ಸಾಂಗತ್ಯ (ರಿ) ಸಮಾನ ಮನಸ್ಕ ಸಿನೆಮಾ ಆಸಕ್ತರು ಹುಟ್ಟುಹಾಕಿದ ಸಂಸ್ಥೆ. ಚಿತ್ರಗಳ ಸಂಗ್ರಹ, ತ್ರೈಮಾಸಿಕ ಪತ್ರಿಕೆ, ಚಿತ್ರ ಶಿಬಿರ ಸಾಂಗತ್ಯದ ಮೂಲ ಚಟುವಟಿಕೆಗಳು.

ವರ್ಷಕ್ಕೆ ಎರಡು ಬಾರಿ ಚಿತ್ರ ಶಿಬಿರವನ್ನು ಆಯೋಜಿಸುತ್ತ ಬಂದಿರುವ ಸಾಂಗತ್ಯ, ಈಗ ಆರನೇ ಶಿಬಿರವನ್ನು ಆಯೋಜಿಸಿದೆ. ಎಂದಿನಂತೆ ಎರಡು ದಿನಗಳ ಶಿಬಿರದಲ್ಲಿ ಆಯ್ದ ಚಲನ ಚಿತ್ರಗಳು ಹಾಗೂ ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಲಾಗುವುದು.

ಅಗಸ್ಟ್ ತಿಂಗಳ 20 ಮತ್ತು 21ರಂದು ಕುಪ್ಪಳ್ಳಿಯ ‘ಕುವೆಂಪು ಜನ್ಮಶತಮಾನೋತ್ಸವ ಭವನ’ದಲ್ಲಿ ನಡೆಯುವ ಈ ಶಿಬಿರವನ್ನು ಆಹ್ವಾನಿತ ಚಿತ್ರ ನಿರ್ದೇಶಕರು, ಚಿತ್ರ ವಿಮರ್ಶಕರು ಹಾಗೂ ಸಾಂಗತ್ಯ ಬಳಗದ ಸದಸ್ಯರು ನಡೆಸಿಕೊಡಲಿದ್ದಾರೆ.

ಸಿನೆಮಾ ಆಸಕ್ತರು, ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮಿಂಚಂಚೆ ಕಳುಹಿಸಿ ಅಥವಾ ಕರೆಮಾಡಿ –

e mail: saangatya@gmail.com
Mobile: 9480797113/9480582027.