ರೋಲಿಂಗ್ ಫ್ರೇಮ್ಸ್ ಕಿರುಚಿತ್ರ ಉತ್ಸವ ಮಾರ್ಚ್ 9-10 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಬೆಂಗಳೂರು ಫಿಲ್ಮ್ ಸೊಸೈಟಿ, ವೈಜಾಗ್ ಫಿಲ್ಮ್ ಸೊಸೈಟಿ, ಅಸೋಸಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರೀಸ್ ಹಾಗೂ ಗಣಂಗಡ್ ಎಂಟರ್ ಟೈನ್ ಮೆಂಟ್ ನ ಸಹಕಾರದಲ್ಲಿ ಇದನ್ನು ಸಂಘಟಿಸಲಾಗಿದ್ದು, ಆಸಕ್ತರಿಂದ ಕಿರುಚಿತ್ರಗಳನ್ನು ಆಹ್ವಾನಿಸಿದೆ.
30 ನಿಮಿಷದವರೆಗಿನ ಅವಧಿಯ ಕಿರುಚಿತ್ರಗಳನ್ನು ಕಳುಹಿಸಬಹುದು. ಪ್ರತಿ ಪ್ರವೇಶಕ್ಕೂ 500 ರೂ. ಶುಲ್ಕ. ಕಿರುಚಿತ್ರವು ಯಾವುದೇ ಭಾಷೆಯಲ್ಲಿರಬಹುದು. ಆದರೆ ಅದಕ್ಕೆ ಇಂಗ್ಲಿಷ್ ನ ಸಬ್ ಟೈಟಲ್ಸ್ ಇರಬೇಕು. ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನ ಫೆಬ್ರವರಿ 1.
ಪ್ರದರ್ಶನಕ್ಕೆ ಆಯ್ಕೆಯಾದ ಕಿರುಚಿತ್ರಗಳಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಬಾಲ ಕಲಾವಿದ, ನಿರ್ದೇಶನ, ಸಿನೆ ಛಾಯಾಗ್ರಾಹಣ, ಸಂಗೀತ ನಿರ್ದೇಶನ, ಅನಿಮೇಷನ್, ಚಿತ್ರಕಥೆ, ಸಂಕಲನ, ಸ್ಪೆಷಲ್ ಎಫೆಕ್ಟ್ಸ್ ಇತ್ಯಾದಿಗೆ ಪ್ರಶಸ್ತಿಯನ್ನು ನೀಡಲಾಗುವುದು.
ಇದಲ್ಲದೇ, ವಿಚಾರ ಸಂಕಿರಣ ಮತ್ತು ಪ್ರದರ್ಶನವೂ ಇರಲಿದೆ. ವಿಷಯ ತಜ್ಞರು ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡುವರು. ವಿಷಯಗಳು ಇಂತಿವೆ :
1. ಭಾರತೀಯ ಚಿತ್ರ ಜಗತ್ತು ಮತ್ತು ಅದರ ಕಾರ್ಯರೀತಿ
2. ಕಿರುಚಿತ್ರದ ಪರಿಕಲ್ಪನೆ ಮತ್ತು ಅದರ ಪ್ರಯೋಜನ
3. ಚಿತ್ರಕಥೆ/ನಿರ್ದೇಶನ/ಸಿನೆಛಾಯಾಗ್ರಾಹಣ ಇತ್ಯಾದಿಯ ರೂಪುರೇಷೆ
4. ಕಿರುಚಿತ್ರಗಳಿಂದ ಆದಾಯ ಗಳಿಸುವಿಕೆ
5. ವಿತರಣೆ/ಕಿರುಚಿತ್ರಗಳ ಪ್ರದರ್ಶನ/ ಕಿರು ಚಿತ್ರಗಳ ಉತ್ಸವ ಇತ್ಯಾದಿ
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.