ರಾಜ್ಯ ಸರಕಾರದ ಚಲನಚಿತ್ರ ಪ್ರಶಸ್ತಿ ಕುರಿತ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರತಿಬಾರಿಯೂ ಪ್ರಶಸ್ತಿ ಪ್ರಕಟವಾದಾಗ ಒಂದಿಷ್ಟು ದಿನ ಚರ್ಚೆಗೀಡಾಗಿ, ನಂತರ ತಣ್ಣಗಾಗುವಂಥದ್ದು ಇದ್ದೇ ಇದೆ. ಆದರೆ ಈ ಬಾರಿ ಎಲ್ಲರಿಗೂ ಸಿಕ್ಕಿದೆ, ಯಾರಿಗೂ ಸಿಕ್ಕಿಲ್ಲ ಎನ್ನುವಂತಾಗಿದೆ ಪ್ರಶಸ್ತಿ.

ಆಯ್ಕೆ ಸಮಿತಿಯವರ ಧೋರಣೆ ಕುರಿತೇ ಸಾಕಷ್ಟು ಚರ್ಚೆ ಆರಂಭವಾಗಿದೆ. ಆಯ್ಕೆಗೆ ಕುಳಿತುಕೊಳ್ಳುವಾಗ ಮುಕ್ತವಾರಿ ಕುಳಿತುಕೊಳ್ಳಬೇಕೋ ಅಥವಾ ಕೆಲವು ಪೂರ್ವಗ್ರಹಗಳೊಂದಿಗೆ ಕುಳಿತುಕೊಳ್ಳಬೇಕೋ ಎಂಬುದು ಚರ್ಚೆಗೆ ಒಳಗಾಗಬೇಕಾದ ಸಂಗತಿ.

ಈ ಬಗ್ಗೆ ಚರ್ಚೆಯನ್ನು ಸಾಂಗತ್ಯ ಪ್ರಾರಂಭಿಸುತ್ತಿದೆ. ಈ ಬಗ್ಗೆ ತಾವು ತಮ್ಮ ಲೇಖನಗಳನ್ನು saangatya@gmail.com ಗೆ ಕಳಿಸಬಹುದು.