ಮಂಗಳೂರಿನ ಸಹಮತ ಫಿಲಂ ಸೊಸೈಟಿ ಎಂದಿನಂತೆ ಈ ಭಾನುವಾರ (ಮಾ. 25) ರಂದು ಸಿನಿಮಾ ಪ್ರದರ್ಶನ ಏರ್ಪಡಿಸಿದೆ.

‘ಕ್ಯಾಪ್ಟನ್ ಅಬು ರಹೀದ್” ಎಂಬ ಅರಬ್ಬೀ ಚಿತ್ರವನ್ನು ಪ್ರದರ್ಶಿಸುತ್ತಿದ್ದು, ಇದನ್ನು ನಿರ್ದೇಶಿಸಿದವರು ಅಮೀನ್ ಮಟಲ್ಪಾ. ಇದು ಇತ್ತೀಚಿನ 50 ವರ್ಷಗಳಲ್ಲಿ ಬಂದಿರುವ ಜೋರ್ಡಾನ್ ಭಾಷೆಯ ಮೊದಲ ಚಿತ್ರವೆಂದು ಪರಿಗಣಿಸಲಾಗುತ್ತಿದೆ. ಕಥೆಯೇ ವಿಚಿತ್ರವಾಗಿದ್ದು, ನಮ್ಮೊಳಗಿನ ಕನಸಿನ ಕುರಿತೇ ಹೇಳುತ್ತದೆ. ಕನಸನ್ನು ಬೆಳೆಸಿಕೊಳ್ಳುವ, ಅದರಲ್ಲೇ ತೃಪ್ತಿಪಟ್ಟುಕೊಳ್ಳುವ ವಿಚಿತ್ರವಾದ ಎಳೆಯುಳ್ಳದ್ದು.

ಚಿತ್ರ ಪ್ರದರ್ಶನ ಸಂಜೆ 6 ಕ್ಕೆ. ಸ್ಥಳ : ಸಹೋದಯ ಹಾಲ್, ಬಲ್ಮಠ. ಚಿತ್ರದ ನಂತರ ಎಂದಿನಂತೆ ಆ ಕುರಿತಾದ ಚರ್ಚೆ ಇರುತ್ತದೆ. ಪ್ರವೇಶ ಉಚಿತ.

Advertisements