ಏಪ್ರಿಲ್ 2 ರಿಂದ ಮೇ 3 ರವರೆಗೆ ಐದು ವಾರಗಳ ಫಿಲ್ಮ್ ಲ್ಯಾಬ್ ಕೋರ್ಸ್ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಮುಗಿಸಿದ, ಓದಲು ಮತ್ತು ಬರೆಯಲು ಇಂಗ್ಲಿಷ್ ಬರುವ ಯಾರು ಬೇಕಾದರೂ ಈ ಕೋರ್ಸ್‌ನಲ್ಲಿ ಭಾಗವಹಿಸಬಹುದು.

ಈ ಕೋರ್ಸ್‌ಗೆ ಶುಲ್ಕವಿರುವುದಿಲ್ಲ. ಆದರೆ, ವಿದ್ಯಾರ್ಥಿಗಳು ಕ್ಯಾಮೆರಾ ಮತ್ತು ಕಂಪ್ಯೂಟರ್, ಸಂಕಲನ ಸಾಫ್ಟ್‌ವೇರ್ ನ್ನು ತಾವೇ ತರಬೇಕು. ಕೋರ್ಸ್ ಅವಧಿಯಲ್ಲಿ ಸುಚಿತ್ರಾ ಸ್ಕೂಲ್ ಆಫ್ ಸಿನಿಮಾ ಅಂಡ್ ಡ್ರಾಮೆಟಿಕ್ ಆರ್ಟ್ಸ್ ನವರಲ್ಲೂ ಮನವಿ ಮಾಡಬಹುದು.

suchitra-film-society

ಕೋರ್ಸ್ ಏಕಕಾಲದಲ್ಲಿ ಬೆಂಗಳೂರು ಮತ್ತು ಗೊಥೆನ್‌ಬರ್ಗ್‌ನಲ್ಲಿ ನಡೆಯಲಿದೆ. ಕೋರ್ಸ್ ಮುಗಿದ ನಂತರ ಇಸ್ತಾಂಬುಲ್‌ನಲ್ಲಿ ಭಾರತೀಯ ಮತ್ತು ಸ್ವೀಡಿಷ್ ವಿದ್ಯಾರ್ಥಿಗಳು ಎರಡು ವಾರ ಒಟ್ಟಿಗೆ ಕಲಿಯಬೇಕಿದೆ.

ಕೋರ್ಸ್‌ನಲ್ಲಿ ಕಾರ‍್ಯಾಗಾರ, ಉಪನ್ಯಾಸ, ಗುಂಪು ಚರ್ಚೆ, ಪ್ರಾತ್ಯಕ್ಷಿಕೆ ಇತ್ಯಾದಿಗಳೆಲ್ಲಾ ಇರುತ್ತವೆ. ಆಸಕ್ತರು ಎ೪ನ ಒಂದೇ ಹಾಳೆಯಲ್ಲಿ ತಮ್ಮ ಸ್ವವಿವರ, ಅರ್ಜಿ ಸಲ್ಲಿಸುವ ಉದ್ದೇಶ-ಪ್ರೇರಣೆಗೆ ವಿವರಣೆ (ಒಂದೇ ಪುಟದಷ್ಟು), ಹತ್ತು ನಿಮಿಷಗಳೊಳಗಿನ ಸಿನಿಮಾ ಮಾಡಿದ್ದರೆ ಅದರ ವಿವರ(link to Vimeo, YouTube or similar or submitted DVD or USB stick), ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ದೃಢೀಕರಿಸಿದ ಪಾಸ್‌ಪೋರ್ಟ್‌ನ ಒಂದು ನಕಲುಪ್ರತಿಯನ್ನು ಕಳಿಸಬೇಕು.

ಅರ್ಜಿಗಳನ್ನು ಸ್ವೀಕರಿಸಲು ಫೆಬ್ರವರಿ 4 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗೆ school@suchitra.org. For more details write to gunilla.burstedt@akademinvaland.gu.se

ಈ ಕೋರ್ಸ್‌ನ್ನು ಸುಚಿತ್ರಾ ಸ್ಕೂಲ್, ರೀಜನ್ ವಾಸ್ತ್ರ ಗೊಟಾಲ್ಯಾಂಡ್ಸ್ ಕಲ್ಚರಲ್ ಕಮಿಟಿ, ಗೊಥೆನ್‌ಬರ್ಗ್ ವಿವಿ ಯ ಕಲಾ, ಅನ್ವಯಕಲೆ, ಪ್ರದರ್ಶನ ಕಲಾ ವಿಭಾಗದ ಸಹಯೋಗದಲ್ಲಿ ಬೆಂಗಳೂರಿನ ಸುಚಿತ್ರಾ ಸ್ಕೂಲ್ ಆಫ್ ಸಿನಿಮಾ ಅಂಡ್ ಡ್ರಾಮೆಟಿಕ್ ಆರ್ಟ್ಸ್ ನಡೆಸುತ್ತಿದೆ.