ಪಣಜಿ : ಈ ಬಾರಿಯ ಚಿತ್ರೋತ್ಸವದಲ್ಲಿ ನೋಡದೇ ತಪ್ಪಿಸಿಕೊಳ್ಳಬಾರದ ಹಲವು ಸಂಗತಿಗಳಿವೆ !

Aideu Hanidque

ಈ ಚಿತ್ರೋತ್ಸವದಲ್ಲಿ ಬಹಳ ಪ್ರಮುಖವಾಗಿ ತೋರುತ್ತಿರುವುದು ‘ಈಶಾನ್ಯ ಭಾರತದ ಸಿನಿಮಾ’ಗಳು. ಸಾಮಾನ್ಯವಾಗಿ ಪ್ರತಿ ಚಿತ್ರೋತ್ಸವದಲ್ಲಿ ದೇಶದ ಈಶಾನ್ಯ ಭಾಗವಾದ ಅಸ್ಸಾಂ ಮತ್ತಿತರ ಕಡೆಗಳಿಂದ ಒಂದೆರಡು ಚಲನಚಿತ್ರಗಳು ವೀಕ್ಷಣೆಗೆ ಲಭ್ಯವಾಗುತ್ತದೆ. ಕಳೆದ ವರ್ಷ (2012)ದಲ್ಲೂ ಅಸ್ಸಾಂ ನ ಜಾನು ಬರುವಾ ಅವರ “ಬಂಧೋನ್” ಚಿತ್ರ ಭಾರತೀಯ ಪನೋರಮಾ ವಿಭಾಗದಡಿ ಪ್ರದರ್ಶಿತವಾಗಿತ್ತು.

ಆದರೆ ಈ ಬಾರಿ ಒಟ್ಟಿಗೇ 19 ಸಿನಿಮಾಗಳು ನೋಡಲು ಲಭ್ಯವಿದೆ. ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸಾಮಿ, ಮಿಜೋ, ಬೋಡೋ, ನಾಗಾಮಿಸ್, ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರಿ ಮುಂತಾದ ಪ್ರದೇಶ ಮತ್ತು ಭಾಷೆಗಳ ಸಿನಿಮಾಗಳನ್ನು ಪ್ರದರ್ಶಿತವಾಗುತ್ತಿವೆ. ನ. 22 ರಂದು ಸಂಜೆ 5 ಕ್ಕೆ ಕಲಾ ಅಕಾಡೆಮಿಯಲ್ಲಿ “ಈಶಾನ್ಯ ಭಾರತ ಸಿನಿಮಾ” ಉತ್ಸವ ಉದ್ಘಾಟನೆಗೊಳ್ಳಲಿದೆ. ಚಿತ್ರ ನಿರ್ದೇಶಕ Mapuia Chawngthu ಅವರ ‘KHAWNLUNG RUN’ ಮಿಜೋ ಭಾಷೆಯ ಚಿತ್ರ ಈ ವಿಭಾಗದ ಉದ್ಘಾಟನೆ ದಿನದಂದು ಪ್ರದರ್ಶಿತವಾಗುವ ಚಿತ್ರ. ಈ ವಿಭಾಗದ ಸಮಾರೋಪದಂದು ಅಸ್ಸಾಮಿ ಚಿತ್ರರಂಗದ  ಮೊದಲ ನಟಿ Aideu Handique ಅವರ ಜೀವನವನ್ನು ಆಧರಿಸಿ ಆರೂಪ್ ಮನ್ನಾ ನಿರ್ದೇಶಿಸಿದ ಚಿತ್ರ ‘Aideu’ ಪ್ರದರ್ಶನಗೊಳ್ಳಲಿದೆ.

ನ. 25 ರವರೆಗಿನ ಮೊದಲ ವಾರದ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. (ಚಿತ್ರ ಕೃಪೆ : ಅಸ್ಸಾಮ್ ಇನ್ಫೋ)