ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮೈಸೂರು ಫಿಲಂ ಸೊಸೈಟಿಯವರು ಫ್ರೆಂಚ್ ಚಲನಚಿತ್ರೋತ್ಸವವನ್ನು ಹಲವು ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಡಿಸಿತ್ತು. ಅದರ ಸಮಾರೋಪದಂದು ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಮರ್ಶಕ ಪ್ರೊ. ವಿ. ಎನ್. ಲಕ್ಷ್ಮೀನಾರಾಯಣ ಅವರು ತಮ್ಮ ಅನಿಸಿಕೆಯನ್ನು ವಿವರಿಸಿದ್ದಾರೆ. ಚಿತ್ರೋತ್ಸವದ ಬಗ್ಗೆ ಉಲ್ಲೇಖಿಸುತ್ತಲೇ, ಚಿತ್ರ ಜಗತ್ತು, ಕಮರ್ಷಿಯಲ್, ಕಲಾತ್ಮಕ, ಸಿನಿಮಾ ಪ್ರೀತಿ, ಪ್ರೇಕ್ಷಕ- ಹತ್ತು ಹಲವು ಸಂಗತಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಫ್ರಾನ್ಸ್ ಸಿನಿಮಾದ ತವರು ಮನೆ. ಫ್ರಾನ್ಸ್ ನ ಲೂಮಿಯೇರ್ ಸಹೋದರರು ಸಿನಿಮಾವನ್ನುಅದರ ಪ್ರಾರಂಭಿಕಅವತಾರದಲ್ಲೇ ಹಣಗಳಿಸುವ ಸಾಧನವನ್ನಾಗಿ ಬಳಸಿಕೊಂಡರು.ಅದರ ಮುಂದುವರಿಕೆಯಾಗಿ ಅಮೆರಿಕನ್ ಸಿನಿಮಾಇಡೀ ಪ್ರಪಂಚವನ್ನೇ ಪ್ರಭಾವಿತಗೊಳಿಸುವಂಥ ಮನರಂಜನಾಉದ್ಯಮವಾಗಿ ಬೆಳೆಯಿತು.ಭಾರತದಂಥ ಬಹುಭಾಷಾಗಣರಾಜ್ಯದಲ್ಲಿ ಒಂದೊಂದು ಭಾಷಾವಾರು ಪ್ರಾಂತ್ಯವೂತನ್ನದೇಆದ ಪ್ರಾಂತೀಯ ಚಿತ್ರೋದ್ಯಮವನ್ನುಇಂದು ಸ್ಥಾಪಿಸಿಕೊಂಡಿದೆ.ಆದರೆ ಹಿಂದಿ ಸಿನಿಮಾ ಬೇರೆಲ್ಲ ಪ್ರಾಂತೀಯ ಅಸ್ಮಿತೆಯನ್ನು ನುಂಗಿಹಾಕುವಂತೆ ಬೆಳೆದು ಭಾರತೀಯ ಸಿನಿಮಾಎಂದರೆ ಹಿಂದಿ ಸಿನಿಮಾಎಂಬಂಥರಾಜಕೀಯದಲ್ಲಿ ನಾವಿದ್ದೇವೆ. ಇಂಥ ಸನ್ನಿವೇಶದಲ್ಲಿ ಫ್ರೆಂಚ್‌ಚಿತ್ರೋತ್ಸವದ 7 ಚಿತ್ರಗಳನ್ನು ನಾವು ನೋಡಿದ್ದೇವೆ.

vnl

ಚಿತ್ರೋದ್ಯಮದಲ್ಲಿ ಸೆರೆ ಸಿಕ್ಕಿರುವ ಸಿನಿಮಾಕ್ಕೆ ಹಣ ಗಳಿಕೆಯ   ಉದ್ದೇಶವಲ್ಲದೆಇನ್ನೂ ಅನೇಕ ಮುಖಗಳಿವೆ. ಅವುಗಳಲ್ಲಿ ರಾಜಕೀಯ, ಸೈದ್ಧಾಂತಿಕ  ಮತ್ತು ಸಾಂಸ್ಕೃತಿಕ ಮುಖಗಳು ಮುಖ್ಯವಾದವುಗಳು.ಇನ್ನೊಂದುರೀತಿಯಲ್ಲಿ  ಹೇಳುವುದಾದರೆ ಚಿಂತಕರು, ಕಲಾವಿದರು ಮತ್ತು ಉದ್ಯಮಿಗಳು ತಮ್ಮ ಉದ್ದೇಶಗಳಾದ ಸೃಜನಶೀಲತೆ, ಅಭಿವ್ಯಕ್ತಿ ಮತ್ತು ಸಂಪತ್ತಿನ ಗಳಿಕೆಗಾಗಿ ಬಳಸುವ ಅತ್ಯಂತ ಶಕ್ತಿಶಾಲಿ, ದುಬಾರಿ ವೆಚ್ಚದರಾಜಕೀಯ-ಸಾಂಸ್ಕೃತಿಕ-ಆರ್ಥಿಕ ಸಾಧನ. ಹೀಗಾಗಿ ಸಿನಿಮಾಎರಡು ದೇಶಗಳ ಸಾಂಸ್ಕೃತಿಕಅನುಸಂಧಾನದ ಮಾಧ್ಯಮಎಂದು ಹೇಳುವಾಗಲೂ ಉಳಿದೆಲ್ಲ ಮುಖ-ಉದ್ದೇಶಗಳು ಇದ್ದೇ ಇವೆ ಎಂಬುದನ್ನುಅನುಲಕ್ಷಿಸಬೇಕು. ಅದರಲ್ಲೂಆರ್ಥಿಕ ಮತ್ತುರಾಜಕೀಯ ಅಂಶಗಳನ್ನುಪರಿಗಣಿಸಬೇಕು. ವಿಶ್ವಮಟ್ಟದಲ್ಲಿ ಅತ್ಯಧಿಕ ಚಲನಚಿತ್ರಗಳನ್ನು ತಯಾರಿಸುವ ದೇಶಗಳಲ್ಲಿ ಫ್ರಾನ್ನ್ ಗೆ ಮೂರನೇ ಸ್ಥಾನ. ಅಮೇರಿಕಾ ಮೊದಲನೆಯದು, ಭಾರತ ಎರಡನೆಯದು’.

ಸಿನಿಮಾಗಳನ್ನು ತಯಾರಿಸಲುಕೋಟ್ಯಾಂತರರೂ ಹಣವನ್ನುಖರ್ಚುಮಾಡಬೇಕಾಗುತ್ತದೆ.ಹಾಗೆಯೇಅವನ್ನು ಪ್ರದರ್ಶಿಸಲು ಸಾವಿರಾರು, ಲಕ್ಷಾಂತರರೂಖರ್ಚಾಗುತ್ತದೆ.ಸಾರ್ವಜನಿಕರಿಗೆಉಚಿತ ಪ್ರವೇಶವಿದ್ದ ಈ ಚಿತ್ರೋತ್ಸವದ ಉದಾಹರಣೆಯನ್ನೇ ನೋಡಬಹುದು.ಇದನ್ನುಏರ್ಪಡಿಸಲು ಸುಮಾರು 50-60 ಸಾವಿರ ರೂ ಖರ್ಚಾಗಿದೆ.ಇದರಲ್ಲಿ ಚಿತ್ರವೀಕ್ಷಣೆಯ ಖರ್ಚು ಸೇರಿಲ್ಲ.

mys2

 

ದಿನಕ್ಕೆ ಸರಾಸರಿ 500 ಮಂದಿ 7 ದಿನಗಳ ಕಾಲ ನಗರದ ವಿವಿಧ ಭಾಗಗಳಿಂದ ಚಿತ್ರಮಂದಿರಕ್ಕೆ ಬಂದ ಚಿತ್ರಪ್ರೇಮಿಗಳ ಸಂಖ್ಯೆ ಮೂರುವರೆ ಸಾವಿರ ಎಂದಿಟ್ಟುಕೊಂಡರೆ ಅವರ ಸಾಗಣೆಯ ವೆಚ್ಚವೇ ಒಬ್ಬರಿಗೆ ಕನಿಷ್ಠ 150 ರೂ ನಂತೆ 5 ಲಕ್ಷದ 25 ಸಾವಿರಆಗುತ್ತದೆ. ಅಂದರೆ ಜನಸಾಮಾನ್ಯರಿಗೆ ದುಬಾರಿಯೆನಿಸದ ಚಿತ್ರಮಂದಿರದಲ್ಲಿಏರ್ಪಾಡಾದ ಈ ಉಚಿತ ಪ್ರವೇಶದ ಚಿತ್ರೋತ್ಸವದ ಒಟ್ಟು ವೆಚ್ಚ 6 ಲಕ್ಷಕ್ಕೆ ಸಮೀಪ. ನೆಲದ ಮೇಲೆ ನಿಂತ ಚಿತ್ರಸ್ಥಾವರಗಳ ಸಿನಿಮಾದಆರ್ಥಿಕತೆಯೇ ಹೀಗಿರಬೆಕಾದರೆ ಇನ್ನು ಆಕಾಶದಿಂದ ಉಪಗ್ರಹಗಳ ಮೂಲಕ ಮಾಲ್‌ಗಳ ದುಬಾರಿ ಪರದೆಗಳ ಮೇಲೆ, ಕೇಬಲ್ ಟೀವಿಗಳ ಕಿರುಪರದೆ, ಮೊಬೈಲ್ ಕಿಂಡಿಗಳ ಮೇಲೆ ಬಿಂಬಿತವಾಗುವ ಪೇಯ್ಡ್ ಸಿನಿಮಾಗಳ ಆರ್ಥಿಕತೆ ಹೇಗಿರಬೇಡ! ಕೋಟಿಗಳಲ್ಲಿ ಲೆಕ್ಕ ಹಾಕುವ ಸಿನಿಮಾಗಳ ವೆಚ್ಚ-ಗಳಿಕೆಗಳ ವಿಶ್ವರೂಪವನ್ನು ನಾವು ಈಗಾಗಲೆ ಕಾಣುತ್ತಿದ್ದೇವೆ. ಇದರ ಹಿಂದಿರುವತಾತ್ವಿಕತೆ ಮತ್ತು ರಾಜಕೀಯಗಳಿಗೆ ಕುರುಡಾಗದಂತೆ ಸಿನಿಮಾ ಮೂಲದ ಸಾಂಸ್ಕೃತಿಕಅನುಸಂಧಾನವನ್ನು ನಡೆಸಬೇಕಾಗುತ್ತದೆ.

ಭಾರತಎಂದರೆತಾಜ್‌ಮಹಲ್, ಮೈಸೂರೆಂದರೆಅರಮನೆ, ಫ್ರಾನ್ಸ್‌ಎಂದರೆ ಪ್ಯಾರಿಸ್, ಪ್ಯಾರಿಸ್‌ ಎಂದರೆ ಐಫೆಲ್‌ ಟವರ್‌ಎಂದು ಸಂಭ್ರಮಿಸುವವರಿಗೆ ಫ್ರೆಂಚ್‌ ಸಿನಿಮಾ ಒಂದು ಅದ್ಭುತ ಲೋಕವನ್ನೇತೆರೆದಿಡುತ್ತದೆ.ಜಾಗತಿಕ ಮಟ್ಟದಲ್ಲಿ ಫ್ರೆಂಚ್ ಸರ್ಕಾರ ಅನುಷ್ಠಾನಗೊಳಿಸುವ ಅಣುನೀತಿ, ಯುದ್ಧನೀತಿಗಳನ್ನು ಈ ಅದ್ಭತಲೋಕ ಮರೆಸಿಬಿಡುತ್ತದೆ. ಹಾಗಿಲ್ಲದೆಯೂ ಫ್ರೆಂಚ್ ಸಿನಿಮಾಅಮೆರಿಕನ್ ಸಿನಿಮಾದಂತೆಡಾಲರ್ ಮೇಲೆ ಮಾತ್ರಕಣ್ಣಿಡದೆ ಸಾಂಸ್ಕೃತಿಕ ಪರಂಪರೆಯನ್ನುಕಟ್ಟುವಂಥ, ವಿಶಾಲ ತಳಹದಿಯ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವಂಥ ಚಿತ್ರಗಳನ್ನು ನಿರ್ಮಿಸುವಲ್ಲಿ ಫ್ರೆಂಚ್ ಸರ್ಕಾರದ ಸಿನಿಮಾ ನೀತಿಕಾರಣ. ಅಲ್ಲಿನ ಸರ್ಕಾರತನ್ನರಾಷ್ಟ್ರೀಯ ಗಳಿಕೆಯ ನಿರ್ದಿಷ್ಟ ಶತಾಂಶವನ್ನುಕಲಾತ್ಮಕ ಚಿತ್ರಗಳ ಸಹಾಯಧನಕ್ಕಾಗೇತೆಗೆದಿಡುತ್ತದೆ. ಫ್ರಾನ್ಸ್ ದೇಶದೊಳಗೆ ಅಥವಾ ಫ್ರೆಂಚ್ ನಾಗರಿಕರು ತಯಾರಿಸುವ ಎಲ್ಲಾ ಚಿತ್ರಗಳಿಗೂ ಸರಕಾರದ ಸಹಾಯ ಸಿಗುತ್ತದೆ.

ಹೀಗಾಗಿ ಫ್ರೆಂಚ್‌ಚಿತ್ರೋದ್ಯಮ ಮತ್ತುಕಲಾತ್ಮಕ ಚಿತ್ರತಯಾರಿಕೆಗಳ ನಡುವೆ ಬೇರೆ ದೇಶಗಳಲ್ಲಿಲ್ಲದ ಚಿತ್ರನೀತಿ ಸಾಮರಸ್ಯವನ್ನು ಸಾಧಿಸುತ್ತದೆ.ಕೇವಲ ದೇಶೀಯ ಫ್ರೆಂಚ್‌ಚಿತ್ರತಯಾರಕರನ್ನು ಮಾತ್ರವಲ್ಲ, ಫ್ರಾನ್ಸ್‌ನಚಿತ್ರೋದ್ಯಮಕಲಾತ್ಮಕಚಿತ್ರಮಾಡುವವರನ್ನು ವಿಶ್ವದ ಮೂಲೆ ಮೂಲೆಗಳಿಂದ ಆಕರ್ಷಿಸುತ್ತದೆ.ಇದರಒಟ್ಟು ಪರಿಣಾಮ ಫ್ರೆಂಚ್‌ಚಿತ್ರೋತ್ಸವವೆಂದರೆ ಚಲನಚಿತ್ರಸಹೃದಯರ ಕಣ್ಣರಳುತ್ತವೆ.

mys1

ಸಿನಿಮಾ ಮಾರುಕಟ್ಟೆಯಲ್ಲಿ ಲಾಭ-ನಷ್ಟಗಳ ಮಾರುಕಟೆ ಮತ್ತು ಪ್ರಶಸ್ತಿ ಮಾರುಕಟ್ಟೆ ಎಂದುಎರಡು ವಿಧ.ವ್ಯಾಪಾರೀ ಸಿನಿಮಾ ಎಂದು ಕರೆಯುವ ಗುಂಪಿಗೆ ಸೇರುವಚಿತ್ರೋತ್ಪಾದಕರು ಮೊದಲ ರೀತಿಯ ಮಾರುಕಟ್ಟೆಯ ನಿಯಂತ್ರಕರು ಮತ್ತು ಬಿಕರಿದಾರರು. ಕಣ್ಣೀರು, ಕಾಮ, ಕ್ರೌರ‍್ಯ, ಮತ್ತುತಾಂತ್ರಿಕ ಕಸರತ್ತುಗಳನ್ನು ಬಳಸಿಕೊಂಡು ಅವಕ್ಕೆ ಸುಲಭವಾಗಿ ಮನಸೋಲುವ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುವವರು. ಲಾಭ-ನಷ್ಟಗಳ ಮಾರುಕಟ್ಟೆಯಲ್ಲಿ ಅವರ ಚಿತ್ರಗಳ ಸೋಲು-ಗೆಲುವುಗಳಿಗೆ ಬಳಕೆದಾರರನ್ನು ಗುರಿಮಾಡದೆತಮ್ಮ ಪ್ರತಿಸ್ಪರ್ಧಿಗಳನ್ನೋ, ಸರ್ಕಾರದ ಸಹಾಯಧನ ನೀತಿಯನ್ನೋ ಅಥವಾ ಅದೃಷ್ಟವನ್ನೋ ಹೊಣೆಮಾಡುವವರು.

ಆದರೆ ಕಲಾತ್ಮಕ ಸಿನಿಮಾ ಎಂದು ಕರೆಯುವ ಗುಂಪಿನ ಚಿತ್ರತಯಾರಕರು ‘ಪ್ರಶಸ್ತಿಯ ಮಾರುಕಟ್ಟೆಯಲ್ಲಿ’ ತಮ್ಮ ಚಿತ್ರಗಳ ಸೋಲು-ಗೆಲುವುಗಳಿಗೆ ಗುಣಮಟ್ಟವನ್ನು ತಳಹದಿಯಾಗಿಸದೆ, ಜ್ಯೂರಿಗಳನ್ನು, ಚಿತ್ರರಸಿಕರನ್ನು ಮತ್ತು ಸರ್ಕಾರಗಳ ಪ್ರದರ್ಶನ ನೀತಿಗಳನ್ನು ಹೊಣೆಯಾಗಿಸುತ್ತಾರೆ. ಎರಡೂ ಬಗೆಯ ಸಿನಿಮಾದಲ್ಲೂ ಕಾಮ-ಕ್ರೌರ‍್ಯಗಳ ಅಂಶ ಸಾಂದರ್ಭಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಇರಬಹುದು.ಆದರೆ ಚಿತ್ರ ನೋಡಲು ಬರುವವರೆಲ್ಲರೂ ಅವನ್ನು ನಿರೀಕ್ಷಿಸಿಕೊಂಡೇ ಬರುತ್ತಾರೆಎಂದು ಹೇಳಲಾಗದು.ದೊಡ್ಡದೊಡ್ಡ ಚಿತ್ರೋತ್ಸವಗಳಲ್ಲಿ ಸರ್ಟಿಫೈಡ್ ಕಾಪಿಯಂಥ ಚಿತ್ರವನ್ನು ಕಿಕ್ಕಿರಿದ ಚಿತ್ರಮಂದಿರದಲ್ಲಿ ಉಸಿರು ಬಿಗಿಹಿಡಿದು ನೋಡುವ ಜನರನ್ನುಕಂಡಾಗ ಅವರನ್ನು ಚಿತ್ರರಸಿಕರು ಮತ್ತು ಬಳಕೆದಾರರು ಎಂದು ಭಾಗಮಾಡಿ ನೋಡಲಾಗುವುದಿಲ್ಲ ಎಂಬ ಅಂಶ ನನಗೆ ಕಂಡಿದೆ. ಮೈಸೂರಿನಲ್ಲಿ ನಡೆದ ಫ್ರೆಂಚ್‌ ಚಿತ್ರೋತ್ಸವದಲ್ಲಿ ನನಗೆ ಕಂಡಿದ್ದು ಇದೇ. ಭಾರತೀಯಚಿತ್ರಗಳಿಗೆ ಫ್ರೆಂಚ್ ಚಿತ್ರರಸಿಕರ ಅಥವಾ ಬಳಕೆದಾರರ ನಿರೀಕ್ಷೆಅಥವಾ ಪ್ರತಿಕ್ರಿಯೆಯನ್ನು ತಿಳಿಯುವ ಸೌಲಭ್ಯ ನನಗಿಲ್ಲ. ಆದರೆ ಫ್ರೆಂಚ್‌ಚಿತ್ರ ಕ್ಲಾಸಿಕ್ ಆಗಿರಲಿ ಅಥವಾಇಲ್ಲದಿರಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಚಿತ್ರ ನೋಡಲು ಬರುವವರೆಲ್ಲರನ್ನೂ ಹಿಡಿದಿಡುವ ಗುಣ ಪಡೆದಿವೆ ಎಂದೆನಿಸುವಂತೆ ಮೈಸೂರಿನಲ್ಲಿ ನಡೆದಚಿತ್ರೋತ್ಸವದಲ್ಲಿನ ಪ್ರೇಕ್ಷಕರ ಚಿತ್ರಾಸ್ವಾದನೆಇತ್ತು.

ಇಂದು ಇಡೀ ವಿಶ್ವವೇ ಪ್ರಕ್ಷುಬ್ಧವಾಗಿದೆ.ದೇಶೀಯ ಅಣುನೀತಿ, ಪರಿಸರದ ಗಂಡಾಂತರ, ತಾಪಮಾನ ವೈಪರೀತ್ಯಗಳು, ಆರ್ಥಿಕ ಕುಸಿತ, ಹೆಚ್ಚುತ್ತಿರುವ ಬಡತನ-ಸಂಪತ್ತಿನ ಪೈಪೋಟಿಗಳು ಸಿನಿಮಾದ ವರ್ಚುಯಲ್ ಪ್ರಪಂಚದಲ್ಲಿ ಬಿಂಬಿತವಾಗುವ ವಸ್ತುಗಳಾಗಿವೆ. ಆರ್ಥಿಕ ಬಂಡವಾಳ, ಮಾರುಕಟ್ಟೆಯ ಬಂಡವಾಳ ಮುಂತಾಗಿ ಬೆಳೆಯುತ್ತಲೇ ಇರುವ ಜಾಗತಿಕ ಬಂಡವಾಳ ಈಗ ‘ಮೀಡಿಯಾಬಂಡವಾಳವಾಗಿ’ ಕಲಾತ್ಮಕ ಸಿನಿಮಾವನ್ನೂ ನಿಯಂತ್ರಿಸುತ್ತಿದೆ.ಲಾಭ-ನಷ್ಟಗಳ ವ್ಯಾಪಾರಿ ಸಿನಿಮಾಗಳು ಪ್ರಶಸ್ತಿ ಮಾರುಕಟ್ಟೆಯಲ್ಲೂ ಮೇಲುಗೈ ಪಡೆಯಲು ಹವಣಿಸುತ್ತಿವೆ. ಸಿನಿಮಾಗಳಮೂಲಕ ನಾವು ನಡೆಸುವ ಸಾಂಸ್ಕೃತಿಕ ಅನುಸಂಧಾನದಲ್ಲಿ ಇವೆಲ್ಲವೂ ಇವೆ.

Advertisements