ಕೇಂದ್ರ ಸರಕಾರದ ಚಿತ್ರೋತ್ಸವ ನಿರ್ದೇಶನಾಲಯ 60 ನೇ ರಾಷ್ಟ್ರೀಯ ವಾರ್ಷಿಕ ಸಿನಿಮಾ ಪ್ರಶಸ್ತಿಗಳಿಗೆ ಪ್ರವೇಶಗಳನ್ನು ಆಹ್ವಾನಿಸಿದೆ.

ಫೀಚರ್ (ಕಥಾ) ಮತ್ತು ನಾನ್ ಫೀಚರ್ (ಕಥೇತರ) ಎರಡು ವಿಭಾಗಗಳಲ್ಲಿ ಅರ್ಜಿಗಳನ್ನು ಕಳುಹಿಸಬಹುದಾಗಿದೆ. ಜತೆಗೆ ಸಿನಿಮಾ ಕುರಿತು ಬರೆದಿರುವ ಅತ್ಯುತ್ತಮ ಬರಹಗಳನ್ನೂ ಕಳುಹಿಸಬಹುದು.
2012 ರ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಸೆನ್ಸಾರ್ ಆಗಿರುವ ಚಲನಚಿತ್ರಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಿನಿಮಾಗಳ ಮೇಲಿನ ವಿಮರ್ಶಾ ಬರಹಗಳು, ಪುಸ್ತಕಗಳು ಇದೇ ಅವಧಿಯೊಳಗೆ ಪ್ರಕಟಗೊಂಡಿರಬೇಕು.

Golden-Lotus

ತಮ್ಮ ಪ್ರವೇಶಗಳನ್ನು ಕಳುಹಿಸಲು ಜನವರಿ 21 ಕೊನೆಯ ದಿನಾಂಕ.

ಫೀಚರ್ ವಿಭಾಗದಲ್ಲಿ 30 ವಿವಿಧ ಪ್ರಶಸ್ತಿಗಳಿವೆ. ಅತ್ಯುತ್ತಮ ಚಿತ್ರ, ನಿರ್ದೇಶಕರ ಮೊದಲ ಚಿತ್ರ, ಜನಪ್ರಿಯ ಚಿತ್ರ, ಮಕ್ಕಳ ಚಿತ್ರ, ಅನಿಮೇಷನ್ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ನಟಿ, ಹಿನ್ನೆಲೆ ಗಾಯನ, ಸಂಗೀತ ನಿರ್ದೇಶನ, 8 ನೇ ಷೆಡ್ಯೂಲ್ ನಲ್ಲಿ ಸೇರಿಸಲಾದ ಪ್ರಾದೇಶಿಕ ಭಾಷೆಗಳಲ್ಲಿನ ಅತ್ಯುತ್ತಮ ಚಿತ್ರ ಇತ್ಯಾದಿ ವಿಭಾಗಗಳಿವೆ.

ನಾನ್ ಫೀಚರ್ ವಿಭಾಗದಲ್ಲಿ 22 ವಿವಿಧ ಪ್ರಶಸ್ತಿಗಳಿವೆ. ನಿರ್ದೇಶಕರ ಅತ್ಯುತ್ತಮ ಮೊದಲ ಚಿತ್ರ, ಅತ್ಯುತ್ತಮ ಕಲಾ/ ಸಾಂಸ್ಕೃತಿಕ ಚಿತ್ರ, ಅನಿಮೇಷನ್ ಚಿತ್ರ, ಅತ್ಯುತ್ತಮ ಸಿನೆ ಛಾಯಾಗ್ರಾಹಣ ಇತ್ಯಾದಿ.

ಸಿನಿಮಾ ವಿಮರ್ಶೆ ಕುರಿತಾಗಿ ಅತ್ಯುತ್ತಮ ಪುಸ್ತಕ ಮತ್ತು ಅತ್ಯುತ್ತಮ ವಿಮರ್ಶಕ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ