ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಫ್ಟಿಐಐ) ವಿವಿಧ ಕೋರ್ಸ್ಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಸಲ್ಲಿಸಲು 2013 ಮಾರ್ಚ್ 16 ಕಡೆಯ ದಿನ. ಪ್ರತಿ ಕೋರ್ಸ್ಗಳಿಗೆ 12 ಮಂದಿಗೆ ಅವಕಾಶ. ಅರ್ಜಿ ಸಲ್ಲಿಸುವವರಿಗೆ ಇಂಗ್ಲಿಷ್ ಜ್ಞಾನ ಚೆನ್ನಾಗಿರಬೇಕು.
ಅರ್ಜಿ, ವಿವರಣಾ ಪತ್ರ (ಪ್ರಾಸ್ಪೆಕ್ಟಸ್) ಇತ್ಯಾದಿಯನ್ನು ಎಫ್ಟಿಐಐ ಗೆ ಸೂಕ್ತ ಡಿಮ್ಯಾಂಡ್ ಡ್ರಾಫ್ಟ್ ಕಳಿಸಿ ಪಡೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 2,150 ರೂ. ಹಾಗೂ ಪರಿಶಿಷ್ಟ ವರ್ಗ-ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರು 650 ರೂ. ಗಳ ಡಿಮ್ಯಾಂಡ್ ಡ್ರಾಫ್ಟ್ ನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ನಿಂದ ಅಕೌಂಟ್ ಆಫೀಸರ್, ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೆಸರಿಗೆ ಪಡೆದು ಕಳುಹಿಸಬೇಕು. ಜನವರಿ 21 ರ ನಂತರ ಫೆಬ್ರವರಿ 22 ರೊಳಗೆ ಮಾತ್ರ ಅಂಚೆಯಲ್ಲಿ ಕಳುಹಿಸುವ ಸೌಲಭ್ಯ ಲಭ್ಯವಿರಲಿದೆ. ಪುಣೆಯ ಕ್ಯಾಂಪಸ್ ನಲ್ಲೂ ಅರ್ಜಿ, ವಿವರಣಾ ಪತ್ರ ಲಭ್ಯವಿದೆ ಹಾಗೂ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಮೊದಲ ಹಂತದ ಆಯ್ಕೆ ಮುಗಿದ ನಂತರ, ಎಲ್ಲ ಕೋರ್ಸ್ಗಳ ಆಕಾಂಕ್ಷಿಗಳಿಗೂ ಪ್ರವೇಶ ಪರೀಕ್ಷೆ ಮೇ ೧೯ ರಂದು ನಡೆಯಲಿದೆ. ಅಗರ್ತಲ, ಅಹಮದಾಬಾದ್, ಬೆಂಗಳೂರು, ಅಲಹಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಾಹಟಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕೋಲ್ಕೊತ್ತಾ, ಲಕ್ನೊ, ಮುಂಬಯಿ, ದಿಲ್ಲಿ, ಪಾಟ್ನಾ, ರಾಯಪುರ್, ರಾಂಚಿ ಹಾಗೂ ತಿರುವನಂತಪುರದಲ್ಲಿ ಪರೀಕ್ಷೆಯನ್ನು ಸಂಘಟಿಸಲಾಗುತ್ತಿದೆ.
ಲಭ್ಯವಿರುವ ಕೋರ್ಸ್ಗಳ ವಿವರ
ನಿರ್ದೇಶನದಲ್ಲಿ ಪಿಜಿ ಡಿಪ್ಲೊಮಾ (3ವರ್ಷ)
ಸಿನೆಮಾಟಾಗ್ರೋಫಿಯಲ್ಲಿ ಪಿಜಿ ಡಿಪ್ಲೊಮಾ (3ವರ್ಷ)
ಸೌಂಡ್ ರೆಕಾರ್ಡಿಂಗ್ ಮತ್ತು ಸೌಂಡ್ ಡಿಸೈನ್ ನಲ್ಲಿ ಪಿಜಿ ಡಿಪ್ಲೊಮಾ (3ವರ್ಷ)
ಎಡಿಟಿಂಗ್ನಲ್ಲಿ ಪಿಜಿ ಡಿಪ್ಲೊಮಾ (3ವರ್ಷ)
ಆಕ್ಟಿಂಗ್ ನಲ್ಲಿ ಪಿಜಿ ಡಿಪ್ಲೊಮಾ (2ವರ್ಷ)
ಆರ್ಟ್ ಡೈರೆಕ್ಷನ್ ಮತ್ತು ಪ್ರೊಡಕ್ಷನ್ ಡಿಸೈನ್ ನಲ್ಲಿ ಪಿಜಿ ಡಿಪ್ಲೊಮಾ (2ವರ್ಷ)
ಚಲನಚಿತ್ರ ಸ್ಕ್ರೀನ್ ಪ್ಲೇ ರೈಟಿಂಗ್ನಲ್ಲಿ ಪಿಜಿ ಸರ್ಟಿಫಿಕೇಟ್ ಕೋರ್ಸ್(1ವರ್ಷ)
ನಿರ್ದೇಶನ (ಟೆಲಿವಿಷನ್) ಸರ್ಟಿಫಿಕೇಟ್ ಕೋರ್ಸ್(1 ವರ್ಷ)
ಎಲೆಕ್ಟ್ರಾನಿಕ್ ಸಿನೆಮಾಟೋಗ್ರಫಿ (ಟೆಲಿವಿಷನ್) ಸರ್ಟಿಫಿಕೇಟ್ ಕೋರ್ಸ್(1 ವರ್ಷ)
ವಿಡಿಯೋ ಎಡಿಟಿಂಗ್ (ಟೆಲಿವಿಷನ್) ಸರ್ಟಿಫಿಕೇಟ್ ಕೋರ್ಸ್(1 ವರ್ಷ)
ಸೌಂಡ್ ರೆಕಾರ್ಡಿಂಗ್ ಮತ್ತು ಟಿವಿ ಎಂಜಿನಿಯರಿಂಗ್ (ಟೆಲಿವಿಷನ್) ಸರ್ಟಿಫಿಕೇಟ್ ಕೋರ್ಸ್(1 ವರ್ಷ)
Postal address and contact numbers:
Controller of examinations
Film & Television Institute of India
Law College Road,
Pune – 411 004
ಮಾಹಿತಿಗೆ
Phone: 020 – 25431817 / 25430017 / 25430363 / Ext. 223,
020 – 25425656 (Direct line)