ಸಾಂಗತ್ಯ ಆ. 20, 21 ರಂದು ಕುಪ್ಪಳಿಯಲ್ಲಿ ಆರನೇ ಚಿತ್ರ ಶಿಬಿರ ಏರ್ಪಡಿಸಲಾಗಿದೆ.

ಎರಡೂ ದಿನ ಬೆಳಗ್ಗೆಯಿಂದ ರಾತ್ರಿವರೆಗೆ ಸಿನಿಮಾ ವೀಕ್ಷಣೆ, ನಂತರ ಸಂವಾದವಿರುತ್ತದೆ. ಸಿನಿಮಾ ನಿರ್ದೇಶಕ ಬಿ.ಎಸ್. ಲಿಂಗದೇವರು ನಮ್ಮೊಡನೆ ಇರುವರು. ಎಂದಿನಂತೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರ ಇದ್ದೇ ಇದೆ.

ಕುಪ್ಪಳ್ಳಿಯ ಮಾರ್ಗ ಹೀಗಿದೆ :

ಬೆಂಗಳೂರಿನಿಂದ ಬರುವವರಿಗೆ ರಾತ್ರಿ 10.30 ಕ್ಕೆ ಕುಪ್ಪಳಿಗೆ ನೇರವಾದ ಬಸ್ ಇದೆ. ಉಳಿದಂತೆ ಮೈಸೂರಿನಿಂದ ಬರುವವರು ಹಾಸನ-ಚಿಕ್ಕಮಗಳೂರು-ಕೊಪ್ಪ ಮಾರ್ಗವಾಗಿ ಬಂದು, ಕೊಪ್ಪದಿಂದ ತೀರ್ಥಹಳ್ಳಿ ಬಸ್ ನ್ನು ಹತ್ತಿ ಗಡಿಕಲ್ಲು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಎರಡು ಫರ್ಲಾಂಗ್ ನಡೆದರೆ ಕಾರ್ಯಕ್ರಮ ನಡೆಯುವ ಸ್ಥಳ ಸಿಗುತ್ತದೆ.

ಉತ್ತರ ಕರ್ನಾಟಕದಿಂದ ಬರುವವರು ಶಿವಮೊಗ್ಗ ಬಂದು ನಂತರ ತೀರ್ಥಹಳ್ಳಿ ಬಸ್ ಹತ್ತಬೇಕು. ಅನಂತರ ತೀರ್ಥಹಳ್ಳಿಯಿಂದ ಕೊಪ್ಪ ಬಸ್ ಹಿಡಿದು ಗಡಿಕಲ್ಲು ಎಂಬಲ್ಲಿ ಇಳಿಯಬೇಕು. ಮಾಹಿತಿಗೆ 99804 57812, 94807 97113, 94805 82027.