ಸಾಂಗತ್ಯ ತನ್ನ ಹತ್ತನೆಯ ಶಿಬಿರವನ್ನು ಫೆಬ್ರವರಿ 15 ಮತ್ತು 16 ರಂದು ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಎರಡು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಸಿನಿಮಾಗಳ ವೀಕ್ಷಣೆ, ತಜ್ಞರೊಂದಿಗೆ ಸಂವಾದ ಹಾಗೂ ಪ್ರತಿ ಸಿನಿಮಾಗಳ ಕುರಿತು ಚರ್ಚೆ ನಡೆಯಲಿದೆ.

ಈ ಬಾರಿ ಕೆಲವು ಹೊಸಬರ ಕಿರುಚಿತ್ರಗಳನ್ನು ಪ್ರದರ್ಶಿಸಲು ಯೋಚಿಸಿದ್ದು, ಆಸಕ್ತರು ತಮ್ಮ ಚಿತ್ರಗಳ ಕುರಿತ ಮಾಹಿತಿಯನ್ನು ನಮ್ಮ  ಇಮೇಲ್ ಗೆ ನೀಡಬಹುದು. ನಾವು ಅದನ್ನು ಸಂಗ್ರಹಿಸಲಾಗುವುದು.

ಶಿಬಿರಕ್ಕೆ ನೋಂದಣಿ ಮತ್ತು ಕಿರುಚಿತ್ರ ಪ್ರದರ್ಶನ ಸಂಬಂಧಿ ಮಾಹಿತಿಗೆ ಆಸಕ್ತರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 99640 22581, 94483 48517, 94805 82087. ನಮ್ಮ ಇಮೇಲ್ ವಿಳಾಸ saangatya@gmail.com.

Advertisements