ಗೋವಾದಲ್ಲಿ ನವೆಂಬರ್ 20 ರಿಂದ 30 ರವರೆಗೆ ನಡೆಯುವ 43 ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಸಿನಿಮಾಗಳನ್ನು ಆಹ್ವಾನಿಸಿದೆ.

ಆಗಸ್ಟ್ 31, ತಮ್ಮ ಪ್ರವೇಶಗಳನ್ನು ಸಲ್ಲಿಸಲು ಕೊನೆ ದಿನಾಂಕ. ಒಟ್ಟೂ ಉತ್ಸವವನ್ನು 9 ವಿಭಾಗಗಳಾಗಿ ವರ್ಗೀಕರಿಸಿದೆ. ಅತ್ಯುತ್ತಮ ಚಿತ್ರಕ್ಕಾಗಿ ಇರುವ ವಿಭಾಗಕ್ಕೆ ವಿಶ್ವದ ಯಾವುದೇ ಭಾಷೆಯ ನಿರ್ದೇಶಕರು ತಮ್ಮ ಚಿತ್ರಗಳನ್ನು ಕಳಿಸಬಹುದು. ಸ್ಪರ್ಧೆಯಿಂದ ಹೊರತಾದ ವಿಭಾಗ “ವಿಶ್ವದ ಸಿನಿಮಾ’. ಉಳಿದಂತೆ ಫಾರೆನ್ ರೆಟ್ರಾಸ್ಪೆಕ್ಟಿವ್, ಸ್ಮರಣೆ, ಸ್ಪೆಷಲ್ ಫೋಕಸ್ ಮತ್ತಿತರ, ಭಾರತೀಯ ಪನೋರಮಾ, ಫಿಲ್ಮ್ ಬಜಾರ್, ತಾಂತ್ರಿಕ ಕಾರ್‍ಯಾಗಾರಗಳು, ಇಂಡಿಯನ್ ಪ್ರೀಮಿಯರ್ಸ್ ಹಾಗೂ ಶಾರ್ಟ್ ಫಿಲ್ಮ್ಸ್ ಕಾರ್ನರ್ ಎಂದು ವಿಭಾಗೀಕರಿಸಲಾಗಿದೆ.

ಅತ್ಯುತ್ತಮ ಚಿತ್ರಕ್ಕೆ ೪೦ ಲಕ್ಷ ರೂ ಮತ್ತು ಪ್ರಶಸ್ತಿಯಿದ್ದು, ನಿರ್ದೇಶಕ ಮತ್ತು ನಿರ್ಮಾಪಕರಿಗೆ ಸಮವಾಗಿ ಹಂಚಲಾಗುತ್ತದೆ. ವಿವಿಧ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪಾಲ್ಗೊಂಡ, ಪ್ರಶಸ್ತಿ ಗಳಿಸಿದ ಚಿತ್ರಗಳನ್ನು “ವಿಶ್ವದ ಸಿನಿಮಾ’ ವಿಭಾಗಕ್ಕೆ ಕಳಿಸಬಹುದು. ಸ್ಪರ್ಧೆಗೆ ಕಳಿಸಲಾಗುವ ಫೀಚರ್ ಫಿಲ್ಮ್ ಗಳು, ಜನವರಿ 2011೧ ರಿಂದ ಆಗಸ್ಟ್ 2012 ರೊಳಗೆ ನಿರ್ಮಾಣವಾಗಿರಬೇಕು. ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಕ್ಲಿಕ್ ಮಾಡಿ.

Advertisements