ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಸರಣಿಯಲ್ಲಿ 37 ನೇ ಕಾರ್ಯಕ್ರಮ ಡಿ. 8 ರಂದು ಸಂಜೆ 5 ಕ್ಕೆ ಬಾದಾಮಿ ಹೌಸ್ ನಲ್ಲಿ ನಡೆಯಲಿದೆ.

K.V

ಈ ಬಾರಿ ಅತಿಥಿಯಾಗಿರುವವರು ಚಿತ್ರೋದ್ಯಮಿ ಕೆ. ವಿ. ಗುಪ್ತ. ಕನ್ನಡ ಚಿತ್ರರಂಗದಲ್ಲಿ ಚಿತ್ರ        ನಿರ್ಮಾಣ, ವಿತರಣೆ ಹಾಗೂ ಪ್ರದರ್ಶನ ಕ್ಷೇತ್ರದಲ್ಲಿ ದುಡಿದವರು ಗುಪ್ತ ಅವರು. ಟೆಕ್ಸ್ ಟೈಲ್ ವಿಷಯದಲ್ಲಿ ಪದವಿ ಪಡೆದು, ಚಿತ್ರ ವಿತರಣಾ ಸಂಸ್ಥೆಗಳೊಂದಿಗೆ ಸಂಪರ್ಕ-ಸಂಬಂಧವಿಟ್ಟುಕೊಂಡು ಈ ಕ್ಷೇತ್ರಕ್ಕೆ ಬಂದವರು.

ಸತ್ಯ ಹರಿಶ್ಚಂದ್ರ, ನನ್ನ ತಮ್ಮ ದಂಥ ಚಿತ್ರಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ಅವರು, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

ಅವರು “ಬೆಳ್ಳಿಹೆಜ್ಜೆ” ಸರಣಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವರು.