ಸಾಂಗತ್ಯ ಎಂಟನೇ ಚಿತ್ರ ಶಿಬಿರವನ್ನು ಮುಂದೂಡಲಾಗಿದೆ. ರದ್ದು ಪಡಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೆ. 15 , 16(ಶನಿವಾರದಿಂದ) ಪ್ರಾರಂಭವಾಗಬೇಕಿದ್ದ ಶಿಬಿರವನ್ನು ಮುಂದೂಡಲಾಗಿದೆ.

ಕುಂದಾಪುರ, ಪುತ್ತೂರು, ಮಂಗಳೂರು ಪ್ರದೇಶದಿಂದ ಕುಪ್ಪಳಿಗೆ ಬರಲು ಖಾಸಗಿ ಬಸ್ ಗಳು ಇದ್ದರೂ, ಗಂಗಾವತಿ, ಬಾಗಲಕೋಟೆ ಮತ್ತಿತರ ಕಡೆಯಿಂದ ಬರಲು ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಹಾಗೆಯೇ ಬೆಂಗಳೂರಿನಿಂದ ನೇರವಾಗಿ ಬರುವವರಿಗೂ ಬಸ್ ಗಳ ಕೊರತೆ ಸಮಸ್ಯೆಯಿದೆ.

ಮುಷ್ಕರ ಇಂದೂ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಒಂದುವೇಳೆ ಸರಕಾರ ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿದರೂ ಮಧ್ಯಾಹ್ನದ ನಂತರ. ಅವೆಲ್ಲವೂ ಮುಗಿದು ಫಲಿತಾಂಶ ಹೊರಬರುವುದು ಇಂಧು (ಶುಕ್ರವಾರ ಸೆ. 14) ರ ಸಂಜೆಯೇ. ನಂತರ ಹೊರಡಲೂ ಗಡಿಬಿಡಿಯಾಗುತ್ತದೆ. ಇವೆಲ್ಲ ಕಾರಣಗಳಿಂದ ಚಿತ್ರಶಿಬಿರವನ್ನು ಮುಂದೂಡಲಾಗಿದೆ.

Advertisements