ಐದನೇ ಸಿನಿಮೋತ್ಸವಕ್ಕೆ ಗುರುವಾರ ಚಾಲನೆ ದೊರೆತಿದ್ದು, ನಿಧಾನವಾಗಿ ರಂಗೇರತೊಡಗಿದೆ. ನಾಳೆ ಶನಿವಾರವಿರುವುದರಿಂದ, ಹೆಚ್ಚು ಜನ ಭಾಗವಹಿಸುವರ ನಿರೀಕ್ಷೆಯಿದೆ. ಸಿನಿಮಾ ವಸ್ತುಪ್ರದರ್ಶನ, ಓಪನ್ ಫೋರಂಗಳೆಲ್ಲಾ ಚಾಲನೆಗೊಳ್ಳಬೇಕಿದೆ.

ಸಿನಿಮೋತ್ಸವವನ್ನು ನಿಯಮಿತವಾಗಿ ಸಂಘಟಿಸಲು ಅನುಕೂಲವಾಗುವಂತೆ ಸಿನಿಮೋತ್ಸವ ನಿರ್ದೇಶನಾಲಯ ತೆರೆಯುವುದು ರಾಜ್ಯ ಸರಕಾರದ ಉದ್ದೇಶ.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ 5 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಡವವನ್ನು ಉದ್ಘಾಟಿಸಿದ ಅವರು, ಸಿನಿಮಾ ಸಂಸ್ಕೃತಿಯನ್ನು ಬೆಳೆಸಲು ಸರಕಾರ ಬದ್ಧ ಎಂದರು.

Inaguration+of+Bengaluru+International+Festval

ಸಿನಿಮೋತ್ಷವಕ್ಕೆ ಪ್ರತ್ಯೇಕ ನಿರ್ದೇಶನಾಲಯ ರಚಿಸುವತ್ತ ಗಮನಹರಿಸಲಾಗುವುದು. ಒಟ್ಟಿನಲ್ಲಿ ರಾಜ್ಯದಲ್ಲಿ ಸಿನಿಮಾ ಸಂಸ್ಕೃತಿ ಬೆಳೆಯಬೇಕಲ್ಲದೆ, ಸರಕಾರ ಕನ್ನಡ ಚಿತ್ರರಂಗವನ್ನು ಬೆಳೆಸಲು ಅಗತ್ಯ ಸಹಕಾರ ನೀಡುತ್ತಿದೆ ಎಂದರು.

ಸಾಗರ ಸಂಗಮಂ ಚಿತ್ರದ ಖ್ಯಾತಿಯ ನಿರ್ದೇಶಕ ಕೆ. ವಿಶ್ವನಾಥ್ ವೇದಿಕೆಗೆ ಬರುತ್ತಿದ್ದಂತೆ ಜನರು ಎದ್ದು ನಿಂತು ಗೌರವ ಸೂಚಿಸಿದರು. “ನನ್ನ ಚಿತ್ರಗಳಿಗೆ ಕನ್ನಡ ನಾಡಿನಲ್ಲೂ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಇಂಥ ಚಿತ್ರಗಳನ್ನು ಯಾವುದೋ ಮಾನವಾತೀತ ಶಕ್ತಿ ನನ್ನಿಂದ ಮಾಡಿಸಿದೆ’ ಎಂದರು. ಶಂಕರಾಭರಣಂ, ಸ್ವಾತಿಮುತ್ಯಂ, ಸಾಗರ ಸಂಗಮಂ ನಂಥ ಚಿತ್ರಗಳನ್ನು ಇವರು ನಿರ್ದೇಶಿಸಿದ್ದರು.

ಜಪಾನಿ ಚಿತ್ರ ನಿರ್ದೇಶಕ ಮಾಸಾಹಿರೋ ಕೊಬಯಾಷಿ, ನಟ ವಿ. ರವಿಚಂದ್ರನ್, ಮಹಾಪೌರ ಡಿ.ವೆಂಕಟೇಶ್ ಮೂರ್ತಿ, ಚಲನಚಿತ್ರ ಮಂಡಳಿ ಅಧ್ಯಕ್ಷ ಬಿ.ಎನ್. ವಿಜಯಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಉತ್ಸವದ ಕಲಾತ್ಮಕ ನಿರ್ದೇಶಕ ಎಚ್. ಎನ್. ನರಹರಿರಾವ್, ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜ್, ಮುಖ್ಶಿಮಂತ್ತಿ ಜಗದೀಶ್ ಶೆಟ್ಟರ್ ಅವರ ಪತ್ನಿ ಶಿಲ್ಪಾ ಎಸ್. ಶೆಟ್ಟರ್ , ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಭಾಗವಹಿಸಿದ್ದರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ, ದೊಡ್ಡಣ್ಣ, ಜಯಮಾಲಾ, ಹೇಮಾ ಚೌಧರಿ, ಸುಧಾರಾಣಿ, ಸೌಂದರ್ಯ ಜಯಮಾಲಾ, ಎಂ.ಎಸ್. ಉಮೇಶ್ ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಕನ್ನಡ ಬೆಳ್ಳಿಬಿಂಬ ಪುಸ್ತಕ ಮತ್ತು ಮಾಯಾರಾವ್ ಅವರ  “ಕನ್ನಡ ಜೀವಸ್ವರ” ಸಿ. ಡಿ. ಯನ್ನು ಬಿಡುಗಡೆಗೊಳಿಸಲಾಯಿತು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಉತ್ಸವಕ್ಕೆತಮ್ಮ ಸ್ಯಾಕ್ಸೋಫೋನ್ ವಾದನದಿಂದ ಶುಭಾರಂಭ ಮಾಡಿದ ಕಲಾವಿದ ಶ್ರೀಧರ್ ಸಾಗರ್ ಮತ್ತು ತಂಡ, ಕೆಲವು ಭಾವಗೀತೆ, ಚಿತ್ರಗೀತೆಗಳನ್ನು ನುಡಿಸಿತು. “ಸಿನಿಮಾ ನೂರು ವರ್ಷ” ಕುರಿತ ದೃಶ್ಯಮಾಲಿಕೆಯು ಭಾರತೀಯ ಚಿತ್ರರಂಗ ನಡೆದು ಬಂದ ಹಾದಿಯನ್ನು ನೆನಪಿಸಿತ್ತು. ನಂತರ ಹಾಟ್ ಶಾಟ್ ತಂಡ ಪ್ರಸ್ತುತಪಡಿಸಿದ ಎರಡು ನೃತ್ಯ ಗಮನಸೆಳೆದವವು.