ಸಾಂಗತ್ಯ ಪ್ರತಿನಿಧಿಯಿಂದ

s2013112050844

ಪಣಜಿ : ಈ ಉತ್ಸವ ಸಾಂಸ್ಕೃತಿಕ ವೈವಿಧ್ಯಗಳ ಅನಾವರಣ ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವ ಮನೀಷ್ ತಿವಾರಿ ವ್ಯಾಖ್ಯಾನಿಸಿದ್ದಾರೆ.

44 ನೇ ಚಲನಚಿತ್ರೋತ್ಸವದ ಉದ್ಘಾಟನೆಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಭಿನ್ನ ಸಂಸ್ಕೃತಿಗಳ ಧ್ವನಿಯಂತೆ ಇಲ್ಲಿ ಪ್ರದರ್ಶಿತಗೊಳ್ಳುವ ಚಿತ್ರಗಳಿವೆ. ವಿಭಿನ್ನ ಅಭಿಪ್ರಾಯಗಳಿಗೆ ಇದೊಂದು ವೇದಿಕೆ’ ಎಂದರು.

ಚಿತ್ರರಂಗವೇ ವೈವಿಧ್ಯಗಳ ತವರು ಎಂದು ಅಭಿಪ್ರಾಯಪಟ್ಟ, ಈ ಬಾರಿ ಉತ್ಸವದಲ್ಲಿ ಈಶಾನ್ಯ ಭಾರತದ ಸಿನಿಮಾಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ. ಮೇಘಾಲಯದ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಈ ವಿಭಾಗವನ್ನು ಉದ್ಘಾಟಿಸುವರು ಎಂದು ತಿಳಿಸಿದರು. ಇಲಾಖೆ ಕಾರ್ಯದರ್ಶಿ ಬಿಮಲ್ ಶುಕ್ಲಾ ಒಂದಿಷ್ಟು ಮಾಹಿತಿ ನೀಡಿದರು.