ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ, ಭಾರತದ ಸಮಾರೋಪ ಸಮಾರಂಭ ಸಂಜೆ 4 ಕ್ಕೆ ಕಲಾ ಅಕಾಡೆಮಿ ಬಳಿಯ ಫುಟ್ ಬಾಲ್ ಮೈದಾನದಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಸ್ಪೆಷಲ್ ಜ್ಯೂರಿ ಬಹುಮಾನ, ಅತ್ಯುತ್ತಮ ನಟಿ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಿತ್ರದ ಆಯ್ಕೆಯನ್ನು ಪ್ರಕಟಿಸುವರು.

ನಂತರ ಭಾರತೀಯ ಸಿನಿಮಾ-100 ರ ನೆನಪಿನ ಶತಮಾನೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗುವುದು. ಕಾರ್ಯಕ್ರಮದಲ್ಲಿ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪಾಲ್ಗೊಳ್ಳುವರು. ಮುಖ್ಯ ಅತಿಥಿಯಾಗಿ ತೆಲುಗಿನ ನಟ ನಂದಮೂರಿ ಬಾಲಕೃಷ್ಣ, ಪೌಲ್ ಕಾಕ್ಸ್ ಭಾಗವಹಿಸುವರು.

ಚಿತ್ರೋತ್ಸವದ ಸಮಾರೋಪ ಚಿತ್ರವಾಗಿ ಮೀರಾ ನಾಯರ್ ನಿರ್ದೇಶನದ “ದಿ ರೆಲುಕ್ಟಂಟ್ ಫಂಡಮೆಂಟಲಿಸ್ಟ್” ಪ್ರದರ್ಶನವಾಗಲಿದೆ.

ನಾಮ ನಿರ್ದೇಶನ 

ಶತಮಾನೋತ್ಸವ ಪ್ರಶಸ್ತಿಗೆ ಒಟ್ಟು ಒಂಬತ್ತು ಚಿತ್ರಗಳನ್ನು ನಾಮ ನಿರ್ದೇಶನ ಮಾಡಲಾಗಿದೆ. ಲೈಫ್ ಆಫ್ ಪೈ (ಆಂಗ್ ಲೀ), ಚಿತ್ರಾಂಗದ (ಋತುಪರ್ಣ ಘೋಷ್), ದಿ ರೆಲುಕ್ಟಂಟ್ ಫಂಡಮೆಂಟಲಿಸ್ಸ್ (ಮೀರಾ ನಾಯರ್), ರೋಸ್ (wojciech smarzowski/poland), ಅನ್ಹೆ ಘೋರೆ ದಾ ದಾನ್ (ಗುರ್ವಿಂದರ್ ಸಿಂಗ್/ಪಂಚಾಬಿ), ಬಂಧೋನ್ (ಜಾನು ಬರುವಾ/ಅಸ್ಸಾಮಿ), ಲಿಲೆಟ್ ನೆವರ್ ಹ್ಯಾಪನ್ಡ್ (Jacco groen/netherlands), ನೂರ್ (Guillaume Giovanetti, cagla Zencirci/france-tukey-pakistan), ವೈಟ್ ಟೈಗರ್(Karen shakhnazarov/russia) ನಾಮ ನಿರ್ದೇಶನಗೊಂಡ ಚಿತ್ರಗಳು.