ಗೋವಾದ ಪಣಜಿಯಲ್ಲಿ ನ. 20 ರಿಂದ ಪ್ರಾರಂಭವಾದ 43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ, ಭಾರತ ಶುಕ್ರವಾರ (ನ.30) ಸಂಪನ್ನಗೊಂಡಿತು.

anhey ghoreka da daan ಚಿತ್ರದ ಒಂದು ದೃಶ್ಯ
anhey ghoreka da daan ಚಿತ್ರದ ಒಂದು ದೃಶ್ಯ
ವಿಥ್ ಯು, ವಿಥೌಟ್ ಯು ಚಿತ್ರದ ಒಂದು ದೃಶ್ಯ.
ವಿಥ್ ಯು, ವಿಥೌಟ್ ಯು ಚಿತ್ರದ ಒಂದು ದೃಶ್ಯ.

ಸಾವಿರಾರು ಮಂದಿ ಸೇರಿದ್ದ ವೇದಿಕೆಯಲ್ಲಿ ಬಹಳ ಸಂಭ್ರಮವೇನೂ ಇರಲಿಲ್ಲ. ಇದೇ ಸಂದರ್ಭದಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.

ಅತ್ಯುತ್ತಮ ನಟಿ – ಅಂಜಲಿ ಪಾಟೀಲ್ (ವಿಥ್ ಯು, ವಿಥೌಟ್ ಯು-ಶ್ರೀಲಂಕಾ), ಅತ್ಯುತ್ತಮ ನಟ –  Marcin Dorocinski(ರೋಸ್-ಪೋಲ್ಯಾಂಡ್), ಅತ್ಯುತ್ತಮ ನಿರ್ದೇಶನ : ದಿ ವೈಟ್ (ನಿರ್ದೇಶಕ-Jeon Kyu-hwan, ಕೊರಿಯಾ), ಅತ್ಯುತ್ತಮ ಚಿತ್ರ : ಅನ್ಹೆ ಘೋರೆ ದಾ ದಾನ್ (ನಿ : ಗುರುವಿಂದರ್ ಸಿಂಗ್-ಪಂಚಾಬಿ), ಸ್ಪೆಷಲ್ ಜ್ಯೂರಿ ಅವಾರ್ಡ್ – ಉನಾ ನೊಚೆ (ನಿ : ಲೂಸಿ ಮೆಲಾಯ್), ಶತಮಾನೋತ್ಸವ ಪ್ರಶಸ್ತಿ- ರೆಲುಕ್ಟಂಟ್ ಫಂಡಮೆಂಟಲಿಸ್ಟ್ ( ನಿರ್ದೇಶನ : ಮೀರಾ ನಾಯರ್).

ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಸೌಲಭ್ಯ ಕಲ್ಪಿಸಲಾಗುವುದು. ಸಿನಿಮಾ ಶಾಲೆ ಮತ್ತು ಸಿನಿಮಾ ಸ್ಟುಡಿಯೋಗಳನ್ನು ಆರಂಭಿಸಲಾಗುವುದು. ಒಟ್ಟೂ ಚಿತ್ರಾಸಕ್ತರ ಮೆಚ್ಚುಗೆಯ ತಾಣವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

“ಅತ್ಯುತ್ತಮ ಚಿತ್ರಗಳನ್ನು ನೀಡುವ ಬಗ್ಗೆ ನಾನು ಗ್ಯಾರಂಟಿ ಕೊಡಲಾರೆ. ಅವು ಚಿತ್ರ ನಿರ್ದೇಶಕರ ಕೆಲಸ. ಆದರೆ, ನಾವು ಅತ್ಯುತ್ತಮ ವಾತಾವರಣವನ್ನು ಕಲ್ಪಿಸುತ್ತೇವಷ್ಟೇ’ ಎಂದು ಸ್ಪಷ್ಟಪಡಿಸಿದರು.

ಮುಖ್ಯ ಅತಿಥಿಯಾಗಿ ತೆಲುಗಿನ ನಟ ನಂದಮೂರಿ ಬಾಲಕೃಷ್ಣ, ನಿರ್ದೇಶಕ ಪೌಲ್ ಕಾಕ್ಸ್, ಗೋವಾ ರಾಜ್ಯಪಾಲ ವಾಂಚೂ ಮತ್ತಿತರರು ಭಾಗವಹಿಸಿದ್ದರು. ಸಾಂಸ್ಕೃತಿಕ ನೃತ್ಯ ಪ್ರದರ್ಶನವಿತ್ತು.

ಕಾರ್ಯಕ್ರಮದ ನಂತರ ಮೀರಾ ನಾಯರ್ ನಿರ್ದೇಶನದ “ರೆಲುಕ್ಟಂಟ್ ಫಂಡಮೆಂಟಲಿಸ್ಟ್” ಚಿತ್ರವನ್ನು ಪ್ರದರ್ಶಿಸಲಾಯಿತು.

ಸಂಘಟಕರ “ಬಡಿ ಮೆಹರ್ ಬಾನಿ” !

ಸಮಾರೋಪ ಚಿತ್ರ ವೀಕ್ಷಿಸಲು ಸಾಕಷ್ಟು ಮಂದಿ ಆಸಕ್ತರು ಮಂದಿದ್ದರು. ಆದರೆ, ಅವರಿಗೆ ನೀಡಲಾಗಿದ್ದ ಪಾಸಿದ್ದರೂ, ಗೇಟ್ ನಲ್ಲಿ “ಇದಕ್ಕೆ ಸ್ಕ್ರೀನಿಂಗ್ ಗೆ ಪ್ರವೇಶವಿಲ್ಲ’ ಎಂದು ವಾಪಸು ಕಳುಹಿಸತೊಡಗಿದರು. ಅದನ್ನು ಓದಿ ಸ್ಪಷ್ಟಪಡಿಸಿದರೂ, ಒಪ್ಪಲಿಲ್ಲ. ಹಾಗಾಗಿ ನೂರಾರು ಮಂದಿ ಹತಾಶರಾಗಿ ವಾಪಸು ತೆರಳಿದರೆ, ಇನ್ನು ಕೆಲವರು ಸಂಘಟಕರ “ಬಡಿ ಮೆಹರ್ ಬಾನಿ” (ಕರುಣೆಗೆ) ಗೆ ಕಾಯುತ್ತಿದ್ದರು.

ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗೆ ಬೆಳ್ಳಿ ನವಿಲು ಮತ್ತು 10 ಲಕ್ಷ ರೂ. ನಗದು, ಅತ್ಯುತ್ತಮ ನಿರ್ದೇಶನಕ್ಕೆ ಬೆಳ್ಳಿ ನವಿಲು ಮತ್ತು 15 ಲಕ್ಷ ರೂ, ಅತ್ಯುತ್ತಮ ಚಿತ್ರಕ್ಕೆ ಸುವರ್ಣನವಿಲು ಮತ್ತು 20 ಲಕ್ಷ ರೂ. ನಗದು, ಸ್ಪೆಷಲ್ ಜ್ಯೂರಿ ಅವಾರ್ಡ್ ಗೆ ಬೆಳ್ಳಿ ನವಿಲು ಮತ್ತು 15 ಲಕ್ಷ ಪ್ರಶಸ್ತಿ, ಶತಮಾನೋತ್ಸವ ಪ್ರಶಸ್ತಿಗೆ 20 ಲಕ್ಷ ರೂ. ಮತ್ತು ಸ್ಮರಣಿಕೆ ನೀಡಲಾಯಿತು.

Advertisements