Image

ಪಣಜಿ : ನಾಳೆಯಿಂದ (ನ.20) ನ. 30 ರವರೆಗೆ ನಡೆಯಲಿರುವ ೪೪ ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI 2013) ಗೆ ಗೋವಾದ ರಾಜಧಾನಿ ಪಣಜಿ ಸಿದ್ಧಗೊಂಡಿದೆ. ಈಗಾಗಲೇ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಸಿನಿಮಾಸಕ್ತರೂ ಗೋವಾದತ್ತ ಧಾವಿಸತೊಡಗಿದ್ದಾರೆ. ಇದುವರೆಗೆ ಸಾವಿರಾರು ಮಂದಿ ಪ್ರತಿನಿಧಿಗಳು ನೋಂದಾವಣೆ ಮಾಡಿಕೊಂಡಿದ್ದರೂ, ಖಚಿತ ಅಂಕಿ-ಸಂಖ್ಯೆ ನಾಳೆಯಷ್ಟರಲ್ಲಿ ಸಿಗಬಹುದು ಎಂದು ಚಲನಚಿತ್ರೋತ್ಸವ ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಿನಿಮಾ ಪ್ರದರ್ಶನ ಐನಾಕ್ಸ್‌ನ ನಾಲ್ಕು ಥಿಯೇಟರ್‌ಗಳು, ಮಾಕ್ವೆಂಜ್ ಪ್ಯಾಲೇಸ್‌ನ ಎರಡು ಥಿಯೇಟರ್‌ಗಳು ಹಾಗೂ ಕಲಾ ಮಂಡಲ್‌ನಲ್ಲಿ ಆಯೋಜಿತವಾಗಿದೆ.

ಈ ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಜೆಕ್ ರಿಪಬ್ಲಿಕ್ ದೇಶದ ದಿ ಡಾನ್ ಜೂನ್ಸ್(The Don Juans)ನಿರ್ದೇಶನ :  JIRI MENZEL ಪ್ರದರ್ಶನಗೊಂಡರೆ, ನ. 30 ರಂದು ಸಮಾರೋಪ ಚಿತ್ರವಾಗಿ ಆಫ್ರಿಕನ್ ದೇಶದ ಮಂಡೇಲಾ- ಎ ಲಾಂಗ್ ವಕ್ ಟು ಫ್ರೀಡಂ ಚಿತ್ರ ಪ್ರದರ್ಶಿತವಾಗಲಿದೆ. ಇದು ದಕ್ಷಿಣ ಆಫ್ರಿಕಾದ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಕುರಿತಾದದ್ದು. ನ. 25 ರವರೆಗೆ ಮೊದಲ ವಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.  ಈ ವೇಳಾಪಟ್ಟಿಯ ಮೊದಲ ಪುಟದಲ್ಲಿ ತಪ್ಪಾಗಿ 18.11.2012 ಎಂದು ಮುದ್ರಿತವಾಗಿದೆ. ಅದು 18.11.2013  ಎಂದೇ ಓದಿಕೊಳ್ಳಬೇಕು.

Image

ಈ ಬಾರಿ ಜೀವಿತಾವಧಿ ಪ್ರಶಸ್ತಿಗೆ (Life time achievement award) ಗೆ ಜೆಕ್ ರಿಪಬ್ಲಿಕ್ ನ ಚಿತ್ರ ನಿರ್ದೇಶಕ ಜಿರಿ ಮೆಂಜೆಲ್ (JIRI MENZEL) ಭಾಜನರಾಗಿದ್ದಾರೆ. ಅವರ ಚಿತ್ರವೇ ಈ ಬಾರಿಯ  ಉದ್ಘಾಟನಾ ಚಿತ್ರ.

ಈ ವರ್ಷದ ಸಿನಿಮೋತ್ಸವದಲ್ಲಿ ಭಾರತೀಯ ಪನೋರಮಾ, ವಿಶ್ವ ಸಿನಿಮಾ, ರೆಟ್ರಾಸ್ಪೆಕ್ಟಿವ್, ಟ್ರಿಬ್ಯೂಟ್ ಮುಂತಾದ ವಿಭಾಗಗಳಲ್ಲದೇ, ಮ್ಯೂಸಿಕಲ್ ಜರ್ನಿ ಆಫ್ ಇಂಡಿಯನ್ ಸಿನಿಮಾ, ನಾರ್ತ್ ಈಸ್ಟ್ ಸಿನಿಮಾ ವಿಶೇಷವಾಗಿ ಬಿತ್ತರಗೊಳ್ಳುತ್ತಿವೆ. ಒಟ್ಟು (CW) – Cinema of the World (IC) – International Competition (AH Ret.) – Agnieszka Holland Retrospective (Doc.) – Documentaries, (MS) – Master Strokes (CF-Japan) – Country Focus –Japan (SOA) – Soul of Asia (GV) – Greek Vignettes, (FK) – Festival Kaleidoscope (SOS) – Sketches on Screen (SRC) – Satyajit Ray Classics ಇತ್ಯಾದಿ ವಿಭಾಗಗಳಿವೆ. ಮ್ಯೂಸಿಕಲ್ ಜರ್ನಿ ಟು ಇಂಡಿಯಾ ಸಿನಿಮಾದಲ್ಲಿ ’ಶಂಕರಾಭರಣಂ’, ’ಉಮ್ರಜಾನ್’ ಮತ್ತಿತರ ಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಮಾಸ್ಟರ್ ಕ್ಲಾಸ್ ನಲ್ಲಿ ಸಂಗೀತದ ಕುರಿತು ಬಾಂಬೆ ಜಯಶ್ರೀ (ನ.21), ನಟನೆಯ ಕುರಿತು ಹಾಲಿವುಡ್ ನ ಸೂಸನ್ ಸರಂಡನ್(ನ.22), ಚಿತ್ರ ನಿರ್ಮಾಣದ ಬಗ್ಗೆ ಪೋಲ್ಯಾಂಡ್‌ನ Agnieszka Holland, Jacek Patrycki(ನ.23) ಹಾಗೂ ಪರಿತೋಷ್ ಮೆಹ್ತಾ ಸ್ಥಳೀಯ ಸಿನಿಮಾಗಳ ಕುರಿತು ನ. 25 ರಂದು ಮಾತನಾಡುವರು.

ಸಾಂಗತ್ಯವು ಕಳೆದ ವರ್ಷದಂತೆಯೇ ಈ ವರ್ಷವೂ ಗೋವಾದ ಚಿತ್ರೋತ್ಸವ ಕುರಿತ ವರದಿಗಳನ್ನು ಆಗಾಗ್ಗೆ ವರದಿ ಮಾಡಲಿದೆ.

Advertisements