5 ನೇ ಬೆಂಗಳೂರು ಚಿತ್ರೋತ್ಸವ ಗುರುವಾರ ಸಮಾರೋಪಗೊಂಡಿತು.

ಚಿತ್ರ ಭಾರತಿ ಸ್ಪರ್ಧೆಯಡಿ ಭಾರತೀಯ ಚಿತ್ರಕ್ಕೆ ನೀಡುವ “ಸುಚಿತ್ರಾ ಸನ್ಮಾನ್” ಪ್ರಶಸ್ತಿಗೆ ಜಾಹ್ನು ಬರುವಾ ಅವರ “ಬಂಧೋನ್” ಸಿನಿಮಾ ಆಯ್ಕೆಯಾಯಿತು. ಕನ್ನಡ ಚಿತ್ರ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ “ಕೂರ್ಮಾವತಾರ” ಪ್ರಶಸ್ತಿ ಪಡೆದರೆ, ನೆಟ್ ಪ್ಯಾಕ್ ವಿಭಾಗದಡಿ ಪ್ಯಾಲೇಸ್ತೀಯನ್ ಮೂವಿ ಸೂಸನ್ ಯೂಸೂಫ್ ಅವರ `ಹಬೀಬಿ’ ಚಿತ್ರಗಳಿಗೆ ಚಿತ್ರೋತ್ಸವದ `ಶ್ರೇಷ್ಠ ಚಲನಚಿತ್ರ’ ಪ್ರಶಸ್ತಿ ದೊರಕಿತು. ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದ ವಿಜೇತರಿಗೆ ಸ್ಮರಣಿಕೆಯೊಂದಿಗೆ 4 ಲಕ್ಷ ರೂಪಾಯಿ ಚೆಕ್, ಇತರ ಎರಡು ವಿಭಾಗಗಳಿಗೆ 2 ಲಕ್ಷ ರೂಪಾಯಿ ಚೆಕ್ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು.

siddalingaiah jpg

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ `ಸಾಹಿತ್ಯ, ಸಂಗೀತ, ಸಿನಿಮಾ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರದ್ದೇ ಮೇಲುಗೈ. ಸೃಜನಶೀಲತೆ ಹಾಗೂ ಸೌಜನ್ಯಕ್ಕೆ ಹೆಸರಾದವರು ಇವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಪುರಸ್ಖೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ನಟ ಪ್ರಭುದೇವ್,

 

`ಗೋವಾ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ಭಾಷೆಗಳು ಅದರಲ್ಲೂ ಕನ್ನಡ ಸಿನಿಮಾಗಳು ಪ್ರವೇಶ ಪಡೆಯುವುದೇ ಕಷ್ಟ. ಹಾಗಾಗಿ ದಕ್ಷಿಣ ಭಾರತದ ಸಿನಿಮಾಗಳಿಗೆ ಬೆಂಗಳೂರು ಚಲನಚಿತ್ರೋತ್ಸವ ವೇದಿಕೆ ಕಲ್ಪಿಸುವ ಮೂಲಕ ದಕ್ಷಿಣ ಭಾರತದ ಚಿತ್ರೋತ್ಸವವಾಗಬೇಕು’ ಎಂದವರು ನಟಿ ಜಯಮಾಲಾ.

ಹಿರಿಯ ನಟಿ ಹರಿಣಿ, ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ನಟರಾದ ಅಂಬರೀಶ್, ಪ್ರಭುದೇವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು,  ಉತ್ಸವದ ಕಾರ್ಯಕಾರಿ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನೂರಾಧ ಇತರರು ಉಪಸ್ಥಿತರಿದ್ದರು.