ಈಗಾಗಲೇ ಪ್ರಕಟಿಸಿರುವಂತೆ ಜ.22 ಮತ್ತು 23 ರಂದು ಸಾಂಗತ್ಯ ಐದನೇ ಚಿತ್ರ ಶಿಬಿರ ಕುಪ್ಪಳಿಯಲ್ಲಿ ನಡೆಯಲಿದೆ. ರಾಷ್ಟ್ರಕವಿ ಕುವೆಂಪು ಸ್ಮಾರಕ ಪ್ರತಿಷ್ಠಾನದ ಸಹಕಾರದಲ್ಲಿ ನಡೆಯುತ್ತಿರುವ ಶಿಬಿರಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ನೂರಾರು ಅರ್ಜಿಗಳು ಬಂದಿದ್ದು, ಆ ಪೈಕಿ ಸಾಕಷ್ಟು ಶೋಧನೆ ನಡೆಸಿ ಹೆಸರು ನೋಂದಾಯಿಸಿಕೊಳ್ಳಲಾಗಿದೆ.

ಪರಮೇಶ್ ಗುರುಸ್ವಾಮಿಯವರೇ ಈ ಶಿಬಿರದ ನಿರ್ದೇಶಕರು. ಧ್ವನಿಗ್ರಹಣ ಮತ್ತು ಸಿನೆ ಛಾಯಾಗ್ರಾಹಣದ ಬಗ್ಗೆ ಸ್ವಲ್ಪ ಆಸಕ್ತಿ ಹೆಚ್ಚು ನೀಡಲಾಗಿದೆ. ಅದರಲ್ಲೂ ಧ್ವನಿಗ್ರಹಣಕ್ಕೆ ವಿಶೇಷ ಗಮನ ನೀಡಲಾಗಿದೆ.

ಕುಪ್ಪಳಿಗೆ ತಲುಪುವರು ಬೆಂಗಳೂರಿನಿಂದ ಬರುವವರಿಗೆ ಪ್ರತಿದಿನ ರಾತ್ರಿ 10.30 ಕ್ಕೆ ಕುಪ್ಪಳಿಗೆ ನೇರವಾದ ಬಸ್ ಇದೆ. ಅದನ್ನು ಹೊರತುಪಡಿಸಿದರೆ ತೀರ್ಥಹಳ್ಳಿಗೆ ಬಂದು ಅಲ್ಲಿಂದ ಕೊಪ್ಪ ಬಸ್ ಹತ್ತಿ ಗಡಿಕಲ್ಲು ಎಂಬಲ್ಲಿ ಇಳಿಯಬೇಕು (ಬಸ್ಸಿನವರಿಗೆ ಕವಿಶೈಲಕ್ಕೆ ಹೋಗಬೇಕೆಂದರೆ ಅವರೇ ಇಳಿಸುತ್ತಾರೆ). ಅಲ್ಲಿಂದ ನಡೆದು ಬಂದರೆ ಸ್ಥಳ ಸಿಗುತ್ತದೆ.

ಮೈಸೂರಿನವರಿಗೆ ಶಿವಮೊಗ್ಗಕ್ಕೆ ಬಂದು ಕೊಪ್ಪ ಅಥವಾ ತೀರ್ಥಹಳ್ಳಿಗೆ ಬಂದು ಬಸ್ ಹಿಡಿಯುವುದು ಸೂಕ್ತ. ತೀರ್ಥಹಳ್ಳಿಗೆ ಬಂದವರು ಕೊಪ್ಪಕ್ಕೆ ಹೋಗುವ ಬಸ್ ಅನ್ನು, ಕೊಪ್ಪಕ್ಕೆ ಬಂದವರು ತೀರ್ಥಹಳ್ಲಿಯ ಬಸ್ಸನ್ನು ಹಿಡಿದು ಗಡಿಕಲ್ಲು ಎಂಬಲ್ಲಿ ಇಳಿಯಬೇಕು.

ಉಳಿದಂತೆ ಬಳ್ಳಾರಿ, ಬಾಗಲಕೋಟೆ, ಉತ್ತರ ಕರ್ನಾಟಕದಿಂದ ಬರುವವರು ಶಿವಮೊಗ್ಗಕ್ಕೆ ಬಂದು ಮೇಲೆ ಹೇಳಿದ ಬಸ್ ಹಿಡಿಯುವುದು ಉತ್ತಮ. ದಾರಿ ಬಗ್ಗೆ ಗೊಂದಲವಾದರೆ 94805 82027, 94481 54298, 94807 97113.