ಡಿಸೆಂಬರ್ 20 ರಿಂದ 27 ರವರೆಗೆ ಬೆಂಗಳೂರಿನಲ್ಲಿ ನಡೆಯುವ ಐದನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ಸಂದ ನೆನಪಿನಲ್ಲಿ 12 ಚಿತ್ರಗಳು ಪ್ರದರ್ಶಿತವಾಗಲಿವೆ.

ಈ ಪೈಕಿ ಕನ್ನಡ 3, ಹಿಂದಿ 2, ಮರಾಠಿ, ಬಂಗಾಳಿ, ತೆಲುಗು, ತಮಿಳು ಹಾಗೂ ಮಲಯಾಳದ ತಲಾ ಒಂದು ಚಿತ್ರಗಳಿವೆ. ಹಿಂದಿ 2 ರ ಪೈಕಿ ಒಂದು ಕನ್ನಡದ ನಿರ್ದೇಶಕರು ನಿರ್ದೇಶಿಸಿದ್ದು. ಮೂಕಿ ಚಿತ್ರ ಹಾಗೂ ಸಾಕ್ಷ್ಯಚಿತ್ರವೂ ಈ ವಿಭಾಗದಲ್ಲಿ ಸೇರಿದೆ.

boothayyana maga ayyu

ಕನ್ನಡದ ಅತ್ಯಂತ ಒಳ್ಳೆಯ ಚಿತ್ರಗಳಲ್ಲಿ ಒಂದಾದ ಸಿದ್ದಲಿಂಗಯ್ಯ ನಿರ್ದೇಶನದ ಬೂತಯ್ಯನ ಮಗ ಅಯ್ಯು, ಆರ್. ಲಕ್ಷ್ಮೀನಾರಾಯಣರ “ನಾಂದಿ” ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ “ಅಮೆರಿಕಾ ಅಮೆರಿಕಾ” ಪ್ರದರ್ಶನಗೊಳ್ಳಲಿರುವ ಕನ್ನಡದ ಚಿತ್ರಗಳು. ಉಳಿದಂತೆ ಎಂ.ಎಸ್. ಸತ್ಯು ಅವರ “ಗರಂ ಹವಾ” ಹಿಂದಿ ಭಾಷೆಯಡಿ ಪ್ರದರ್ಶನಗೊಳ್ಳಲಿದೆ. ಸೆಲ್ಯುಲಾಯ್ಡ್ ಮ್ಯಾನ್ ಸಾಕ್ಷ್ಯಚಿತ್ರ ರಾಷ್ಟ್ರೀಯ ಸಿನಿಮಾ ಪ್ರಾಚ್ಯಾಗಾರವನ್ನು ಸಂಸ್ಥಾಪಿಸಿದ ಪಿ.ಕೆ. ನಾಯರ್ ಅವರನ್ನು ಕುರಿತಾದದ್ದು. ಇದರಲ್ಲಿ ಹೆಗ್ಗೋಡಿನ ದೃಶ್ಯಗಳೂ ಇವೆ.

ವಿವರ ಇಂತಿದೆ :

1. ಶಿರಾಜ್ (ಫ್ರಾನ್ಜ್ ಆಸ್ಟನ್/ಮೂಕಿ/ 1929)

2. ಅಚೂತ್ ಕನ್ಯ (ಫ್ರಾನ್ಜ್ ಆಸ್ಟನ್/ಹಿಂದಿ/1936)

3. ದೇವದಾಸ್ (ವೇದಾಂತಂ ರಾಘವಯ್ಯ/ತೆಲುಗು/1953)

4. ಚೆಮ್ಮೀನ್ (ರಾಮು ಕಾರ‍್ಯಾಟ್/ಮಲಯಾಳ/1966)

5. ಗರಂ ಹವಾ (ಎಂ.ಎಸ್.ಸತ್ಯು/ಹಿಂದಿ/1973)

6. ಉಂಬರ್ಥಾ (ಜಬ್ಬಾರ್ ಪಟೇಲ್/ ಮರಾಠಿ/1981)

7. ನಾಯಕನ್ (ಮಣೀರತ್ನಂ/ತಮಿಳು/ 1987)

8. ಲಾಪ್‌ಟಾಪ್ (ಕೌಶಿಕ್ ಗಂಗೂಲಿ/ಬಂಗಾಲಿ/2011)

9. ಸೆಲ್ಯುಲಾಯ್ಡ್ ಮ್ಯಾನ್ (ಸಾಕ್ಷ್ಯಚಿತ್ರ/ಹಿಂದಿ/ಇಂಗ್ಲಿಷ್/ಕನ್ನಡ/2012)

10. ನಾಂದಿ (ಎನ್. ಲಕ್ಷ್ಮೀನಾರಾಯಣ್/ಕನ್ನಡ/1964)

11. ಬೂತಯ್ಯನ ಮಗ ಅಯ್ಯು (ಸಿದ್ಧಲಿಂಗಯ್ಯ/ಕನ್ನಡ/1974)

 12. ಅಮೆರಿಕ ಅಮೆರಿಕ (ನಾಗತಿಹಳ್ಳಿ ಚಂದ್ರಶೇಖರ್/ಕನ್ನಡ/ 1995)

ಕನ್ನಡ ಚಿತ್ರಗಳ ಸ್ಪರ್ಧೆಯಡಿ ಮೂರು ಪ್ರಾದೇಶಿಕ ಚಿತ್ರಗಳನ್ನೂ ಆಯ್ಕೆ ಮಾಡಲಾಗಿದೆ. ಕೊಂಕಣಿ, ಕೊಡವ ಮತ್ತು ತುಳು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

1. ಉಜ್ವಾಡು (ಕಾಸರಗೋಡು ಚಿನ್ನಾ/ಕೊಂಕಣಿ/೨೦೧೧)
2. ನಾ ಪುಟ್ಟಿನ ಮಣ್ಣ್ (ಶಿವಧ್ವಜ್/ಕೊಡವ/೨೦೧೦)
3. ಬದಿ (ರಿಚರ್ಡ್ ಕ್ಯಾಸ್ಟಲಿನೊ/ತುಳು/೨೦೦೭)

Advertisements