ಫೆಬ್ರವರಿ 16-17 ರಂದು ನಡೆಯುವ ಚಿತ್ರ ಶಿಬಿರಕ್ಕೆ ಎಲ್ಲ ಸಿದ್ಧತೆ ಮುಗಿದಿದೆ.

Poster 5

ಕುಪ್ಪಳಿಯನ್ನು ತಲುಪುವ ಮಾರ್ಗ : ಬೆಂಗಳೂರಿನಿಂದ -ಕುಪ್ಪಳಿಗೆ ಪ್ರತಿದಿನ ರಾತ್ರಿ 10 ಕ್ಕೆ ಬೆಂಗಳೂರು ಬಸ್ ನಿಲ್ದಾಣದಿಂದ ರಾಜಹಂಸ ಬಸ್ ಇದೆ. ಅದರಲ್ಲಿ ಕುಳಿತರೆ ಬೆಳಗ್ಗೆ 6. 30 ಸುಮಾರಿಗೆ ಕುಪ್ಪಳಿಗೆ ತಲುಪುತ್ತೀರಿ. ಅಲ್ಲಿಯೇ ಹೇಮಾಂಗಣವಿದೆ (ಕುವೆಂಪು ಮನೆಗಿಂತ ಸ್ವಲ್ಪ ಮೊದಲು). ಅಲ್ಲಿಯೇ ಇಳಿಯಬೇಕು.

ಒಂದುವೇಳೆ ಶಿವಮೊಗ್ಗದಿಂದ ಬರುವುದಾದರೆ, ಬೆಂಗಳೂರಿನಿಂದ ಶಿವಮೊಗ್ಗ ಬಸ್ಸನ್ನು ಹತ್ತಬೇಕು. ಶಿವಮೊಗ್ಗದಿಂಧ ತೀರ್ಥಹಳ್ಳಿಗೆ ಬರಬೇಕು. ಅಲ್ಲಿಂದ ಕೊಪ್ಪಕ್ಕೆ ಹೋಗುವ ಬಸ್ಸನ್ನು ಹಿಡಿದು, ಗಡಿಕಲ್ಲು-ಕುಪ್ಪಳಿ ಎಂಬಲ್ಲಿ ಇಳಿದು ಒಳಗೆ ಐದು ನಿಮಿಷ ನಡೆದು ಬಂದರೆ ಹೇಮಾಂಗಣ ಸಿಗುತ್ತದೆ.

ಮಾಹಿತಿಗೆ 94483 48517, 94482 45172, 94818 09206 ಸಂಪರ್ಕಿಸಬಹುದು.