kurmava

ಸಾಂಗತ್ಯವು ಆಯೋಜಿಸಿರುವ ಕುಪ್ಪಳಿಯಲ್ಲಿ ಫೆಬ್ರವರಿ 16-17 ರಂದು ಒಂಬತ್ತನೇ ಶಿಬಿರದಲ್ಲಿ ಚಿತ್ರ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್  ನಿರ್ಮಿಸಿ, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ “ಕೂರ್ಮಾವತಾರ” ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇದರೊಂದಿಗೆ ನಾನ್ ಫೀಚರ್ ಕೆಟಗರಿಯಲ್ಲಿ ಕೇಸರಿ ಹರವೂ ಅವರ ಇತ್ತೀಚಿನ “ನಗರ ಮತ್ತು ನದಿಕಣಿವೆ” ಪ್ರದರ್ಶನಗೊಳ್ಳುತ್ತಿದೆ.

ಕೂರ್ಮಾವತಾರ ಚಲನಚಿತ್ರದಲ್ಲಿ ಶಿಕಾರಿಪುರ ಕೃಷ್ಣಮೂರ್ತಿ, ಎಚ್. ಜಿ. ಸೋಮಶೇಖರರಾವ್, ಜಯಂತಿ, ಅಪೂರ್ವ ಕಾಸರವಳ್ಳಿ ಮತ್ತಿತರರು ಅಭಿನಯಿಸಿದ್ದಾರೆ.

ಇದಕ್ಕೆ ಖ್ಯಾತ ಸಿನೆಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಛಾಯಾಗ್ರಹಣವನ್ನು ಪೂರೈಸಿದ್ದಾರೆ. ಚಿತ್ರ ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯ ಪಡೆದಿರುವ  ಈ ಚಿತ್ರವು 2012 ರಲ್ಲಿ ಕನ್ನಡದ ಅತ್ಯುತ್ತಮ ಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿ  ಗಳಿಸಿತ್ತು. ಅಲ್ಲದೇ, ಇಫಿ ಗೋವಾ ಚಿತ್ರೋತ್ಸವವಲ್ಲದೇ, ಹಲವು ದೇಶ-ವಿದೇಶ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

“ನಗರ ಮತ್ತು ನದಿಕಣಿವೆ” ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬರುವ ಗುಂಡ್ಯ ಜಲವಿದ್ಯುತ್ ಯೋಜನೆಯ ಸಾಧಕ-ಬಾಧಕಗಳ ಕುರಿತಾದದ್ದು. ಇದರೊಂದಿಗೆ ಆ ಯೋಜನೆಯಿಂದ  ಎದುರಿಸಬೇಕಾದ ಭೀಕರ ಪರಿಣಾಮಗಳ ಕುರಿತಾದದ್ದು. ಈಗಾಗಲೇ ಸಕಲೇಶಪುರ ಸೇರಿದಂತೆ ಹಾಸನದ ವಿವಿಧೆಡೆ 40 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಪುತ್ತೂರಿನಲ್ಲೂ ಪ್ರದರ್ಶನ  ಏರ್ಪಡಿಸಲಾಗಿತ್ತು.

Advertisements