆ.

ಕುಪ್ಪಳಿಯನ್ನುತಲುಪುವಮಾರ್ಗ : ಬೆಂಗಳೂರಿನಿಂದಕುಪ್ಪಳಿಗೆಪ್ರತಿದಿನರಾತ್ರಿ 10 ಕ್ಕೆಬೆಂಗಳೂರುಬಸ್ನಿಲ್ದಾಣದಿಂದರಾಜಹಂಸಬಸ್ಇದೆ. ಅದರಲ್ಲಿಕುಳಿತರೆಬೆಳಗ್ಗೆ 6. 30 ಸುಮಾರಿಗೆಕುಪ್ಪಳಿಗೆತಲುಪುತ್ತೀರಿ. ಅಲ್ಲಿಯೇಹೇಮಾಂಗಣವಿದೆ (ಕುವೆಂಪುಮನೆಗಿಂತಸ್ವಲ್ಪಮೊದಲು). ಅಲ್ಲಿಯೇಇಳಿಯಬೇಕು.

ಒಂದುವೇಳೆ ಶಿವಮೊಗ್ಗದಿಂದ ಬರುವುದಾದರೆ, ಬೆಂಗಳೂರಿನಿಂದ ಶಿವಮೊಗ್ಗ ಬಸ್ಸನ್ನು ಹತ್ತಬೇಕು. ಶಿವಮೊಗ್ಗದಿಂಧ ತೀರ್ಥಹಳ್ಳಿಗೆ ಬರಬೇಕು. ಅಲ್ಲಿಂದ ಕೊಪ್ಪಕ್ಕೆ ಹೋಗುವ ಬಸ್ಸನ್ನು ಹಿಡಿದು, ಗಡಿಕಲ್ಲುಕುಪ್ಪಳಿ ಎಂಬಲ್ಲಿ ಇಳಿದು ಒಳಗೆ ಐದು ನಿಮಿಷ ನಡೆದು ಬಂದರೆ ಹೇಮಾಂಗಣ ಸಿಗುತ್ತದೆ.

ಮಾಹಿತಿಗೆ 99862 88392, 94482 45172, 94818 09206 ಸಂಪರ್ಕಿಸಬಹುದು.