ಭಾರತೀಯ ಸಿನೆಮಾಕ್ಕೆ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ಸಿನೆಮಾ ನೂರು ಎಂಬ ಕಾರ್ಯಕ್ರಮವನ್ನು, ಮಂಗಳೂರು ರಾಜ್ಯ ಸಮ್ಮೇಳನದಲ್ಲಿ ನಿರ್ಧಾರದಂತೆ ಚಿತ್ರ ಸಮುದಾಯ ಹಮ್ಮಿಕೊಂಡಿದೆ.

ಇಂತಹ ಸುಮಾರು 25-30 ಕನ್ನಡ, ಹಿಂದಿ ಮತ್ತು ಇತರ ಭಾರತೀಯ ಭಾಷಾ ಚಿತ್ರಗಳನ್ನು ಬೆಂಗಳೂರಿನ 2-3 ಕಡೆ ಮತ್ತು ಸಮುದಾಯದ ಘಟಕ ಇರುವ ಇತರ ನಗರಗಳಲ್ಲಿ ನಡೆಸುವ ಯೋಜನೆ ಇದೆ. ಈ ಕಾರ್ಯಕ್ರಮ ತಿಂಗಳಿಗೆ 2-4 ರಂತೆ  ವರ್ಷವಿಡೀ ನಡೆಯಲಿದೆ. ಸಿನೆಮಾ ನೂರು ಕಾರ್ಯಕ್ರಮದ ಭಾಗವಾಗಿ ಕಾಲೇಜುಗಳಲ್ಲಿ ಚಿತ್ರಗಳ ಉತ್ಸವವನ್ನೂ ಹಮ್ಮಿಕೊಳ್ಳಲಾಗಿದೆ.

puttakkana-highway

ರಾಜ್ಯಾದ್ಯಂತ ನಡೆಸಬೇಕೆಂದಿರುವ ಈ ಕಾರ್ಯಕ್ರಮದ ಆರಂಭವನ್ನು, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಆರಂಭಿಸಲು ಆ ಕಾಲೇಜಿನ ಪ್ರ್ರಿನ್ಸಿಪಾಲರು ಮತ್ತು ಅಧ್ಯಾಪಕ ವೃಂದ ಒಪ್ಪಿಕೊಂಡಿದ್ದಾರೆ. ಮಾರ್ಚ್‌ನಲ್ಲಿ 1 ರಿಂದ 15 ರವರೆಗೆ ಚಿತ್ರೋತ್ಸವ ನಡೆಯಲಿದೆ. ಈ ಮುಂದೆ ಕೊಟ್ಟಿರುವ ಪಟ್ಟಿಯಲ್ಲಿ ಕನಿಷ್ಟ 5 ಚಿತ್ರಗಳನ್ನು ಪ್ರದರ್ಶಿಸಲಾಗುವುದು.  ಮೊದಲ ಎರಡು ಚಿತ್ರಗಳ ಕಾರ್ಯಕ್ರಮ ನಿಗದಿಯಾಗಿದೆ. ಪ್ರತಿ ಚಿತ್ರದ ಪ್ರದರ್ಶನ ಮೊದಲು ನಿರ್ದೇಶಕರ ಮತ್ತು ಚಿತ್ರದ ಬಗ್ಗೆ ಪರಿಚಯ, ಭಾರತೀಯ/ಕರ್ನಾಟಕ ಚಿತ್ರ ಪರಂಪರೆಯಲ್ಲಿ ಅದರ ಸ್ಥಾನ/ಮಹತ್ವದ ಬಗ್ಗೆ ಪ್ರವೇಶಿಕೆ ಇರುತ್ತದೆ. ಚಿತ್ರ ಪ್ರದರ್ಶನದ ನಂತರ (ಹೆಚ್ಚಾಗಿ) ಚಿತ್ರದ ನಿರ್ದೇಶಕರ (ಅಥವಾ ಪ್ರಮುಖ ನಟ/ನಟಿ, ಅಥವಾ ಚಿತ್ರ ಪರಿಣತ) ಜತೆ ಸಂವಾದ ಏರ್ಪಡಿಸಲಾಗುತ್ತದೆ.

ಚಿತ್ರದ ಹೆಸರು        ನಿರ್ದೇಶಕರು               ವರ್ಷ        ಇತರ ವಿವರಗಳು      

೧.  ಮುನ್ನುಡಿ              ಪಿ.ಶೇಷಾದ್ರಿ                 ೨೦೦೦  ಬೋಳುವಾರು ಅವರ ಮುತ್ತುಚ್ಚೇರ ಕಥೆ ಆಧಾರಿತ           ೨.  ಗುಲಾಬಿ ಟಾಕೀಸ್  ಗಿರೀಶ್ ಕಾಸರವಳ್ಳಿ       ೨೦೦೭  ವೈದೇಹಿ ಅವರ ಕಥೆ ಆಧಾರಿತ
೩.  ದೇವೀರಿ                ಕವಿತಾ ಲಂಕೇಶ್          ೧೯೯೯   ಲಂಕೇಶ್ ಅವರ ಅಕ್ಕ ಕಥೆ ಆಧಾರಿತ
೪. ಪುಟ್ಟಕ್ಕನ ಹೈವೇ    ಬಿ.ಸುರೇಶ                  ೨೦೧೧  ನಾಗತಿಹಳ್ಳಿ ಚಂದ್ರಶೇಖರ್ ಕಾದಂಬರಿ ಆಧಾರಿತ             ೫. ಭಾಗೀರಥಿ             ಬರಗೂರು ರಾಮಚಂದ್ರಪ್ಪ ೨೦೧೨   ಕೆರೆಗೆ ಹಾರ ಜಾನಪದ ಕಥೆ ಆಧಾರಿತ
೬. ವಿಮೋಚನೆ           ಟಿ.ಎಸ್.ನಾಗಾಭರಣ       ೧೯೯೭
೭. ಕಾನೂರು ಹೆಗ್ಗಡಿತಿ   ಗಿರೀಶ್ ಕಾರ್ನಾಡ್          ೧೯೯೯   ಕುವೆಂಪು ಕಾದಂಬರಿ ಆಧಾರಿತ
೮. ಭೂಮಿಕಾ               ಶ್ಯಾಮ್ ಬೆನೆಗಲ್           ೧೯೯೭   ಮರಾಠಿ ನಟಿಯೊಬ್ಬಳ ಆತ್ಮಕಥೆ ಆಧಾರಿತ
೯. ಅರ್ಥ್                     ಮಹೇಶ್ ಭಟ್                 ೧೯೮೨

Advertisements