ಡಿಸೆಂಬರ್ 20 ರಿಂದ 27 ರವರೆಗೆ ಬೆಂಗಳೂರಿನಲ್ಲಿ ಆರಂಭವಾಗಲಿರುವ 5 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹಲವೆಡೆ ಪ್ರತಿನಿಧಿಗಳ ನೋಂದಣಿ ಆರಂಭವಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ಸಿದ್ಧತೆ ನಡೆಸಿವೆ.

hands_raised

ಸಾಂಗತ್ಯ  ಈ ಬಾರಿ ಚಿತ್ರೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕೆಂದಿದೆ. ಅದೆಂದರೆ, ಸಿನಿಮಾಸಕ್ತರನ್ನು ಪಾಲ್ಗೊಳ್ಳುವುದು. ಈ ಹಿನ್ನೆಲೆಯಲ್ಲಿ ಸಿನಿಮಾಸಕ್ತರಿಗೆ ಬರೆಯಲು ಮುಕ್ತ  ಆಹ್ವಾನ ನೀಡಲಾಗುತ್ತಿದೆ.

ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವವರು, ತಮ್ಮ ಅನಿಸಿಕೆಗಳು, ಆ ದಿನ  ಇಷ್ಟವಾದ ಸಿನಿಮಾ, ವಿವಿಧ ಸಿನಿಮಾ ತಜ್ಞರು ನೀಡುವ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ಸ್ವರೂಪವಾದ ಲೇಖನಗಳು, ಚಿತ್ರೋತ್ಸವಗಳಲ್ಲಿನ ಪಟ್ಟಿಗಳಲ್ಲಿ ನಿಮ್ಮ ಅತ್ಯುತ್ತಮ  ಆಯ್ಕೆಯಿದ್ದರೆ ಅವುಗಳ ಬಗ್ಗೆ ಲೇಖನ- ಹೀಗೆ ಹಲವು ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ. ಉತ್ಸವಕ್ಕೆ ಮುನ್ನವೂ ತಮ್ಮ ಸಲಹೆ, ಅಭಿಪ್ರಾಯ, ಚಿತ್ರೋತ್ಸವವನ್ನು ಸವಿಯುವ ರೀತಿಯ ಸಲಹೆಯಿದ್ದರೆ ಕಳಿಸಬಹುದು.

ಈ ಮಧ್ಯೆ, ಸಾಂಗತ್ಯವೂ ಕೆಲವು ವಿಶೇಷ ಲೇಖನಗಳನ್ನು ಪ್ರಕಟಿಸಲು ಸಿದ್ಧತೆ ನಡೆಸುತ್ತಿದೆ. ಸಿನಿಮಾಸಕ್ತರು ತಮ್ಮ ಲೇಖನಗಳನ್ನು ನಮ್ಮ saangatya@gmail.com ಗೆ ಕಳಿಸಿ.