ಡಿಸೆಂಬರ್ 20 ರಿಂದ 27 ರವರೆಗೆ ನಡೆಯುವ ಬೆಂಗಳೂರು ಐದನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುವವರಿಗೆ ನೋಂದಣಿ ಆರಂಭವಾಗಿದೆ. ಡಿಸೆಂಬರ್ ಒಂದರಿಂದಲೇ ಪ್ರಾರಂಭವಾಗಿದ್ದು, ಆಸಕ್ತರು ಈ ಕೆಳಕಂಡಲ್ಲಿ ಹೆಸರು ನೋಂದಾಯಿಸಬಹುದು.

ಪ್ರತಿನಿಧಿ ಶುಲ್ಕ

ಪ್ರತಿನಿಧಿ ಶುಲ್ಕ (ಸಾರ್ವಜನಿಕರಿಗೆ) 500 ರೂ. ಹಾಗೂ ವಿದ್ಯಾರ್ಥಿಗಳು, ಫಿಲ್ಮ್ ಸೊಸೈಟಿ ಸದಸ್ಯರು ಮತ್ತು ಫಿಲ್ಮ್ ಇಂಡಸ್ಟ್ರಿಯವರಿಗೆ 100 ರೂ.

ಎಲ್ಲೆಲ್ಲಿ ನೋಂದಣಿ

ಸುಚಿತ್ರಾ ಫಿಲ್ಮ್ ಸೊಸೈಟಿ, ನಂ. 36, 9 ನೇ ಮುಖ್ಯರಸ್ತೆ, ಬನಶಂಕರಿ 2 ನೇ ಹಂತ, ಬೆಂಗಳೂರು, ದೂ : 26711785.

ಬಾದಾಮಿ ಹೌಸ್, ಎನ್. ಆರ್. ಚೌಕ, (ಮಹಾನಗರ ಪಾಲಿಕೆ ಕಚೇರಿ ಎದುರು), ಜೆ.ಸಿ. ರಸ್ತೆ, ಬೆಂಗಳೂರು-2, ದೂ : 22133410

ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್, ನಂ. 28, ಕ್ರೆಸೆಂಟ್ ರಸ್ತೆ, ಶಿವಾನಂದ ಸರ್ಕಲ್ ಬಳಿ, ಶೇಷಾದ್ರಿಪುರಂ, ಬೆಂಗಳೂರು-1, ದೂ : 22265370

ವಾರ್ತಾ ಇಲಾಖೆ, ನಂ. 17, ಇನ್ ಫ್ಯಾಂಟ್ರಿ ರಸ್ತೆ, ದಿ ಹಿಂದೂ ಪತ್ರಿಕೆ ಆಫೀಸ್ ಬಳಿ, ಶಿವಾಜಿ ನಗರ, ಬೆಂಗಳೂರು-1, ದೂ : 22865997, 22028012.

ಹೆಚ್ಚಿನ ವಿವರಗಳಿಗೆ ದೂ : 080 22133410 / 22133441, Email: contact@biffes.in

Website: www.biffes.com

Advertisements