ಸಂವಾದ. ಕಾಂ ನವರು ಭಾನುವಾರ (ಏ.15) ಸಂಜೆ 4 ಕ್ಕೆ ಇರಾನಿನ ಪರ್ಶಿಯನ್ ಭಾಷೆಯ ಚಲನಚಿತ್ರ “ಬರನ್” ನ್ನು ವೀಕ್ಷಿಸಿ ಹರಟಲು ಕರೆದಿದ್ದಾರೆ.

ಸ್ಥಳ : #842, 2nd Floor, 7th Cross, 9th Main,ಶ್ರೀನಗರ ಬಸ್ ಸ್ಟ್ಯಾಂಡ್ ಬಳಿ, (opposite to New Poornima Studio), ಶ್ರೀನಗರ, ಮಾಹಿತಿಗೆ 99004 39930 / 97317 55966. ಪ್ರವೇಶ ಶುಲ್ಕ: ನಿಮಗೆ ಎಷ್ಟು ಸಾಧ್ಯವೋ ಅಷ್ಟನ್ನುದೇಣಿಗೆ ಬುಟ್ಟಿಗೆ ಹಾಕಬಹುದು.

ಬರನ್ ನಿರ್ದೇಶಿಸಿರುವುದು ಮಜಿದ್ ಮಜಿದಿ.

ತೀರಾ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನವನ್ನ ಅಮೇರಿಕಾ ಸೇರಿದಂತೆ
ಜಗತ್ತೇ ಎದಿರು ನೋಡುತ್ತಿತ್ತು. ಹಠಮಾರಿ ಇರಾನ್ ಯಾರ ಮಾತನ್ನೂ ಕೇಳದೇ ಪರಮಾಣು
ಯೋಜನೆಗಳಲ್ಲಿ ತೊಡಗಿದೆ. ಇರಾನ್ ನ ಜೊತೆ ಯುದ್ದ ಹೂಡಲು ತುರಿಯಾವಸ್ತೆಯಲ್ಲಿರುವ
ಅಮೇರಿಕ ಅಣ್ವಸ್ತ್ರ ತಯಾರಿಕೆ ನಿಲ್ಲಿಸದೇ ಹೋದಲ್ಲಿ ಯುದ್ದ ಹೂಡುವುದಾಗಿ ಘೋಷಿಸಿದೆ.
ಬ್ರಿಕ್ಸ್ ದೇಶಗಳ ಸಹಕಾರವಿಲ್ಲದೇ ಇದು ನಡೆಯುವಂತಿಲ್ಲ. ಬ್ರಿಕ್ಸ್ ದೇಶಗಳು ಮಾತುಕತೆಯ
ಮುಖಾಂತರವೇ ಈ ಸಮಸ್ಯೆಯನ್ನ ಪರಿಹರಿಸಿಕೊಳ್ಳಬೇಕೆಂದು ಸೂಚಿಸಿ ಅಡ್ಡಗೋಡೆಯ ಮೇಲೆ
ದೀಪವಿಟ್ಟು ಸುಮ್ಮನಾಗಿದೆ.

ಇಡೀ ವಿಶ್ವಕ್ಕೆ ಸಡ್ಡು ಹೊಡೆದು ಇರಾನ್ ನ ಅಧ್ಯಕ್ಷ ನಿಂತಿದ್ದಾನೆ. ಅಲ್ಲಿನ
ನಿರ್ದೇಶಕರು ಜಗತ್ತೇ ಬೆರಗಾಗುವಂತೆ ಚಿತ್ರ ನಿರ್ಮಿಸುತ್ತಿದ್ದಾರೆ. ರಾಜಕೀಯ ಮತ್ತು
ವ್ಯವಹಾರ ನಿಪುಣರಿಗೆ ಅರ್ಥವಾಗದ ಮನುಷ್ಯನ ಸಂವೇದನೆಗಳು ಇರಾನ್ ನ ಅದ್ಭುತ
ಸಿನೆಮಾಗಳಲ್ಲಿ ಪ್ರಕಟಗೊಳ್ಳುತ್ತಿವೆ.

ಅಮೇರಿಕಾ-ಇರಾನ್ ನ ಗಲಾಟೆಯ ಪರಿವೆಯೇ ಇಲ್ಲದಂತೆ , ಅಮೇರಿಕಾದ ಪ್ರತಿಷ್ಟಿತ ಅಸ್ಕಾರ್
ಅನ್ನು ಇರಾನಿ ಸಿನೆಮಾ ಗೆಲ್ಲುತ್ತದೆ. ಜಗತ್ತೇ ಖುಷಿಯಿಂದ ಆ ಸಿನೆಮಾವನ್ನ
ಆವಾಹಿಸಿಕೊಳ್ಳುತ್ತೆ. ದೇಶವನ್ನ ಕೇವಲ ಹೆಸರು, ಗಡಿ, ಜಾತಿ, ವ್ಯವಹಾರದ
ಲೆಕ್ಕಾಚಾರದಲ್ಲಿ ಅಳೆಯುವ ರಾಜಕೀಯ ನಾಯಕರಿಗೆ , ಅದೇ ದೇಶದ ಸಾಂಸ್ಕೃತಿಕ
ಪ್ರತಿನಿಧಿಗಳು ಕೊಟ್ಟಿರುವ ಪ್ರತಿಕ್ರಿಯೆ ನಮ್ಮಂತ ದೇಶಗಳಿಗೆ ಮಾದರಿಯಾಗಬೇಕು. ಇರಾನ್
ನ ಅದ್ಯಕ್ಷ ಮಹಮದ್ ಅಹ್ಮದೀನ್ ಗಿಂತ ಅಲ್ಲಿನ ಅಬ್ಬಾಸ್ ಕಿರೋತ್ಸಾಮಿ ಮತ್ತು ಮಜಿದ್
ಮಜಿದಿ ಯಂತಹ ನಿರ್ದೇಶಕರು ಜಗತ್ತಿನ ಪ್ರೀತಿ ಗೆದ್ದವರು ಮತ್ತು ಇರಾನಿನ ಸಾಮಾನ್ಯ
ಪ್ರಜೆಯ ಕನಸುಗಳನ್ನ ವಿಶ್ವಕ್ಕೆ ಹಂಚಿದವರು.

ಈ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯಲ್ಲಿ ಕನ್ನಡದ ಸಣ್ಣ ಕತೆಗಳನ್ನ ನೆನಪಿಸುವ
ಪರ್ಷಿಯನ್ ಚಿತ್ರಗಳು ಹೆಚ್ಚು ಜನಪ್ರಿಯ. ಸಿನೆಮಾವನ್ನ ಸಂಸ್ಕೃತಿಯ ಭಾಗವಾಗಿ
ನೋಡಬೇಕಾದ ತುರ್ತಿನಲ್ಲಿ ನಾವಿದ್ದೇವೆ. ಅ ನಿಟ್ಟಿನಲ್ಲಿ ಜಗತ್ತಿನ ಬಹು ಮುಖ್ಯ
ಚಿತ್ರಗಳೊಡನೆ ಅನು ಸಂಧಾನ ನಡೆಸುತ್ತ , ಆ ಚಿತ್ರಗಳ ಭಾಷೆಯನ್ನ ಗ್ರಹಿಸುತ್ತ ,ನಮ್ಮ
ಸುತ್ತಲನ್ನು ಅರ್ಥ ಮಾಡಿಕೊಳ್ಳುವ ಹೊಸ ಅನುಭವಕ್ಕೆ ಎದೆಯೊಡ್ಡಿ ಸಂವಾದ ನಿಮ್ಮ
ಮುಂದಿದೆ.

Advertisements